ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೈಬ್ರೀಡ್: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೈಬ್ರೀಡ್ ವ್ಯಕ್ತಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಅವರು ಬ್ರಾಹ್ಮಣರಾಗಿದಲ್ಲೀ ಡಿಎನ್ ಎ ಸಾಕ್ಷ್ಯಗಳನ್ನು ನೀಡುವಂತೆ ಅವರು ಕೇಳಿದ್ದಾರೆ.

Published On :
ಶಿರಸಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೈಬ್ರೀಡ್ ವ್ಯಕ್ತಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಅವರು ಬ್ರಾಹ್ಮಣರಾಗಿದಲ್ಲೀ ಡಿಎನ್ ಎ ಸಾಕ್ಷ್ಯಗಳನ್ನು ನೀಡುವಂತೆ ಅವರು ಕೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅನಂತ್ ಕುಮಾರ್ ಹೆಗ್ಡೆ, ಮುಸ್ಲಿಂ ವ್ಯಕ್ತಿ ರಾಹುಲ್ ಗಾಂಧಿ ತನ್ನಷ್ಟಕ್ಕೆ ತಾನೇ 'ಜನೆಧರಿ' ಹಿಂದೂ ಅಂತಾ ಕರೆದುಕೊಂಡಿದ್ದಾರೆ. ಅವರು ಹಿಂದು ಆಗಿದಲ್ಲಿ ಏನಾದರೂ ಸಾಕ್ಷ್ಯ ಇದೆಯಾ? ಮುಸ್ಲಿಂರಿಗೆ ಹುಟ್ಟಿರುವ ರಾಹುಲ್ ಗಾಂಧಿ ತಾಯಿ ಕ್ರಿಶ್ಚಿಯನ್, ಇದರ ಬಗ್ಗೆ ಏನ್ನಾದರೂ ಸಾಕ್ಷ್ಯ ಇದೆಯಾ? ನಾನೂ ಹಾಸ್ಯ ಮಾಡುತ್ತಿಲ್ಲ ಎಂದಿದ್ದಾರೆ.
ಭಾರತೀಯ ವಾಯುಪಡೆ ದಾಳಿ ಕುರಿತಂತೆ ಸಾಕ್ಷ್ಯ ಕೇಳಿರುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅನಂತ್ ಕುಮಾರ್ ಹೆಗ್ಡೆ, ರಾಜೀವ್ ಗಾಂಧಿ ಹತ್ಯೆಯಾದ ನಂತರ ದೇಹದ ಭಾಗಗಳ ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು. ಆಗ ಪ್ರಿಯಾಂಕಾ ಗಾಂಧಿ ಅವರ ಸ್ಯಾಂಪಲ್ ತೆಗೆದುಕೊಳ್ಳಲು ಸೋನಿಯಾ ಗಾಂಧಿ ಹೇಳಿದ್ದರು ಆದರೆ, ರಾಹುಲ್ ಗಾಂಧಿ ಸ್ಯಾಂಪಲ್ ತೆಗೆದುಕೊಳ್ಳಲು ಹೇಳಿರಲಿಲ್ಲ. ಇದು ಅವರ ದಾಖಲೆಯಾಗಿದೆ ಎಂದು ಕಿಡಿಕಾರಿದರು.
ಈ ಹೈಬ್ರಿಡ್ ವ್ಯಕ್ತಿ ಈಗ ಭಾರತೀಯ ವಾಯುಪಡೆಯ ಸಾಕ್ಷ್ಯ ಕೇಳುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಚಾರಿತ್ರ್ಯವಾಗಿದ್ದು, ಈ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಲು ಭಾರತೀಯರು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್Karnatakaಕರ್ನಾಟಕಶಿರಸಿRahul Gandhiರಾಹುಲ್ ಗಾಂಧಿAnanth Kumar Hegdeಅನಂತ್ ಕುಮಾರ್ ಹೆಗ್ಡೆSirasi
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


