ರಾಜಕೀಯ

ಶಿರಾ ಉಪಚುನಾವಣಾ ಪ್ರಚಾರಕ್ಕೆ ಸಿಎಂ ಬಿಎಸ್ ವೈ ಎಂಟ್ರಿ: ಬಿಜೆಪಿ ಅಭ್ಯರ್ಥಿ, ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿ

ಶಿರಾ ಉಪ ಚುನಾವಣಾ ಕಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಬಾರಿಗೆ ಧುಮುಕುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಸಿಎಂ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಶಿರಾ ಉಪಚುನಾವಣಾ ಪ್ರಚಾರಕ್ಕೆ ಸಿಎಂ ಬಿಎಸ್ ವೈ ಎಂಟ್ರಿ: ಬಿಜೆಪಿ ಅಭ್ಯರ್ಥಿ, ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿ
ಯಡಿಯೂರಪ್ಪ
Published On :

ಬೆಂಗಳೂರು: ಶಿರಾ ಉಪ ಚುನಾವಣಾ ಕಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಬಾರಿಗೆ ಧುಮುಕುತ್ತಿದ್ದಾರೆ.  ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಸಿಎಂ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಡಾ.ರಾಜೇಶ್ ಗೌಡ ಅವರಿಗಿಂತ ಟಿಬಿ ಜಯಚಂದ್ರ ಮುಂದಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ, ಆದರೆ ಕೇವಲ 3 ಸಾವಿರ ಮತಗಳ ಅಂತರ ಮಾತ್ರ,

ಆರಂಭದಲ್ಲಿ, ಬಿಜೆಪಿ ತನ್ನ ಮತ ಪಾಲನ್ನು ಪಡೆಯುತ್ತಿದೆ ಎಂದು ಕಂಡುಬಂದರೂ ಈಗ ನೇರ ಹಣಾಹಣಿಗೆ ಸಿದ್ದವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಮೂರನೇ ಸ್ಥಾನದಲ್ಲಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೇ ವರ್ಗದ ಮತದಾರರಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಬಿಜೆಪಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

ಶಿರಾ ಕ್ಷೇತ್ರದಲ್ಲಿ ಕುಂಚಿಟಿಗ ಒಕ್ಕಲಿಗರು ಅಪಾರ ಪ್ರಮಾಣದಲ್ಲಿದ್ದು ಮೂರು ಅಭ್ಯರ್ಥಿಗಳು ಮತಗಳು ವಿಭಜನೆಯಾಗಲಿವೆ, ಆದರೂ ಜಯಚಂದ್ರ ಪರ ಗಣನೀಯ ಮತದಾರರಿದ್ದಾರೆ. ಹುಲಿಕುಂಟೆ ಹೋಬಳಿಯಲ್ಲಿ ರಾಜೇಶ್ ಗೌಡ ಕುಟುಂಬದ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಅದ್ಭುತ ಬೆಂಬಲ ರಾಜೇಶ್ ಗೌಡ ಅವರಿಗಿದೆ. ಇಲ್ಲಿ ಅಮ್ಮಾಜಮ್ಮ ಅವರಿಗೆ ಅಧಿಕ ಬೆಂಬಲ ಇರುವ ಕಾರಣ ಜಯಚಂದ್ರ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕೊರೋನಾ ಕಾರಣದಿಂದಾಗಿ ಅಮ್ಮಾಜಮ್ಮ ತಡವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರು.  ಅಮ್ಮಾಜಮ್ಮ ಪರ ಮಾಜಿ ಪಿಎಂ ದೇವೇಗೌಡ ಮತ್ತು ಕುಮಾರಸ್ವಾಮಿ ಸಂಸದ ಪ್ರಜ್ವಲ್ ರೇವಣ್ಣ ಪ್ರಚಾರ ಮಾಡುತ್ತಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದವರು ಈ ಮೂರೂ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾರೆ,ಅದರಲ್ಲಿ  ಜಯಚಂದ್ರ ಸ್ವಲ್ಪ ಹೆಚ್ಚು ಬೆಂಬಲವಿದೆ, ಇಲ್ಲಿರುವ ಇತರ ಪ್ರಮುಖ ಸಮುದಾಯವೆಂದರೆ ಕುರುಬರು, ಸಿದ್ದರಾಮಯ್ಯನನ್ನು ತಮ್ಮ ನಾಯಕ ಎಂದು ಪರಿಗಣಿಸುತ್ತಾರೆ.

ಹಲವಾರು ಉಪ ಪಂಗಡಗಳನ್ನು ಹೊಂದಿರುವ ಪರಿಶಿಷ್ಟ ಜಾತಿಗಳು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿಸುತ್ತವೆ.. ಆದರೆ ಬಿಜೆಪಿ ನಾಯಕರು ಹಳ್ಳಿಗಳಿಗೆ ತೆರಳಿ ಸಭೆಗಳನ್ನು ನಡೆಸುತ್ತಿದ್ದಾರೆ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಹಾದಿಯಲ್ಲಿ ಬಿಸಿಯಾಗಿದ್ದಾರೆ.

ಲಿಂಗಾಯತರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ, ಮತ್ತು ಕೇಸರಿ ಪಕ್ಷಕ್ಕೆ ಈ ಸಮುದಾಯದಿಂದ ಯಾವುದೇ ತೊಂದರೆ ಇಲ್ಲ, ಹೀಗಾಗಿ ಲಿಂಗಾಯತ ಮನವೊಲಿಕೆಗೆ ಬಿಜೆಪಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಳೆದ ಬಾರಿ ಸೋತಿದ್ದ ಜಯಚಂದ್ರ ಈ ಸಲ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಒಂದು ವೇಳೆ ಈ ಚುನಾವಣೆಯಲ್ಲಿ ಸೋತರೆ ಮುಂದೆ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದಿಲ್ಲ ಎಂಬುದು ಬಹಿರಂಗವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.