ರಾಜಕೀಯ

ಸರ್ಕಾರ ಉಳಿಸಿಕೊಳ್ಲಲು ಎಲ್ಲಾ ತಂತ್ರಗಾರಿಕೆ ಮಾಡಿದ್ದೇವೆ: ಕೆಸಿ ವೇಣುಗೋಪಾಲ್

ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿದ್ದೇವೆ ಎಲ್ಲಾ ಶಾಸಕರು ನಮ್ಮೊಂದಿಗೆ ಇದ್ದಾರೆ, ಸರ್ಕಾರವೂ ಸುಭದ್ರವಾಗಿದ್ದು, ಸರ್ಕಾರ ರಕ್ಷಿಸುವ ತಂತ್ರಗಾರಿಕೆಯನ್ನು ಮಾಧ್ಯಮಗಳ ....

ಸರ್ಕಾರ ಉಳಿಸಿಕೊಳ್ಲಲು ಎಲ್ಲಾ ತಂತ್ರಗಾರಿಕೆ ಮಾಡಿದ್ದೇವೆ: ಕೆಸಿ ವೇಣುಗೋಪಾಲ್
ಕೆಸಿ ವೇಣುಗೋಪಾಲ್
Published On :
ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ತಂತ್ರಗಾರಿಕೆ ರೂಪಿಸಿದ್ದೇವೆ ಎಲ್ಲಾ ಶಾಸಕರು ನಮ್ಮೊಂದಿಗೆ ಇದ್ದಾರೆ, ಸರ್ಕಾರವೂ ಸುಭದ್ರವಾಗಿದ್ದು, ಸರ್ಕಾರ ರಕ್ಷಿಸುವ ತಂತ್ರಗಾರಿಕೆಯನ್ನು ಮಾಧ್ಯಮಗಳ ಮುಂದೆ ವಿವರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ 
ನಗರದ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಮೈತ್ರಿ ನಾಯಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಲೋಕಸಭಾ ಚುನಾವಣೆ ಫಲಿತಾಂಶ ಸೇರಿದಂತೆ ಮೈತ್ರಿ ಸರ್ಕಾರ ರಕ್ಷಣೆಗೆ ಅಗತ್ಯ ತಂತ್ರಗಾರಿಕೆ ರೂಪಿಸಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅಸಮಾಧಾನಿತ ಶಾಸಕರು ಇಲ್ಲ.ಎಲ್ಲರೂ ನಮ್ಮ ಜೊತೆ ಇದ್ದಾರೆ, ಸರ್ಕಾರವೂ ಸುಭದ್ರವಾಗಿರಲಿದೆ. ಬಿಜೆಪಿ ನಾಯಕರು ಮೊದಲಿನಿಂದಲೂ ಆಪರೇಷನ್ ಕಮಲ ನಡೆಸುತ್ತಲೇ ಇದ್ದಾರೆ ಅವರ ಆಸೆ ಈಡೇರುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಲೋಕಸಭಾ ಚುನಾವಣೆಯಲ್ಲಿ ಏಕೆ ಮತ್ತು ಹೇಗೆ ಇಂತಹ ಫಲಿತಾಂಶ ಬಂದಿದೆ ಎಂಬ ಕುರಿತಾಗಿ ಚರ್ಚೆ ಹಾಗೂ ವಿಶ್ಲೇಷಣೆ ನಡೆಸಿದ್ದೇವೆ. ಎರಡೂ ಪಕ್ಷಗಳು ಜೊತೆಗೂಡಿ ಮೈತ್ರಿ ಮೂಲಕ ಚುನಾವಣೆ ಎದುರಿಸಿದ್ದೆವು. ಮೈತ್ರಿ ನಂತರವೂ ಇಷ್ಟು ಕೆಟ್ಟ ಫಲಿತಾಂಶ ಹೇಗೆ ಬಂತು. ಈ ಕುರಿತಾಗಿ ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ. ಸ್ವಾಭಾವಿಕವಾಗಿ ಪ್ರಸ್ತುತ ರಾಜಕೀಯ ಬೆಳವಣಿಗಳ ಬಗ್ಗೆ, ಮೈತ್ರಿ ಪಕ್ಷಗಳ ಕಾರ್ಯತಂತ್ರಗಳ ಕುರಿತಂತೆ ಚರ್ಚಿಸಲಾಗಿದೆ. ಶಾಸಕರಿಗೆ ಅವರವರ ಕ್ಷೇತ್ರಗಳ ಸಮಸ್ಯೆಗಳ ಮಾಹಿತಿ ನೀಡುವಂತೆ ಸೂಚಿಸಿದ್ದೇವೆ. ಸರ್ಕಾರ ಸುಭದ್ರವಾಗಿದ್ದು, ಯಾವುದೇ ಗೊಂದಲ ಇಲ್ಲ ಎಂದರು.
ಕುಮಾರಕೃಪ ಅತಿಥಿ ಗೃಹದಿಂದ ಮೈತ್ರಿ ನಾಯಕರ ಸಭೆಯ ಬಳಿಕ ಮುಖ್ಯಮಂತ್ರಿ ಜೊತೆ ರವಿಚಂದ್ರನ್ ಪುತ್ರಿ ವಿವಾಹಕ್ಕೆ ತೆರಳಿದ್ದ ಸಚಿವ ಡಿ ಕೆ ಶಿವಕುಮಾರ್ ವಾಪಸ್ ಕುಮಾರ ಕೃಪ ಅತಿಥಿಗೃಹಕ್ಕೆ ಆಗಮಿಸಿದರು. ಕುಮಾರಸ್ವಾಮಿ ಜೊತೆಯಲ್ಲಿ ಒಂದೆ ಕಾರಿನಲ್ಲಿ ತೆರಳಿ, ಮತ್ತೆ ಕೆಕೆ ಗೆಸ್ಟ್ ಹೌಸ್ ಗೆ ವಾಪಸ್ಸಾದರು.
ಗೃಹ ಕಚೇರಿ ಕೃಷ್ಣಾಗೆ ಮುಖ್ಯಮಂತ್ರಿಯನ್ನು ಬಿಟ್ಟು ವಾಪಸ್ ಬಂದ ಸಚಿವ ಡಿಕೆ ಶಿವಕುಮಾರ್ ಕೆ ಸಿ ವೇಣುಗೋಪಾಲ್ ಜೊತೆಗೆ ಪ್ರತ್ಯೇಕ ಮಾತುಕತೆ ನಡೆಸಿದರು.
ಇದೇ ಸಂದರ್ಭ ಅತೃಪ್ತ ಶಾಸಕರೆಂದು ಗುರುತಿಸಿಕೊಂಡಿರುವ ಲಿಂಗಸಗೂರು ಶಾಸಕ ಡಿ.ಎಸ್. ಹುಲಗೇರಿ ಹಾಗೂ ರಾಯಚೂರು ಗ್ರಾಮೀಣ ಶಾಸಕ ಬಸವರಾಜ ದದ್ದಲ್ ಅವರ ಮನವೊಲಿಸುವ ಕೆಲಸ ನಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.