ಜಾತ್ಯಾತೀತ ಮತಗಳ ಒಗ್ಗೂಡುವಿಕೆಯೇ ಮೈತ್ರಿ ಪಕ್ಷಗಳ ಬಲ: ತನ್ವೀರ್ ಅಹ್ಮದ್
ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೇರುವುದನ್ನು ತಡೆಯುವ ಸಲುವಾಗಿಉ ಒಂದಾಗಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಇದಾಗಲೇ ಒಂದು ಉಪಚುಯ್ನಾವಣೆಯನ್ನು ಗೆಲ್ಲಿಸಿ ಕೊಡುವಲ್ಲಿ ....

Published On :
ಬೆಂಗಳೂರು: ಬಿಜೆಪಿಯನ್ನು ಕರ್ನಾಟಕದಲ್ಲಿ ಅಧಿಕಾರಕ್ಕೇರುವುದನ್ನು ತಡೆಯುವ ಸಲುವಾಗಿಉ ಒಂದಾಗಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಇದಾಗಲೇ ಒಂದು ಉಪಚುಯ್ನಾವಣೆಯನ್ನು ಗೆಲ್ಲಿಸಿ ಕೊಡುವಲ್ಲಿ ಯಶಸ್ವಿಯಾಗಿದೆ. ಇದೀಗ ಮುಂದಿನ ಲೋಕಸಭೆ ಚುನಾವಣೆಯಲ್ಲಿಯೂ ಇದೇ ಮೈತ್ರಿ ಮುಂದುವರಿಯಲಿದ್ದು ಈ ಮೂಲಕ ಬಿಜೆಪಿಯೇತರ ಪಕ್ಷಗಳು ಹೇಗೆ ಪ್ರಾದೇಶಿಕ ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ಹಣಿಯಲು ಸಾಧ್ಯ ಎಂಬ ಕುರಿತು ರಾಷ್ಟ್ರಕ್ಕೆ ಸಂದೇಶ ಸಾರುವ ಇರಾದೆ ಮೈತ್ರಿ ಪಕ್ಷಗಳದಾಗಿದೆ.
ಬಿಜೆಪಿಗೆ ಪರ್ಯಾಯವಾಗಿ 'ಜಾತ್ಯತೀತ' ಪಕ್ಷಗಳಾದ ತಮ್ಮ ಮೈತ್ರಿ, ಪ್ರಚಾರ, ಹಣ, ನಾಯಕರು ಮತ್ತು ಮಾಧ್ಯಮಗಳನ್ನು ಒಳಗೊಂಡಂತೆ ತಮ್ಮ ಸಂಯೋಜಿತ ಸಂಪನ್ಮೂಲಗಳ ಮೂಲಕ ಚುನಾವಣೆಯಲ್ಲಿ ಯಶಸ್ಸು ಗಳಿಸಬಹುದು ಎಂದು ಮೈತ್ರಿ ಪಕ್ಷಗಳು ಆಶಿಸಿದೆ. ಐಕ್ಯತೆಯ ಗ್ರಹಿಕೆಯು ಅವರ ಬಲವಾಗಿರಬಹುದು, ಆದರೆ ಪಕ್ಷದ ಆಂತರಿಕ ಚಕಮಕಿಯು ಮೈತ್ರಿ ಪಾಲುದಾರರಿಗೆ ಹಾನಿ ಉಂಟುಮಾಡುತ್ತದೆ ಎನ್ನುವುದು ಸತ್ಯ.
"ಸೆಕ್ಯೂಲರ್ ಮತಗಳು, ವಿಭಜನೆಯಾಗುತ್ತಿದ್ದವು, ಇದೀಗ ಒಟ್ಟಾಗಿರಲಿದೆ.ಕಾಂಗ್ರೆಸ್ ಜತೆಗಿನ ಮೈತ್ರಿಯಿಂದಾಗಿ ನಮಗೆ ಸಾಮಾನ್ಯ ವೇದಿಕೆಯೊಂದು ದೊರಕಿದೆ.ನಾವು ರೈತರ ಪರವಾದ, ಜನ ಪರವಾದ ಯೋಜನೆಗಳನ್ನು ಕೂಡಾ ನೀಡಲಿದ್ದೇವೆ" ಜೆಡಿಎಸ್ ವಕ್ತಾರ ತನ್ವೀರ್ ಅಹ್ಮದ್ ಹೇಳಿದರು. ಇಷ್ಟಾದರೂ ಎರಡೂ ಪಕ್ಷಗಳಿಗೆ ಸಮ್ಮತಿಸಬಹುದಾದ ಅಭ್ಯರ್ಥಿಗಳ ಆಯ್ಕೆ ವಿಳಂಬವಾಗುತ್ತಿರುವುದು ಇದರ ಬಹುದೊಡ್ಡ ವೈಫಲ್ಯ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. . "ಕಳೆದ ಒಂದು ವರ್ಷದಲ್ಲಿ ಭಿನ್ನಾಭಿಪ್ರಾಯಗಳಶಮನಕ್ಕಾಗಿ ನಾವು ಕೆಲಸ ಮಾಡಬೇಕಿತ್ತು, ಈ ವಿಚಾರದಲಿ ಎರಡೂ ಪಕ್ಷದವರೂ ತಪ್ಪೆಸಗಿದ್ದೇವೆ ಎನ್ನಿಸಿದೆ"
ಮೈತ್ರಿ ಪಾಲುದಾರರು ತಮ್ಮ ಪರವಾಗಿ ಮತಗಳ ಏಕೀಕರಣ ಕೆಲಸ ಮಾಡಲಿದೆ ಎಂದು ಭಾವಿಸಿದ್ದಾರೆ. ಉದಾಹರಣೆಗೆ, 2014 ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಬಿಜೆಪಿ 23.71 ರಷ್ಟು ಮತ ಗಳಿಸಿದ್ದರೆ ಕಾಂಗ್ರೆಸ್ 37.16 ಶೇಕಡಾ ಮತ್ತು ಜೆಡಿ (ಎಸ್) 32.92 ಶೇಕಡಾ ಮತ ಗಳಿಸಿದ್ದವು. ಈ ರೀತಿ ಮತಗಳ ಏಕೀಕರಣವೇನಾದರೂ ಈ ಬಾರಿಯೂ ಸಾಧ್ಯವಾದರೆ ಬಿಜೆಪಿ ಗೆಲುವನ್ನು ಭಾಗಷಃ ತಡೆಯುವುದು ಅಸಾಧ್ಯವಲ್ಲ. ""ಬಿಜೆಪಿಯು ಬಹಳ ಬಲಶಾಲಿಯಾಗಿರುವ ಪ್ರದೇಶಗಳಲ್ಲಿ ಎದುರಾಳಿ ಪಕ್ಷಗಳು ಸಹ ಅಷ್ಟೇ ಶಕ್ತಿ ಪ್ರದರ್ಶಿಸಬೇಕು. ಆದರೆ ಜೆಡಿಎಸ್ ಎಲ್ಲಾ ಕಡೆಗಳಲ್ಲಿ ಪ್ರಭಾವಶಾಲಿಯಾಗಿಲ್ಲ" ರಾಜಕೀಯ ವಿಶ್ಲೇಷಕ ಪ್ರೊಫೆಸರ್ ನರೇಂದ್ರ ಪಾಣಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


