ಖುಷ್ಬೂ ನಿರ್ಗಮನದಿಂದ ರಾಜ್ಯ ಕಾಂಗ್ರೆಸ್ ಮೇಲೆ ಪರಿಣಾಮ ಬೀರಲಿದೆಯೇ?
ಎಐಸಿಸಿ ವಕ್ತಾರೆ ಸ್ಥಾನಕ್ಕೆ ನಟಿ ಖುಷ್ಬೂ ಸುಂದರ್ ಅವರ ರಾಜೀನಾಮೆಯಿಂದ ರಾಜ್ಯದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರಲಿದೆಯೇ? ಎಂಬುದು ಸ್ಥಳೀಯ ಮುಖಂಡರನ್ನು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.

ಬೆಂಗಳೂರು: ಎಐಸಿಸಿ ವಕ್ತಾರೆ ಸ್ಥಾನಕ್ಕೆ ನಟಿ ಖುಷ್ಬೂ ಸುಂದರ್ ಅವರ ರಾಜೀನಾಮೆಯಿಂದ ರಾಜ್ಯದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರಲಿದೆಯೇ? ಎಂಬುದು ಸ್ಥಳೀಯ ಮುಖಂಡರನ್ನು ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ.
ಕೆಲ ರಾಜಕೀಯ ವಿಶ್ಲೇಷಕರು ಇದನ್ನು ರೋಷನ್ ಬೇಗ್ ಅವರ ಸ್ಥಿತಿಗೂ ಹೋಲಿಸಿ ನೋಡುತ್ತಾರೆ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಆಗಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ವಿರುದ್ಧ ಮಾತನಾಡಿದ್ದ ರೋಶನ್ ಬೇಗ್ ಅವರಿಗೆ ನೋಟಿಸ್ ನೀಡಲಾಗಿತ್ತು. ಪ್ರತಿಕ್ರಿಯೆ ನೀಡಲು ನಿರಾಕರಿಸಿ ರೋಶನ್ ಬೇಗ್ ಪಕ್ಷ ತೊರೆದಿದ್ದರು.
ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ 14 ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು.ಈ ಶಾಸಕರು ಮತ್ತು ಖುಷ್ಬೂ ಅಂತಹವರ ನಿರ್ಗಮನಕ್ಕೆ ಪಕ್ಷದೊಳಗಿನ ಗೊಂದಲ, ಹತಾಶೆ, ಪ್ರೋತ್ಸಾಹ ನೀಡದಿರುವುದು ಕಾರಣವಾಗಿದೆ ಎಂಬ ಅಂಶ ಪ್ರಧಾನವಾಗಿದೆ.
ಇದು ತಕ್ಷಣ ಯಾವುದೇ ಪರಿಣಾಮ ಬೀರಲ್ಲ, ಇನ್ನಷ್ಟು ಮಂದಿ ಪಕ್ಷ ತೊರೆಯಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ. ಪಕ್ಷದ ನಿರ್ವಹಣೆ ಮಾಡುವವರಿಂದ ಬೇಸತ್ತು ಕಳೆದ ವರ್ಷ ಬಿಜೆಪಿ ಸೇರಿದ್ದಾಗಿ ಮಾಜಿ ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕನ್ ಹೇಳುತ್ತಾರೆ.
ಆದರೆ, ಇಂತಹ ಅಂಶಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನಿರಾಕರಿಸಿದ್ದು, ಇದನ್ನು ಪಕ್ಷದ ಆಂತರಿಕವಾಗಿ ಬಗೆಹರಿಸಿಕೊಳ್ಳಬಹುದಾಗಿತ್ತು. ಇಂತಹ ನಾಯಕರಿಗೆ ಕೆಲವು ಕಡೆಗಳಿಂದ ಒತ್ತಡ ಇರುತ್ತದೆ. ಅವರ ತತ್ವ ಸಿದ್ದಾಂತಗಳು ಈಗ ಏನಾಗಿವೆ? ಇದು ಜನರ ನಂಬಿಕೆಗೆ ಬಗೆದ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


