ಸರ್ಕಾರದ ಪರಿಹಾರ ಸಾಮಾಗ್ರಿಗಳ ಮೇಲೆ ಪೋಟೋ: ಪ್ರಚಾರ ಗೀಳಿಗೆ ಕುಮಾರಸ್ವಾಮಿ ಕೆಂಡ
ಸಂಕಟದಿಂದ ಹೇಗೆ ಪಾರಾಗುವುದೆಂದು ಇಡೀ ಜಗತ್ತು ಚಿಂತಿಸುತ್ತಿದ್ದರೆ, ಬಿಜೆಪಿಯ ಕೆಲ ನಾಯಕರುಗಳು ಸರಕಾರದ ಪರಿಹಾರ ಸಾಮಗ್ರಿ ಮೇಲೆ ತಮ್ಮ ಫೋಟೋ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಬೆಂಗಳೂರು: ಸಂಕಟದಿಂದ ಹೇಗೆ ಪಾರಾಗುವುದೆಂದು ಇಡೀ ಜಗತ್ತು ಚಿಂತಿಸುತ್ತಿದ್ದರೆ, ಬಿಜೆಪಿಯ ಕೆಲ ನಾಯಕರುಗಳು ಸರಕಾರದ ಪರಿಹಾರ ಸಾಮಗ್ರಿ ಮೇಲೆ ತಮ್ಮ ಫೋಟೋ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದೇನು ಜನಸಾಮಾನ್ಯರಿಗೆ ಸರಕಾರ ನೀಡುವ ಪರಿಹಾರ ಸಾಮಗ್ರಿಯೋ? ಬಿಜೆಪಿ ಪಕ್ಷದ ಕೊಡುಗೆಯೋ? ಅಥವಾ ಲಿಂಬಾವಳಿಯವರ ವೈಯಕ್ತಿಕ ದಾನವೋ? ಅಥವಾ ಲಜ್ಜೆಗೇಡಿ ರಾಜಕಾರಣವೋ? ಪ್ರಧಾನಿ ಮೋದಿ ಮತ್ತು ಸನ್ಮಾನ್ಯ ಯಡಿಯೂರಪ್ಪ ಉತ್ತರ ಹೇಳುವರೇ? ಎಂದು ಕುಟುಕಿದ್ದಾರೆ.
ಒಂದು ಸಮುದಾಯವನ್ನು ಕೊರೋನ ಮಹಾಮಾರಿಗೆ ಸಮೀಕರಿಸುವವರ ಬಗ್ಗೆ ದಿವ್ಯ ಮೌನ ತಳೆದ ಪ್ರಧಾನಿಗಳು ಬಡ ಕಾರ್ಮಿಕರ ಪರಿಹಾರ ಸಾಮಗ್ರಿಯನ್ನು ಕೆಲ ಪ್ರಚಾರಪ್ರಿಯರು ತಮ್ಮ ಫೋಟೋ ಸ್ಟಿಕರ್ ಅಂಟಿಸಿ ನೀಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


