ಟೆಸ್ಟ್ , ಟ್ರ್ಯಾಕ್, ಟ್ರೀಟ್ ಮೂರನ್ನೂ ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ: ಕಾಂಗ್ರೆಸ್ ಟೀಕೆ
ಟೆಸ್ಟ್ , ಟ್ರ್ಯಾಕ್, ಟ್ರೀಟ್ ಮೂರನ್ನೂ ರಾಜ್ಯ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ಆತಂಕಕಾರಿಯಾಗಿ ಹರಡುತ್ತಿದ್ದರೂ ಟೆಸ್ಟ್ , ಟ್ರ್ಯಾಕ್, ಟ್ರೀಟ್ ಮೂರನ್ನೂ ರಾಜ್ಯ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್
ಈ ಕುರಿತು ತನ್ನ ಟ್ವೀಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬೆಂಗಳೂರಿನಿಂದ ಹಳ್ಳಿಗಳಿಗೆ ತೆರಳುವವರಿಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಿಲ್ಲ. ತೆರಳಿದವರಿಗೆ ಊರುಗಳಲ್ಲಿ ಟೆಸ್ಟಿಂಗ್ ಹಾಗೂ ಐಸೋಲೇಶನ್ ನಿಯಮ ರೂಪಿಸಿಲ್ಲ. ಸುಧಾಕರ್ ಅವರೇ, ಕೂಡಲೇ ಗ್ರಾಮೀಣ ಭಾಗದತ್ತ ಗಮನ ಹರಿಸಿ ಸೋಂಕು ಹರಡಂತೆ ತಡೆಗಟ್ಟಿ ಎಂದು ಒತ್ತಾಯಿಸಿದೆ.
ಊರುಗಳತ್ತ ತೆರಳುತ್ತಿರುವ ಕಾರ್ಮಿಕರು, ತಮ್ಮೊಂದಿಗೆ ಸೋಂಕನ್ನು ಕೂಡಾ ಕೊಂಡೊಯ್ಯುತ್ತಿದ್ದಾರೆ. ಹಣದ ನೆರವು, ಆಹಾರದ ಭದ್ರತೆ ನೀಡಿ, ಇದ್ದಲ್ಲಿಯೇ ಉಳಿಸಬಹುದಾದ ಅವಕಾಶವನ್ನು ಸರ್ಕಾರ ಬಳಸಲಿಲ್ಲ. ಊರಿಗೆ ತೆರಳುವವರಿಗೆ ಬಸ್ ವ್ಯವಸ್ಥೆ ಜೊತೆಗೆ ಸೋಂಕು ಪರೀಕ್ಷೆ, ಐಸೋಲೇಶನ್ ನಿಯಮ ರೂಪಿಸದಿರುವುದು ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


