ಎಚ್ ಡಿಕೆ ಮುಖ್ಯಮಂತ್ರಿಯಾಗಿದ್ದಾಗ ಸ್ಟಾರ್ ಹೋಟೆಲ್ ನಲ್ಲಿ ಕಡತಗಳಿಗೆ ಸಹಿ ಪಡೀತಿದ್ದ ನಟಿ : ಸೋಮಶೇಖರ್ ಬಾಂಬ್
ರಾಜ್ಯದಲ್ಲಿ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಅಖಾಡದಲ್ಲಿ ಆರೋಪ, ಪ್ರತ್ಯಾರೋಪಗಳ ಸರಣಿ ಮುಂದುವರೆದಿದೆ

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಅಖಾಡದಲ್ಲಿ ಆರೋಪ, ಪ್ರತ್ಯಾರೋಪಗಳ ಸರಣಿ ಮುಂದುವರೆದಿದೆ. ಈ ಮಧ್ಯೆ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಟಿ ಸೋಮಶೇಖರ್ ಸಿಡಿಸಿರುವ ಬಾಂಬ್ ರಾಜ್ಯರಾಜಕೀಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.
ಪ್ರಚಾರದ ಸಭೆಯಲ್ಲಿ ಮಾತಾಡಿರುವ ಸೋಮಶೇಖರ್, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸ್ಯಾಂಡಲ್ ವುಡ್ ನಟಿಯೊಬ್ಬರು ಫೈವ್ ಸ್ಟಾರ್ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿ ಬಿಎಡಿ ಕಮೀಷನರ್ ರಾಕೇಶ್ ಸಿಂಗ್ ಅವರಿಂದ ಸಹಿ ಪಡೆಯುತ್ತಿದ್ದರು ಎಂದು ಆರೋಪ ಮಾಡಿದ್ದಾರೆ. ಆಗ ಬಿಡಿಎ ಅಧ್ಯಕ್ಷರಾಗಿದ್ದರಿಂದ ಅದರ ಮಾಹಿತಿ ಬೇಕಿತ್ತು. ನಾನು ಮಾಧ್ಯಮದವರನ್ನು ಒಂದಲ್ಲ ಏಳು ಬಾರಿ ಕರೆಸಿ ಇದರ ಬಗ್ಗೆ ತಿಳಿಸಿದ್ದೆ ಎಂದು ಅವರು ಹೇಳಿದ್ದಾರೆ.
ಈ ವಿಷಯವಾಗಿ ಬಹಿರಂಗ ಚರ್ಚೆಗೂ ಕೂಡಾ ಸಿದ್ಧವಾಗಿರುವುದಾಗಿ ತಿಳಿಸಿರುವ ಸೋಮಶೇಖರ್, ಸ್ಟಾರ್ ಹೋಟೆಲ್ ನಲ್ಲಿ ಕಡತಗಳಿಗೆ ಸಹಿ ಪಡೆಯುತ್ತಿದ್ದ ನಟಿ ಯಾರು? ಎಂಬುದನ್ನು ಹೇಳಿಲ್ಲ . ಇದು ರಾಜ್ಯ ರಾಜಕೀಯದಲ್ಲಿ ತೀವ್ರವಾದ ಅನುಮಾನಗಳಿಗೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


