ರಾಜಕೀಯ

ರಾಜ್ಯಪಾಲರ 2ನೇ ಡೆಡ್‌ಲೈನ್‌ಗೂ ಡೋಂಟ್ ಕೇರ್: ಕಲಾಪ ಸೋಮವಾರಕ್ಕೆ ಮುಂದೂಡಿದ ಸ್ಪೀಕರ್!

ರಾಜ್ಯಪಾಲರು ಎರಡನೇ ಬಾರಿಗೆ ಡೆಡ್ ಲೈನ್ ನೀಡಿದ್ದರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ವಿಶ್ವಾಸ ಮತಯಾಚನೆ ಮಾಡಲಿಲ್ಲ. ಇನ್ನು ರಾತ್ರಿಯಾಗಿದ್ದರಿಂದ ಸ್ಪೀಕರ್ ರಮೇಶ್ ಕುಮಾರ್...

ರಾಜ್ಯಪಾಲರ 2ನೇ ಡೆಡ್‌ಲೈನ್‌ಗೂ ಡೋಂಟ್ ಕೇರ್: ಕಲಾಪ ಸೋಮವಾರಕ್ಕೆ ಮುಂದೂಡಿದ ಸ್ಪೀಕರ್!
ರಮೇಶ್ ಕುಮಾರ್
Published On :
ಬೆಂಗಳೂರು: ರಾಜ್ಯಪಾಲರು ಎರಡನೇ ಬಾರಿಗೆ ಡೆಡ್ ಲೈನ್ ನೀಡಿದ್ದರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ವಿಶ್ವಾಸ ಮತಯಾಚನೆ ಮಾಡಲಿಲ್ಲ. ಇನ್ನು ರಾತ್ರಿಯಾಗಿದ್ದರಿಂದ ಸ್ಪೀಕರ್ ರಮೇಶ್ ಕುಮಾರ್ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. 
ರಾಜ್ಯಪಾಲರ ನಿರ್ದೇಶನ ಹಿನ್ನೆಲೆಯಲ್ಲಿ ಇಂದು ತಡರಾತ್ರಿಯಾದರು ಪರವಾಗಿಲ್ಲ ಎಂದು ಬಿಜೆಪಿ ಮೌನವಾಗಿ ಕಳುತಿತ್ತು. ಆದರೆ ತಡವಾಗಿದೆ ಅಂತ ಸ್ಪೀಕರ್ ರಮೇಶ್ ಕುಮಾರ್ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. 
ಮಾಜಿ ಮುಖ್ಯಮಂತ್ರಿ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರು ಇನ್ನು ಮಾತನಾಡುವ ಶಾಸಕರು ಸಂಖ್ಯೆ ಜಾಸ್ತಿಯಿದೆ. ಹೀಗಾಗಿ ಇಂದು ವಿಶ್ವಾಸಯಾಚನೆಗೆ ಹಾಕುವುದು ಬೇಡ ಎಂದು ಸ್ಪೀಕರ್ ರಮೇಶ್ ಕುಮಾರ್ ಬಳಿ ಮನವಿ ಮಾಡಿದರು. 
ಇದಕ್ಕೆ ರಮೇಶ್ ಕುಮಾರ್ ಅವರು ಸೋಮವಾರ ಶತಾಯಗತಾಯ ವಿಶ್ವಾಸ ಮತಯಾಚನೆ ಪ್ರಸವ ಮುಗಿಸಲೇಬೇಕು ಎಂದು ಹೇಳಿ ವಿಧಾನಸಭೆಯಿಂದ ಹೊರನಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.