ರಾಜಕೀಯ

ಪಕ್ಷದ್ರೋಹಿಗಳು ಎಂದಿಗೂ ಅನರ್ಹರೇ-ಸಿದ್ದರಾಮಯ್ಯ

ಪಕ್ಷದ್ರೋಹಿಗಳು ಎಂದಿಗೂ ಅನರ್ಹರೇ. ಕಾಂಗ್ರೆಸ್ ಗೆ ದ್ರೋಹ ಬಗೆದವರಿಗೆ ಮಂತ್ರಿಸ್ಥಾನ ಸಿಕ್ಕ ಮಾತ್ರಕ್ಕೆ ಅವರ ಅನರ್ಹ ಹಣೆಪಟ್ಟಿ ಅಳಿಸಿಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ

ಪಕ್ಷದ್ರೋಹಿಗಳು ಎಂದಿಗೂ ಅನರ್ಹರೇ-ಸಿದ್ದರಾಮಯ್ಯ
ಸಿದ್ದರಾಮಯ್ಯ
Published On :

ಮೈಸೂರು: ಪಕ್ಷದ್ರೋಹಿಗಳು ಎಂದಿಗೂ ಅನರ್ಹರೇ. ಕಾಂಗ್ರೆಸ್ ಗೆ ದ್ರೋಹ ಬಗೆದವರಿಗೆ ಮಂತ್ರಿಸ್ಥಾನ ಸಿಕ್ಕ ಮಾತ್ರಕ್ಕೆ ಅವರ ಅನರ್ಹ ಹಣೆಪಟ್ಟಿ ಅಳಿಸಿಹೋಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ

ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​​​ ತೊರೆದ ಪಕ್ಷ ದ್ರೋಹಿಗಳು ಯಾವುದೇ ಸರ್ಕಾರದಲ್ಲಿ ಮಂತ್ರಿಯಾದರೂ ಅನರ್ಹರೇ, ಪಕ್ಷ ದ್ರೋಹಿಗಳು ಮಂತ್ರಿಯಾಗಿದ್ದು  ಖುಷಿ ವಿಚಾರವಲ್ಲ. ಮಂತ್ರಿಯಾದ ಮಾತ್ರಕ್ಕೆ ಅವರು ಅರ್ಹರಲ್ಲ, ಕಾನೂನಿನ ಪ್ರಕಾರ ಎಂದಿಗೂ ಅವರೆಲ್ಲ ಅನರ್ಹರೇ ಎಂದು ಕಿಡಿಕಾರಿದರು.

ಯಡಿಯೂರಪ್ಪ ದಿಲ್ಲಿಗೆ ಕಳುಹಿಸಿದ್ದ ಪಟ್ಟಿಗೆ ಬಿಜೆಪಿ ವರಿಷ್ಠರು ಒಪ್ಪಿಗೆ ನೀಡಿಲ್ಲ. ಯಡಿಯೂರಪ್ಪ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ಪೂರ್ತಿಯಾಗಿಲ್ಲ. ಇನ್ನೂ ಆರು ಖಾತೆಗಳು ಬಾಕಿ ಉಳಿದಿದ್ದು, ಅವರನ್ನು ನೋಡಿದರೆ ಕರುಣೆ ಬರುತ್ತದೆ. ತಮಗೆ ಬೇಕಾದವರನ್ನು  ಮಂತ್ರಿ ಮಾಡುವ ಸ್ವಾತಂತ್ರ್ಯ ಯಡಿಯೂರಪ್ಪ ಅವರಿಗೆ ಇಲ್ಲ. ನೂತನ ಸಚಿವರು ಪಕ್ಷ ದ್ರೋಹಿಗಳು‌. ಅವರು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರಣಕ್ಕಾಗಿ ಶುಭಾಶಯ ಕೋರುತ್ತಿದ್ದೇನೆ ಅಷ್ಟೇ  ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.