ರಾಜಕೀಯ

ರಾಮನಗರಕ್ಕೆ ನವ ಬೆಂಗಳೂರು ನಾಮಕರಣ ವಿಚಾರ: ಪೆನ್ನು ಪೇಪರು ಇದ್ದವರು ಬರೆದುಕೊಳ್ಳಲಿ ಎಂದು ಡಿಕೆಶಿ ಆಕ್ರೋಶ

ರಾಮನಗರಕ್ಕೆ ಸರ್ಕಾರದಿಂದ ನವ ಬೆಂಗಳೂರು ಮರುನಾಮಕರಣ ಚಿಂತನೆ ಕುರಿತು ಪ್ರತಿಕ್ರಿಯಿಸಿರುವ ಕನಕಪುರ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ಬಿಜೆಪಿಯವರ ಕೈಯಲ್ಲಿ ಪೆನ್ನು, ಪೇಪರು ಇದೆ. ಅವರು ಯಾವ ರೀತಿಯಲ್ಲಾದರೂ ಬರೆದುಕೊಳ್ಳಬಹುದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ರಾಮನಗರಕ್ಕೆ ನವ ಬೆಂಗಳೂರು ನಾಮಕರಣ ವಿಚಾರ: ಪೆನ್ನು ಪೇಪರು ಇದ್ದವರು ಬರೆದುಕೊಳ್ಳಲಿ ಎಂದು ಡಿಕೆಶಿ ಆಕ್ರೋಶ
ಡಿಕೆ ಶಿವಕುಮಾರ್
Published On :

ಬೆಂಗಳೂರು: ರಾಮನಗರಕ್ಕೆ ಸರ್ಕಾರದಿಂದ ನವ ಬೆಂಗಳೂರು ಮರುನಾಮಕರಣ ಚಿಂತನೆ ಕುರಿತು ಪ್ರತಿಕ್ರಿಯಿಸಿರುವ ಕನಕಪುರ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ  ಡಿ.ಕೆ.ಶಿವಕುಮಾರ್, ಬಿಜೆಪಿಯವರ ಕೈಯಲ್ಲಿ ಪೆನ್ನು, ಪೇಪರು ಇದೆ. ಅವರು ಯಾವ ರೀತಿಯಲ್ಲಾದರೂ ಬರೆದುಕೊಳ್ಳಬಹುದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ  ನಗರದಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲೀಗ ಬಿಜೆಪಿ ಆಡಳಿತವಿದೆ‌. ಅಧಿಕಾರವೂ ಅವರ  ಕೈಯಲ್ಲಿಯೇ ಇದೆ. ಹೀಗಾಗಿ ಅವರು ತಮಗೆ ಅನುಕೂಲವಾಗುವಂತೆ ಏನೂ ಬೇಕಾದರೂ  ಬರೆದುಕೊಳ್ಳಬಹುದು. ಕಮಲದ ನಾಯಕರಿಗೆ ಬೇಕಾದ ರೀತಿಯಲ್ಲಿ ತೀರ್ಮಾನ ಕೈಗೊಳ್ಳಬಹುದು. ಆಲ್  ದಿ ಬೆಸ್ಟ್ ಎಂದರು.

ರಾಮನಗರಕ್ಕೆ ಮರುನಾಮಕರಣದ ಬಗ್ಗೆ ಇದುವರೆಗೆ ಯಾರೂ ಸಹ   ತಮ್ಮನ್ನು ಸಂಪರ್ಕಿಸಿಲ್ಲ.  ಈ ಹಿಂದೆ ರಾಮನಗರವನ್ನು  ಬೆಂಗಳೂರು ದಕ್ಷಿಣ ಎಂದು‌  ಪರಿಗಣಿಸಲು ಸಲಹೆ ನೀಡಿದ್ದೆ.‌ ರಾಮನಗರದಲ್ಲಿ ನಾಲ್ಕು‌ ಶಾಸಕರಿದ್ದೇವೆ. ಈ ಬಗ್ಗೆ  ಸರ್ಕಾರ ಯಾವ ರೀತಿಯ ತೀರ್ಮಾನ ಪ್ರಕಟಿಸುತ್ತದೆಯೋ ಎನ್ನುವುದನ್ನು ಕಾದು ನೋಡಬೇಕು ಎಂದು  ಶಿವಕುಮಾರ್‌ ಹೇಳಿದರು.

ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದ್ದು, ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪ ಅವರ ಬಳಿ ಬಿಜೆಪಿ ನಾಯಕರು ಮರುನಾಮಕರಣ ವಿಚಾರವಾಗಿ  ಪ್ರಸ್ತಾಪವಿಟ್ಟಿದ್ದಾರೆ ಎನ್ನಲಾಗಿದೆ. ರಾಮನಗರದ ಸಮಗ್ರ ಅಭಿವೃದ್ಧಿಯ ಜೊತೆಗೆ  ಐಟಿ-ಬಿಟಿ ಹಾಗೂ ಹೂಡಿಕೆದಾರರನ್ನು ಜಿಲ್ಲೆಯತ್ತ ಸೆಳೆಯುವುದರ ಮೂಲಕ ಇಂಡಸ್ಟ್ರೀಯಲ್ ಹಬ್  ಸೃಷ್ಟಿಸುವುದು ಮರುನಾಮಕರಣದ ಉದ್ದೇಶವಾಗಿದೆ ಎನ್ನಲಾಗಿದೆ.

ರಾಮನಗರ ಸೇರಿದಂತೆ ಐದು  ತಾಲೂಕುಗಳನ್ನು ನವ ಬೆಂಗಳೂರಿಗೆ ಸೇರಿಸಲು ಚಿಂತನೆ ನಡೆಸಲಾಗಿದೆ. ಬೆಂಗಳೂರು  ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ ತಾಲೂಕುಗಳನ್ನು ಸೇರಿಸಿಕೊಳ್ಳಬೇಕೋ ಬೇಡವೋ  ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.