ರಾಜಕೀಯ

ಚಕ್ರವರ್ತಿಗೆ ಎಲ್ಲಾ ಇದೆ, ಆದ್ರೆ ಧೈರ್ಯ ಕಡಿಮೆ: ಶ್ರಿಗಳ ಎದುರೇ ಆರ್.ಅಶೋಕ್-ಸೋಮಣ್ಣ ಟಾಕ್ ಫೈಟ್

ಈ ಬಾರಿ ಚಕ್ರವರ್ತಿ ನೇತೃತ್ವದಲ್ಲಿ ಎಲ್ಲರೂ ಒಟ್ಟಿಗೆ ಚುನಾವಣೆಗೆ ಹೋಗುತ್ತಿದ್ದೇವೆ, ಆದರೆ ಚಕ್ರವರ್ತಿಗೆ ಎಲ್ಲಾ ಇದೆ, ಧೈರ್ಯ ಕಡಿಮೆ ಎಂದು ಮಾಜಿ ಸಚಿವ ...

ಚಕ್ರವರ್ತಿಗೆ ಎಲ್ಲಾ ಇದೆ, ಆದ್ರೆ ಧೈರ್ಯ ಕಡಿಮೆ:  ಶ್ರಿಗಳ ಎದುರೇ ಆರ್.ಅಶೋಕ್-ಸೋಮಣ್ಣ  ಟಾಕ್ ಫೈಟ್
ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಆರ್ ಅಶೋಕ್ ಮತ್ತು ವಿ. ಸೋಮಣ್ಣ
Published On :
ಬೆಂಗಳೂರು: ಈ ಬಾರಿ ಚಕ್ರವರ್ತಿ ನೇತೃತ್ವದಲ್ಲಿ ಎಲ್ಲರೂ ಒಟ್ಟಿಗೆ ಚುನಾವಣೆಗೆ ಹೋಗುತ್ತಿದ್ದೇವೆ, ಆದರೆ  ಚಕ್ರವರ್ತಿಗೆ ಎಲ್ಲಾ ಇದೆ, ಧೈರ್ಯ ಕಡಿಮೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಮಾಜಿ ಡಿಸಿಎಂ ಆರ್ .ಅಶೋಕ್ ಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರಿನ ಸುತ್ತೂರು ಮಠಕ್ಕೆ ಬಿಜೆಪಿ  ಅಭ್ಯರ್ಥಿ ತೇಜಸ್ವಿನಿ ಅನಂತ್ ಕುಮಾರ್ ಸೋಮಣ್ಣ ಹಾಗೂ ಆರ್. ಅಶೋಕ್ ಜೊತೆಗೂಡಿ ಭೇಟಿ ಮಾಡಿದರು. ಸ್ವಾಮಿಗಳ ಎದುರೇ ಅಶೋಕ್ ಗೆ ಟಾಂಗ್ ಕೊಟ್ಟ ಸೋಮಣ್ಣ ಪೇಚಿಗೀಡಾದರು.
ಸೋಮಣ್ಣಗೆ ಟಕ್ಕರ್ ಕೊಟ್ಟ ಅಶೋಕ್, ಕೆಟ್ಟದಾದರೇ ಅಶೋಕ್ ಕಾರಣ ಅಂತಾ ಹೇಳುತ್ತಾರೆ, ಆದರೆ ಒಳ್ಳೆಯದಾದರೇ  ನಾನು ಲೆಕ್ಕಕ್ಕೆ ಇರುವುದಿಲ್ಲ, ಎಲ್ಲರನ್ನು ನನ್ನನ್ನು ಬಳಸಿಕೊಳ್ಳುತ್ಕಾರೆ, ಕೆಲಸ ಮುಗಿದ ಮೇಲೆ ನನ್ನನ್ನು ಮರೆತುಬಿಡುತ್ತಾರೆ ಎಂದು ಹೇಳಿದ್ದಾರೆ.
ಈ ಮಧ್ಯೆ ಮತ್ತೆ ಮಾತನಾಡಿದ ಸೋಮಣ್ಣ, ಅಶೋಕ್ ಮನಸ್ಸು ತುಂಬಾ ಒಳ್ಳೆಯದು, ಎಲ್ಲರು ಅವರ ವಿರುದ್ಧವಾಗಿದ್ದಾರೆ, ನಾನು ಮಾತ್ರ ಅವರ ಪರವಾಗಿದ್ದೇನೆ ಎಂದು ಸಮಾಧಾನ ಪಡಿಸಲು ಮುಂದಾದರು.
ಇನ್ನೂ ಇದೇ ವೇಳೆ ಮಾತನಾಡಿದ ಆರ್. ಅಶೋಕ್, ದಿವಂಗತ ಅನಂತ್ ಕುಮಾರ್ ಅವರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ, ತೇಜಸ್ವಿನಿ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಿಸಿಲಾಗಿದೆ, ಹೀಗಾಗಿ ಅವರ ಗೆಲುವಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.