ವಿಶ್ವಾಸ ಮತಯಾಚನೆ ಮುಗಿಯದಿದ್ದರೆ ನಾನೇ ರಾಜಿನಾಮೆ ನೀಡುತ್ತೇನೆ: ಸಿದ್ದರಾಮಯ್ಯ ಖಡಕ್ ಎಚ್ಚರಿಕೆ
ಸೋಮವಾರವೇ ವಿಶ್ವಾಸ ಮತಯಾಚನೆಗೆ ಅಂತಿಮ ಡೆಡ್ ಲೈನ್ ಅನ್ನು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈ ಹಿಂದಿನ ಕಲಾಪದ ವೇಳೆ ಮಾತು ನೀಡಿದ್ದು...

Published On :
ಬೆಂಗಳೂರು: ಸೋಮವಾರವೇ ವಿಶ್ವಾಸ ಮತಯಾಚನೆಗೆ ಅಂತಿಮ ಡೆಡ್ ಲೈನ್ ಅನ್ನು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈ ಹಿಂದಿನ ಕಲಾಪದ ವೇಳೆ ಮಾತು ನೀಡಿದ್ದು ಇದೀಗ ನಿನ್ನೆ ಮತಯಾಚನೆ ನಡೆಯುವ ಸಾಧ್ಯತೆ ಇಲ್ಲವಾಗಿದ್ದನ್ನು ಗಮನಿಸಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಅವರಿಗೆ ನಾನೇ ರಾಜಿನಾಮೆ ಕೊಟ್ಟು ಹೋಗುತ್ತೇನೆ ಎಂದು ಹೇಳಿದ್ದಾರೆ.
ಆರ್ ವಿ ದೇಶಪಾಂಡೆ ಅವರು ಕಲಾಪದಲ್ಲಿ ಮಾತನಾಡುತ್ತಿದ್ದಾಗ ದಿನೇಶ್ ಗುಂಡುರಾವ್ ಮತ್ತು ಸಿದ್ದರಾಮಯ್ಯ ನಡುವೆ ಸ್ವಲ್ಪ ಚರ್ಚೆ ನಡೆಯಿತು. ಇದೆಲ್ಲ ನೋಡುತ್ತಿದ್ದರೆ ಮುಗಿಯುವ ಹಂತಕ್ಕೆ ಬರುವುದಿಲ್ಲ. ನಾಳೆಗೆ ಕಲಾಪವನ್ನು ಮುಂದೂಡುವಂತೆ ಸ್ಪೀಕರ್ ಅವರನ್ನು ಕೇಳಿ ಎಂದು ಸಿದ್ದರಾಮಯ್ಯರನ್ನು ದಿನೇಶ್ ಗುಂಡುರಾವ್ ಅವರು ಕೇಳುತ್ತಾರೆ. ಇದಕ್ಕೆ ಸಿದ್ದರಾಮಯ್ಯ ಅವರು ಇದೆಲ್ಲ ನೋಡಿ ಸಾಕಾಗಿ ಹೋಗಿದೆ ನಾನೇ ರಾಜಿನಾಮೆ ಕೊಟ್ಟು ಬಿಡುತ್ತೇನೆ ಎಂದು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ವಿಶ್ವಾಸ ಮತಯಾಚನೆ ಕಳೆದ ನಾಲ್ಕು ದಿನದಿಂದ ನಡೆಯುತ್ತಿದ್ದು ಕಲಾಪದಲ್ಲಿ ನಡೆಯುತ್ತಿರುವ ಪ್ರತಿಯೊಂದು ನಡೆಯನ್ನು ರಾಜ್ಯವಲ್ಲ ಇಡೀ ದೇಶದ ಜನತೆ ನೋಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸಿದ್ದರಾಮಯ್ಯ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruSiddaramaiahರಾಜಿನಾಮೆRamesh KumarKarnataka politicsಕರ್ನಾಟಕ ರಾಜಕೀಯRebel Mlaಸ್ಪೀಕರ್ ರಮೇಶ್ ಕುಮಾರ್ರೆಬೆಲ್ ಶಾಸಕರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


