ನನ್ನ ತಂದೆ ರಾಜಿನಾಮೆಗೆ 'ಸೋ ಕಾಲ್ಡ್' ನಾಯಕರೇ ಕಾರಣ: ಸೌಮ್ಯ ರೆಡ್ಡಿ ಆಕ್ರೋಶ
ಮ್ಮ ತಂದೆ ಮೂಲೆ ಗುಂಪಾಗಲು ಸೋ ಕಾಲ್ಡ್ ನಾಯಕರೇ ಕಾರಣ, ಇದೇ ಬೇಸರದಿಂದಾಗಿ ಅವರು ರಾಜಿನಾಮೆ ನೀಡಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಹಾಗೂ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.

Published On :
ಬೆಂಗಳೂರು: ನಮ್ಮ ತಂದೆ ಮೂಲೆ ಗುಂಪಾಗಲು ಸೋ ಕಾಲ್ಡ್ ನಾಯಕರೇ ಕಾರಣ, ಇದೇ ಬೇಸರದಿಂದಾಗಿ ಅವರು ರಾಜಿನಾಮೆ ನೀಡಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಹಾಗೂ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ತಮ್ಮ ತಂದೆಯ ರಾಜಿನಾಮೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ತಂದೆ ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ, 7 ಬಾರಿ ಶಾಸಕರಾಗಿ ಸಚಿವರಾದವರನ್ನು ಮೈತ್ರಿ ಪಕ್ಷದಲ್ಲಿ ಮೂಲೆ ಗುಂಪು ಮಾಡಲಾಗಿದೆ, ಕೆಲವು ನಾಯಕರು ನನ್ನ ತಂದೆಯನ್ನು ಹೇಗೆ ನಡೆಸಿಕೊಂಡರು ಎಂಬುದು ನನಗೆ ತಿಳಿದಿದೆ ಎಂದು ಹೇಳಿದ್ದಾರೆ.
ಯಾರೋ ಶಾಸಕರು ರೆಸಾರ್ಟ್ಗೆ ಹೋದ್ರೆ ನಾನೇನ್ ಮಾತಾಡ್ಲಿ, ಜನ ಬಾಯಿಗೆ ಬಂದ ಹಾಗ ಮಾತನಾಡುತ್ತಾರೆ ಎಂದು ಕಿಡಿ ಕಾರಿದರು.
ಇನ್ನು ತಂದೆಯವರು ರಾಜೀನಾಮೆ ಕೊಡೋ ಕಾರಣ ಬೇರೆ, ಕಾಂಗ್ರೆಸ್ ಬಿಟ್ಟೋಗ್ತಾರೆ ಅಂತ ಯಾರ್ ಹೇಳಿದ್ದು(?) ರಾಜೀನಾಮೆ ನೀಡಿದ ಕಾರಣ ಗೊತ್ತಾ ನಿಮಗೆ(?) ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸದ್ಯ ಒಂದು ವರ್ಷದಿಂದ ಹೇಳ್ತಿದಾರೆ ಅವರು, 45 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಕಾಲ್ಡ್ ಸ್ಟೇಟ್ ಲೀಡರ್ ಮೂಲೆಗುಂಪು ಮಾಡಿದ್ದಾರೆ ಅದಕ್ಕೆ ಬೇಸರವಾಗಿ ರಾಜೀನಾಮೆ ಕೊಟ್ಟಿರೋದು ಎಂದು ಶಾಸಕಿ ಸೌಮ್ಯ ರೌಡಿ ಅವರು ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


