ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಕಣಕ್ಕೆ: ಶರತ್ ಬಚ್ಚೇಗೌಡ
ಪಕ್ಷವನ್ನು ನಮ್ಮ ಕಾರ್ಯಕರ್ತರು ಬೆವರು-ರಕ್ತ ಸುರಿಸಿ ಕಟ್ಟಿ ಬೆಳೆಸಿದರು ಕ್ಷೇತ್ರದಲ್ಲಿ 3 ಸಾವಿರ ಇದ್ದ ಬಿಜೆಪಿ ಮತಗಳನ್ನು ಶಾಸಕರನ್ನು ಗೆಲ್ಲಿಸುವ ಹಂತಕ್ಕೆ ಬಂದಿದೆ ಎಂದು ಶರತ್ ಬಚ್ಚೇಗೌಡ ತಿಳಿಸಿದ್ದಾರೆ.

ಬೆಂಗಳೂರು: ಪಕ್ಷವನ್ನು ನಮ್ಮ ಕಾರ್ಯಕರ್ತರು ಬೆವರು-ರಕ್ತ ಸುರಿಸಿ ಕಟ್ಟಿ ಬೆಳೆಸಿದರು ಕ್ಷೇತ್ರದಲ್ಲಿ 3 ಸಾವಿರ ಇದ್ದ ಬಿಜೆಪಿ ಮತಗಳನ್ನು ಶಾಸಕರನ್ನು ಗೆಲ್ಲಿಸುವ ಹಂತಕ್ಕೆ ಬಂದಿದೆ ಎಂದು ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ಬೆಂ.ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿ ಕೊಂಡು ಕೋರ್ಟ್ಗಳಿಗೆ ಅಲೆದಾಡಿ ದವರಿಗೆ ಇಂದು ವಂಚನೆಯಾಗಿದೆ.ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಇಂದು ಟಿಕೆಟ್ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು.
ತಂದೆ ನನ್ನ ಪರ ಬರಲ್ಲ, ನೀವೇ ನನ್ನ ಕುಟುಂಬವಾಗಿ ಕೆಲಸ ಮಾಡಿ
ಇದೇ ವೇಳೆ ನನ್ನ ತಂದೆ ಮಗನ ಪರ ಬರಲ್ಲ, ಅವರ ಬದಲು ನೀವೇ ನಿಂತು ನನ್ನ ಕುಟುಂಬವಾಗಿ ಕೆಲಸ ಮಾಡಿ ಎಂದು ಕ್ಷೇತ್ರದ ಜನರಿಗೆ ಶರತ್ ಬಚ್ಚೇಗೌಡ ಕರೆ ನೀಡಿದ್ದಾರೆ.'ಉಪ ಚುನಾವಣೆಗೆ ನೂರಕ್ಕೆ ನೂರು ನಾನೇ ಅಭ್ಯರ್ಥಿ. ಇಂದಿಗೂ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಹೊಸ ಚಿಹ್ನೆ ಕ್ಷೇತ್ರಕ್ಕೆ ಬರುತ್ತದೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೆಲಸ ಮಾಡಿದ ರೀತಿಯಲ್ಲಿ ಈ ಬಾರಿ ನನ್ನ ಪರ ಕೆಲಸ ಮಾಡಿ. ಗ್ರಾಮ ಮನೆ ಹೊಲ ತೋಟಗಳಿಗೆ ಹೋಗಿ ಮತದಾರರಿಗೆ ಹೊಸ ಚಿಹ್ನೆ ಗುರುತು ಮಾಡಿಕೊಡಿ. ಪಕ್ಷ ಬಿಟ್ಟು ಪ್ರಚಾರ ಮಾಡುವಾಗ ನನ್ನ ತಂದೆ ಬಚ್ಚೇಗೌಡ್ರು ನನ್ನ ಪರ ನಿಲ್ಲಲು ಸಾಧ್ಯವಾಗಲ್ಲ. ನೀವೇ ನನ್ನ ಕುಟುಂಬವಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಮತ್ತು ಜನರಿಗೆ ಕರೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


