ರಾಜಕೀಯ

ನಿವೃತ್ತಿ ಹೊಂದಿದ 16 ಮಂದಿ ವಿಧಾನ ಪರಿಷತ್ ಸದಸ್ಯರಿಗಿಂದು ಬೀಳ್ಕೊಡುಗೆ

ರಾಜ್ಯ ವಿಧಾನ ಪರಿಷತ್'ನ 16 ಮಂದಿ ಸದಸ್ಯರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ವಿಧಾನಸೌಧದ ಉಭಯ ಸದನಗಳಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ನಿವೃತ್ತಿ ಹೊಂದಿದ 16 ಮಂದಿ ವಿಧಾನ ಪರಿಷತ್ ಸದಸ್ಯರಿಗಿಂದು ಬೀಳ್ಕೊಡುಗೆ
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯ ವಿಧಾನ ಪರಿಷತ್'ನ 16 ಮಂದಿ ಸದಸ್ಯರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ವಿಧಾನಸೌಧದ ಉಭಯ ಸದನಗಳಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. 

ವಿಧಾನಸಭೆಯಿಂದ ಆಯ್ಕೆಯಾಗಿರುವ 7, ನಾಮ ನಿರ್ದೇಶನಗೊಂಡಿರುವ 5 ಮತ್ತು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ತಲಾ 2 ಸ್ಥಾನಗಳು ತೆರವುಗೊಂಡಿವೆ. 

ವಿಧಾನಸಭೆ ವಿಧಾನ ಪರಿಷತ್'ಗೆ ಆಯ್ಕೆಯಾಗಿರುವ ಜಯಮ್ಮ ಬೋಸರಾಜ್, ಹೆಚ್.ಎಂ.ರೇವಣ್ಣ ನಸೀರ್ ಅಹ್ಮದ್, ಎಂ.ಸಿ.ವೇಣುಗೋಪಾಸ್, ಟಿ.ಎ.ಶವರಣ, ಡಿಯು ಮಲ್ಲಿಕಾರ್ಜುನ, ನಾಮ ನಿರ್ದೇಶನಗೊಂಡಿರುವ ಜಯಮಾಲಾ ರಾಮಚಂದ್ರ, ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜಾ, ಇಕ್ಬಾಲ್ ಅಹಮ್ಮದ್ ಸರಡಗಿ, ತಿಪ್ಪಣ್ಣ ಕಮಕನೂರ್, ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಚೌಡರೆಡ್ಡಿ ತೂಪ್ಪಿ, ಎಸ್.ವಿ.ಸಂಕನೂರು ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಪುಟ್ಟಣ್ಣ, ಶರಣಪ್ಪ ಮಟ್ಟೂರು ನಿವೃತ್ತರಾಗಿದ್ದಾರೆ. 

ನಿವೃತ್ತರಾಗಿರುವ 16 ಎಂಎಲ್'ಸಿ ಗಳಿಗೆ ಉಭಯ ಸದನಗಳಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬೀಳ್ಕೊಡುಗೆ ವೇಳೆ ಫೋಟೋಶೂಟ್ ನಡೆಯಲಿದೆ. ಈ ಫೋಟೋ ಶೂಟ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಉಭಯ ಸದನಗಳ ನಾಯಕರು ಭಾಗಿಯಾಗಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.