ರಾಜಕೀಯ

ನನಗೂ ಸಾಕಾಗಿ ಹೋಗಿದೆ, ಇನ್ನು ಯಾವ ರೀತಿ ಮಾಹಿತಿ ಕೇಳಲಿ?: ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪ್ರಶ್ನೆ

ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಸಲಕರಣೆಗಳ ಖರೀದಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದಾಗಿ ಹೇಳಿರುವುದು ಕೇಳಿ ಅಚ್ಚರಿಯಾಯಿತು. ಮಾಹಿತಿ ಕೇಳಿ ನಾನು ಬರೆದ ಕೊನೆಯ ಪತ್ರ ಈ ತಿಂಗಳ ಹತ್ತರಂದು ನಿಮ್ಮ ಕಚೇರಿ ತಲುಪಿದೆ.

ನನಗೂ ಸಾಕಾಗಿ ಹೋಗಿದೆ, ಇನ್ನು ಯಾವ ರೀತಿ ಮಾಹಿತಿ ಕೇಳಲಿ?: ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪ್ರಶ್ನೆ
ಯಡಿಯೂರಪ್ಪ-ಸಿದ್ದರಾಮಯ್ಯ
Published On :

ಬೆಂಗಳೂರು: ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಸಲಕರಣೆಗಳ ಖರೀದಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದಾಗಿ ಹೇಳಿರುವುದು ಕೇಳಿ ಅಚ್ಚರಿಯಾಯಿತು.  ಮಾಹಿತಿ ಕೇಳಿ ನಾನು ಬರೆದ ಕೊನೆಯ ಪತ್ರ ಈ ತಿಂಗಳ ಹತ್ತರಂದು ನಿಮ್ಮ ಕಚೇರಿ ತಲುಪಿದೆ. ಇನ್ನು ಯಾವ ರೀತಿ ಮಾಹಿತಿ ಕೇಳಲಿ? ಎಂದು ವಿಧಾನಸಭೆಯ ವಿರೋಧ ಪಕ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಗೆ ಟ್ವೀಟ್ ಮೂಲಕ ಕೇಳಿದ್ದಾರೆ.

ಇಂದು ಮುಖ್ಯಮಂತ್ರಿ ನಾಡಿನ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಹಕಾರ ನೀಡಬೇಕು, ನೀವು ಕೇಳುವ ಎಲ್ಲಾ ಮಾಹಿತಿ ನೀಡಲು ಸಿದ್ಧ ಎಂದು ಹೇಳಿದ್ದರು. ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿಗೆ  ಮಾಹಿತಿ ಕೇಳಿ ಬರೆದ ಪತ್ರವನ್ನೂ ಅಪ್‌ಲೋಡ್ ಮಾಡಿದ್ದಾರೆ.

ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಸಲಕರಣೆಗಳನ್ನು ಯಾವ ಯಾವ ಇಲಾಖೆಗಳ ಮೂಲಕ ಖರೀದಿ ಮಾಡಲಾಗಿದೆ? ಅವುಗಳನ್ನು ಎಲ್ಲೆಲ್ಲಿ ಬಳಕೆ ಮಾಡಲಾಗಿದೆ? ಮಾಡಿರುವ ವೆಚ್ಚ ಎಷ್ಟು? ಇದಕ್ಕೆ ಟೆಂಡರ್ ಕರೆಯಲಾಗಿದೆಯೇ? ಕೊಟೇಷನ್ ಪಡೆಯಲಾಗಿದೆಯೇ? ಮುಖ್ಯಮಂತ್ರಿಯವರೇ 24 ಗಂಟೆಯೊಳಗೆ ಈ ಮಾಹಿತಿ ನೀಡಬಹುದೇ? ಎಂದು ಸಿದ್ದರಾಮಯ್ಯ ಇನ್ನೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.