ರಾಜಕೀಯ ಅಸ್ಥಿರತೆ ಅಂತ್ಯಕ್ಕೆ ಮಧ್ಯಂತರ ಚುನಾವಣೆಯೊಂದೇ ಏಕೈಕ ಉತ್ತರ: ಸಿದ್ದರಾಮಯ್ಯ
ರಾಜಕೀಯ ಅಸ್ಥಿರತೆಗೆ ಅಂತ್ಯ ಹಾಡಬೇಕೆಂದರೆ ಮಧ್ಯಂತರ ಚುನಾವಣೆಯೊಂದೇ ಏಕೈಕ ಉತ್ತರ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಹುಬ್ಬಳ್ಳಿ: ರಾಜಕೀಯ ಅಸ್ಥಿರತೆಗೆ ಅಂತ್ಯ ಹಾಡಬೇಕೆಂದರೆ ಮಧ್ಯಂತರ ಚುನಾವಣೆಯೊಂದೇ ಏಕೈಕ ಉತ್ತರ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 8 ಸ್ಥಾನಗಳನ್ನು ಗೆಲ್ಲುವುದರಲ್ಲಿ ಬಿಜೆಪಿ ವಿಫಲವಾಗಿದ್ದೇ ಆದರೆ, ರಾಜ್ಯ ರಾಜಕೀಯ ಅಸ್ಥಿರತೆಗೆ ಅಂತ್ಯ ಹಾಡಬೇಕೆಂದರೆ ಮಧ್ಯಂತರ ಚುನಾವಣೆಯೊಂದೇ ಏಕೈಕ ಪರಿಹಾರವೆಂದು ಹೇಳಿದ್ದಾರೆ.
ಕುದುರೆ ವ್ಯಾಪಾರ ಮಾಡಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಉಪ ಚುನಾವಣೆಯಲ್ಲಿ 8 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಇಲ್ಲದೇ ಹೋದರೆ, ಯಡಿಯೂರಪ್ಪ ರಾಜೀನಾಮೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಜೆಪಿ 8 ಸ್ಥಾನ ಗೆಲ್ಲದೇ ಹೋದಲ್ಲಿ ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡುವುದಿಲ್ಲ. ಈ ಬಗ್ಗೆ ನನಗೆ ಗೊತ್ತಿದೆ. ನಾವೇನು ಜೆಡಿಎಸ್ ನವರೊಂದಿಗೆ ಮಾತನಾಡಿಲ್ಲ. ನಾನು ಜೆಡಿಎಸ್ ನಲ್ಲಿ ಇದ್ದು ಬಂದಿರುವವನು. ಅಲ್ಲಿನ ಪರಿಸ್ಥಿತಿ ಎನು ಎಂಬ ಅರಿವು ಇದೆ. ಉಪ ಚುನಾವಣೆ ಬಳಿಕ ಬಿಜೆಪಿ ವಿಶ್ವಾಸ ಮತಯಾಚಿಸುವ ಪ್ರಶ್ನೆಯೇ ಇಲ್ಲ. ಮಧ್ಯಂತರ ಚುನಾವಣೆ ನಡೆಯುವುದು ಖಚಿತ. ಆಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಖಚಿತ. ನಾನೇನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎಲ್ಲಿಯೂ ಹೇಳಿಲ್ಲ. ಸಿಎಂ ಅಭ್ಯರ್ಥಿಯನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದಿದ್ದಾರೆ.
ಇದೇ ವೇಳೆ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿರುವ ಅವರು, ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ಪ್ರಜಾಪ್ರಭುತ್ವದ ಅಣುಕು. ಶಿವಸೇನೆ ಹಿಂದುತ್ವದಿಂದ ಹೊರಗೆ ಬರುವುದಾಗಿ ಹೇಳಿದ್ದರಿಂದಲೇ ಕಾಂಗ್ರೆಸ್ ಬೆಂಬಲ ನೀಡಿದೆ. ಶಿವಸೇನೆಯ ಸಂಸದರು ಕೇಂದ್ರ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿ ಎನ್'ಡಿಎ ಪಕ್ಷದಿಂದ ಹೊರಗೆ ಬಂದಿದ್ದಾರೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


