ಆಹಾರ ಪೊಟ್ಟಣ ವಿತರಣೆಯಲ್ಲಿ ರಾಜಕೀಯ: ಸಿದ್ದರಾಮಯ್ಯ ಆಕ್ರೋಶ
ನಮ್ಮ ನಿರಂತರ ದೂರುಗಳ ನಂತರವೂ ಬಡವರಿಗಾಗಿ ಸರ್ಕಾರ ಹಮ್ಮಿಕೊಂಡಿರುವ ಆಹಾರ ಪೊಟ್ಟಣ/ ಆಹಾರ ಸಾಮಗ್ರಿಗಳ ವ್ಯಾಂಪರ್ಸ್ ವಿತರಣೆಯನ್ನು ಬಿಜೆಪಿ ಶಾಸಕರು ಮತ್ತು ನಾಯಕರು ಪಕ್ಷದ ಕಾರ್ಯಕ್ರಮವಾಗಿ ನಡೆಸುತ್ತಿದ್ದಾರೆ. ಈ ರಾಜಕೀಯ ದುರುಪಯೋಗವನ್ನು ನಿಲ್ಲಿಸದೆ ಇದ್ದರೆ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಬೆಂಗಳೂರು: ಬಡವರಿಗಾಗಿ ಸರ್ರಾಕ ಹಮ್ಮಿಕೊಕಂಡಿರುವ ಆಹಾರ ಪೊಟ್ಟಣ ವಿತರಣೆಯನ್ನು ಬಿಡೆಪಿ ನಾಯಕರು ಪಕ್ಷದ ಕಾರ್ಯಕ್ರಮವಾಗಿ ನಡೆಸುತ್ತಿದ್ದಾರೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಮ್ಮ ನಿರಂತರ ದೂರುಗಳ ನಂತರವೂ ಬಡವರಿಗಾಗಿ ಸರ್ಕಾರ ಹಮ್ಮಿಕೊಂಡಿರುವ ಆಹಾರ ಪೊಟ್ಟಣ/ ಆಹಾರ ಸಾಮಗ್ರಿಗಳ ವ್ಯಾಂಪರ್ಸ್ ವಿತರಣೆಯನ್ನು ಬಿಜೆಪಿ ಶಾಸಕರು ಮತ್ತು ನಾಯಕರು ಪಕ್ಷದ ಕಾರ್ಯಕ್ರಮವಾಗಿ ನಡೆಸುತ್ತಿದ್ದಾರೆ. ಈ ರಾಜಕೀಯ ದುರುಪಯೋಗವನ್ನು ನಿಲ್ಲಿಸದೆ ಇದ್ದರೆ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನಾಯಕರ ಹಸ್ತಕ್ಷೇಪದಿಂದಾಗಿ ವಾಹನ ಮತ್ತು ವಾಹನ ಚಾಲಕರ ಪಾಸ್ ವಿತರಣೆ ಪಾರದರ್ಶಕವಾಗಿ ನಡೆಯದೆ ದುರುಪಯೋಗವಾಗುತ್ತಿದೆ. ಲಾಕ್ ಡೌನ್ ಇದ್ದರೂ ನಗರದಲ್ಲಿನ ವಾಹನದಟ್ಟಣೆಗೆ ಬೇಕಾಬಿಟ್ಟಿ ಪಾಸ್ ವಿತರಣೆ ಕಾರಣ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ, ಆಡಳಿತವನ್ನು ನಿಮ್ಮ ಪಕ್ಷಕ್ಕೆ ಹೊರಗುತ್ತಿಗೆ ಮಾಡಿದ್ದೀರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


