ರಾಜಕೀಯ

ಆರೋಪಗಳಿದ್ದ ತಮ್ಮನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾದರೂ ಏಕೆ: ಆನಂದ್ ಸಿಂಗ್

ತಮ್ಮ ಮೇಲಿನ ಆರೋಪಗಳು ಇಂದು ನಿನ್ನೆಯದಲ್ಲ. ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋದಾಗಲೂ ಇದ್ದವು. ಆರೋಪಗಳನ್ನು ಹೊತ್ತ ಕಾಂಗ್ರೆಸ್ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತಾದರೂ ಏಕೆ ? ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಕಾಂಗ್ರೆಸಿಗೆ ತಿರುಗೇಟು ನೀಡಿದ್ದಾರೆ

ಆರೋಪಗಳಿದ್ದ ತಮ್ಮನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾದರೂ ಏಕೆ: ಆನಂದ್ ಸಿಂಗ್
ಆನಂದ್ ಸಿಂಗ್
Published On :

ಬೆಂಗಳೂರು: ತಮ್ಮ  ಮೇಲಿನ ಆರೋಪಗಳು ಇಂದು ನಿನ್ನೆಯದಲ್ಲ. ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋದಾಗಲೂ  ಇದ್ದವು. ಆರೋಪಗಳನ್ನು ಹೊತ್ತ ಕಾಂಗ್ರೆಸ್ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತಾದರೂ ಏಕೆ ? ಎಂದು ಅರಣ್ಯ  ಸಚಿವ ಆನಂದ್ ಸಿಂಗ್ ಕಾಂಗ್ರೆಸಿಗೆ ತಿರುಗೇಟು ನೀಡಿದ್ದಾರೆ

ಸುದ್ದಿಗಾರರೊಂದಿಗೆ  ವಿಧಾನಸೌಧದಲ್ಲಿ ಮಾತನಾಡಿದ ಅವರು, ತಮ್ಮ ಮೇಲೆ ಆರೋಪಗಳಿವೆ ಎಂದು ಈಗ ವಿರೋಧಿಸುತ್ತಿರುವ  ಕಾಂಗ್ರೆಸ್ ನಾಯಕರು ಹಿಂದೆ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ  ಎನ್ನಬೇಕಿತ್ತು ಎಂದು ಕುಟುಕಿದರು.

ತಮ್ಮ ಮೇಲಿರುವ ಆರೋಪಗಳು ಸಾಬೀತಾಗಿಲ್ಲ. ಅನೇಕ ಪ್ರಕರಣಗಳು ಖುಲಾಸೆ ಆಗಿವೆ ಎಂದು ಆನಂದ್ ಸಿಂಗ್ ಸಮಜಾಯಿಷಿ ನೀಡಿದರು.

ಕೃಷಿ  ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ನಾನು ಸವಾಲನ್ನು ಎದುರಿಸಿ ಗೆಲುವು  ಸಾಧಿಸಿದ್ದೇನೆ. ಕಾಂಗ್ರೆಸ್ ನಾಯಕರು ನನ್ನನ್ನು ಅನರ್ಹರನ್ನಾಗಿ ಮಾಡಿದ್ದರು.ಈಗ ಚುನಾವಣೆ  ಎದುರಿಸಿ ಜನಾಭಿಪ್ರಾಯ ಪಡೆದು ಅರ್ಹನಾಗಿ ಸಚಿವನಾಗಿ ವಿಧಾನಸಭೆ  ಪ್ರವೇಶಿಸುತ್ತಿದ್ದೇನೆ.ಸವಾಲು ಗೆದ್ದ  ಖುಷಿಯಾಗುತ್ತಿದೆ. ಪ್ರತಿಪಕ್ಷದವರನ್ನು ಎದುರಿಸಲು ಸನ್ನದ್ಧವಾಗಿದ್ದೇವೆ. ಅದಕ್ಕೆ ಯಾವ ತಯಾರಿಯೂ ಅಗತ್ಯವಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.