ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕೇವಲ ಮೂರರಿಂದ ನಾಲ್ಕು ಸ್ಥಾನ ಮಾತ್ರ: ಆಂತರಿಕ ಸಮೀಕ್ಷೆ!
ಮುಂಬರುವ ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 15 ರಲ್ಲಿ ಕೇವಲ 3ರಿಂದ 4 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಖಾಸಗಿ ಎಜೆನ್ಸಿಯೊಂದು ಸರ್ವೆಯಲ್ಲಿ ತಿಳಿಸಿದೆ.

ಕೋಲಾರ: ಮುಂಬರುವ ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 15 ರಲ್ಲಿ ಕೇವಲ 3ರಿಂದ 4 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಖಾಸಗಿ ಎಜೆನ್ಸಿಯೊಂದು ಸರ್ವೆಯಲ್ಲಿ ತಿಳಿಸಿದೆ.
ನವೆಂಬರ್ 11 ರಂದು ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಲಿದ್ದು, ಅದಾದ ನಂತರ ಅಂದರೆ ಡಿಸೆಂಬರ್ 5ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಬಂಡಾಯ ಶಾಸಕರು ಬಿಜೆಪಿಗೆ ಸವಾಲಾಗಿದ್ದಾರೆ, ಸಮ್ಮಿಶ್ರ ಸರ್ಕಾರ ಕೆಡವಲು ಕಾರಣರಾದ ಬಂಡಾಯ ಶಾಸಕರು ಮಾಡಿದ ತ್ಯಾಗಕ್ಕೆ ಬಿಜೆಪಿ ಸೂಕ್ತ ಸ್ಥಾನಮಾನ ನೀಡಬೇಕಾಗಿದೆ. ಇದು ಬಿಜೆಪಿ ಆಂತರಿಕ ಕಲಹಕ್ಕೆ ಕಾರಣವಾಗಿದೆ.
ಬಿಜೆಪಿ ಸರ್ಕಾರ ಮುಂದುವರಿಯಲು ಇನ್ನೂ 7 ಸೀಟುಗಳಲ್ಲಿ ಗೆಲ್ಲುವ ಅಗತ್ಯವಿದೆ, ಆದರೆ ಬಿಜೆಪಿ ಕೇವಲ ಮೂರು ನಾಲ್ಕು ಸೀಟು ಮಾತ್ರ ಗೆಲ್ಲಲಿದೆ ಎಂದು ಬಿಜೆಪಿ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿವೆ,
ಪಕ್ಷ ತೊರೆದಿರುವ 12 ಶಾಸಕರಿಗೆ ಪರ್ಯಾಯವಾಗಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ, ಜೊತೆಗೆ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ,
ಸಮ್ಮಿಶ್ರ ಸರ್ಕಾರ ಪತನವಾಗುವುದಕ್ಕೆ ಮೊದಲು ಕಾಂಗ್ರೆಸ್ 80 ಶಾಸಕರನ್ನು ಹೊಂದಿತ್ತು, 12 ಶಾಸಕರು ರಾಜೀನಾಮೆ ನೀಡಿದರು, ಜೆಡಿಎಸ್ ನ 37 ಶಾಸಕರು ಸೇರಿ ಒಟ್ಟು 117 ಶಾಸಕರು ಒಟ್ಟುಗೂಡಿ ಸರ್ಕಾರ ರಚಿಸಿದರು. ಆದರೆ ಅಂದುಕೊಂಡಂತೆ ಸುಲಲಿತವಾಗಿ ನಡೆಯಲಿಲ್ಲ,
ಈ ಆಂತರಿಕ ಸಮೀಕ್ಷೆ ವರದಿ ಕೇಂದ್ರ ಬಿಜೆಪಿ ನಾಯಕರನ್ನ ಆತಂಕಕ್ಕೀಡುಮಾಡುತ್ತಿದೆ.ಹೀಗಾಗಿ ಉಪ ಚುನಾವಣೆಗೆ ಹೋಗುವ ಬದಲಾಗಿ ಹೊಸದಾಗಿ ಮಧ್ಯಂತರ ಚುನಾವಣೆಗೆ ಹೋಗುವುದೇ ಒಳಿತು ಎಂಬ ಮಾತುಗಳು ಕೇಳಿ ಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


