ಎಚ್.ಡಿ. ಕುಮಾರಸ್ವಾಮಿ ಅವರೇ ನನ್ನನ್ನು ಬಿಜೆಪಿ ಜೊತೆ ಕಳುಹಿಸಿದ್ದಾರೆ: ಜಿಟಿಡಿ ಬಾಂಬ್
ಈ ಹಿಂದೆ ಲೋಕಸಭಾ ಚುನಾವಣೆಗೂ ಬಿಜೆಪಿ ಜೊತೆ ಕುಮಾರಸ್ವಾಮಿ ಅವರೇ ಕಳುಹಿಸಿದ್ದು, ಅವರು ನೀಡಿದ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಈಗಲೂ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.

ಮೈಸೂರು: ನನ್ನನ್ನು ಎಚ್.ಡಿ ಕುಮಾರಸ್ವಾಮಿ ಅವರೇ ಬಿಜೆಪಿ ಜೊತೆ ಕಳುಹಿಸಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಲೋಕಸಭಾ ಚುನಾವಣೆಗೂ ಬಿಜೆಪಿ ಜೊತೆ ಕುಮಾರಸ್ವಾಮಿ ಅವರೇ ಕಳುಹಿಸಿದ್ದು, ಅವರು ನೀಡಿದ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಈಗಲೂ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ.
ಈ ವೇಳೆ ಜಿಟಿಡಿ ನಮ್ಮ ಹಿರಿಯ ನಾಯಕರು ಅವರನ್ನು ಬಿಟ್ಟರೆ ಅವರ ಮಗ ಜಿ.ಡಿ ಹರೀಶ್ ಚುನಾವಣೆಗೆ ನಿಲ್ಲುಸುತ್ತೇವೆ ಎಂಬ ಸಾರಾ ಮಹೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹರೀಶ್ ಮೇಲೆ ಪ್ರೀತಿ ಇದ್ದರೆ ಸಾ.ರಾ ಮಹೇಶ್ ಅವರೇ ನೇರವಾಗಿ ಅವನ ಜೊತೆ ಮಾತನಾಡಲಿ ಎಂದು ಹೇಳಿದ್ದಾರೆ.
ಹರೀಶ್ ಮೇಲೆ ಸಾ.ರಾ ಮಹೇಶ್‍ಗೆ ಎಷ್ಟು ಪ್ರೀತಿ ಇದೆ ಅನ್ನೋದು ದೇವರಿಗೆ ಗೊತ್ತಿದೆ. ಹರೀಶ್ ಮೇಲೆ ಸಾ.ರಾ ಮಹೇಶ್‍ಗೆ ಎಷ್ಟು ಪ್ರೀತಿ ಇದೆ ಅನ್ನೋದು ನನಗೆ ಗೊತ್ತಿದೆ. ಖುದ್ದು ಸಾ.ರಾ ಮಹೇಶ್‍ಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಸಾ,ರಾ ಮಹೇಶ್ ಒಳ್ಳೆಯ ನಾಯಕ, ಕುಮಾರಸ್ವಾಮಿ ಅವರನ್ನು ಬಿಟ್ಟರೇ ರಾಜ್ಯದಲ್ಲಿ ಸಾ.ರಾ ಮಹೇಶ್ ಒಳ್ಳೆಯ ನಾಯಕ, ಅವರಿಗೆ ಭವಿಷ್ಯವಿದೆ, ಅವರಿಗೆ ಅಡ್ಡ ಬರುವುದಿಲ್ಲ ಎಂದು ಜಿಟಿಡಿ ವ್ಯಂಗ್ಯವಾಡಿದ್ದಾರೆ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


