ರಾಜಕೀಯ

ಯಡಿಯೂರಪ್ಪ ತಂತಿ ಮೇಲಿಂದಲೇ ಪ್ರವಾಹ ಸಂತ್ರಸ್ತರ ಕಡೆಗೆ ನೋಡಲಿ: ಕುಮಾರಸ್ವಾಮಿ

ಮೈತ್ರಿ ಸರ್ಕಾರದ ಅತೃಪ್ತರನ್ನು ಅಡ್ಡದಾರಿಯಲ್ಲಿ ತೃಪ್ತಿಪಡಿಸಿ ಮುಖ್ಯಮಂತ್ರಿ ಪದವಿಗೇರಿದ ಬಿ.ಎಸ್. ಯಡಿಯೂರಪ್ಪ ತಂತಿ ಮೇಲೆ ನಡೆಯುತ್ತಿದ್ದು, ತಂತಿಯ ಮೇಲಿನಿಂದಲೇ ಪ್ರವಾಹ ಸಂತ್ರಸ್ತರ ಕಡೆಗೂ ನೋಡಲಿ...

ಯಡಿಯೂರಪ್ಪ ತಂತಿ ಮೇಲಿಂದಲೇ ಪ್ರವಾಹ ಸಂತ್ರಸ್ತರ ಕಡೆಗೆ ನೋಡಲಿ: ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
Published On :

ಬೆಂಗಳೂರು: ಮೈತ್ರಿ ಸರ್ಕಾರದ ಅತೃಪ್ತರನ್ನು ಅಡ್ಡದಾರಿಯಲ್ಲಿ ತೃಪ್ತಿಪಡಿಸಿ ಮುಖ್ಯಮಂತ್ರಿ ಪದವಿಗೇರಿದ ಬಿ.ಎಸ್. ಯಡಿಯೂರಪ್ಪ ತಂತಿ ಮೇಲೆ ನಡೆಯುತ್ತಿದ್ದು, ತಂತಿಯ ಮೇಲಿನಿಂದಲೇ ಪ್ರವಾಹ ಸಂತ್ರಸ್ತರ ಕಡೆಗೂ ನೋಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಸರ್ಕಾರದಲ್ಲಿ ತಾವು ತಂತಿ ಮೇಲೆ ನಡೆಯುತ್ತಿದ್ದು, ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾಗಿದೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಇವರ ತಂತಿ ಮೇಲಿನ ನಡಿಗೆಯನ್ನು ವಿಪಕ್ಷಗಳು ಕುಟುಕಲಾರಂಭಿಸಿದ್ದು, ಸರ್ಕಾರ ನಡೆಸಲು ಸಾಧ್ಯವಿಲ್ಲದಿದ್ದರೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಈ ಮಧ್ಯೆ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಪ್ರವಾಹ ಸಂತ್ರಸ್ತರ ವಿಚಾರವಾಗಿ ಇಂತಹ ಹೇಳಿಕೆ ನೀಡಿರುವುದಾಗಿ ಸಿಎಂ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

ಯಡಿಯೂರಪ್ಪ ಸಮರ್ಥನೆ ಕುರಿತು ಟ್ವೀಟ್ ಮೂಲಕ ಅವರನ್ನು ಟೀಕಿಸಿರುವ ಕುಮಾರಸ್ವಾಮಿ, ಪ್ರವಾಹದಿಂದ ಮನೆ ಮಠ ಕಳೆದುಕೊಂಡು ‌ಬೀದಿಗೆ ಬಿದ್ದಿರುವವರ ಬದುಕನ್ನು ನಿಮ್ಮ ಸರ್ಕಾರಕ್ಕೆ ‌ಕಟ್ಟಿ ಕೊಡಲು ಸಾಧ್ಯವಾಗದಿದ್ದರೆ‌, ಜನರೇ ನಿಮ್ಮನ್ನು 'ತಂತಿ‌' ಮೇಲಿನಿಂದ ಕೆಳಗೆ ಬೀಳಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.