ರಾಜಕೀಯ

ಸಮ್ಮಿಶ್ರ ಸರ್ಕಾರ ಇನ್ ಸಂಕಟ: ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ಓಮರ್ ಅಬ್ದುಲ್ಲಾ ಹೇಳಿದ್ದಿಷ್ಟು

ಯಾರಿಗೂ ಗೊತ್ತಿಲ್ಲದ ವಿಚಾರಗಳು ಕುಮಾರಸ್ವಾಮಿ ಅವರಿಗೆ ಗೊತ್ತಿರಬಹುದು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಇನ್ ಸಂಕಟ: ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ಓಮರ್ ಅಬ್ದುಲ್ಲಾ ಹೇಳಿದ್ದಿಷ್ಟು
ಸಮ್ಮಿಶ್ರ ಸರ್ಕಾರ ಇನ್ ಸಂಕಟ: ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ಓಮರ್ ಅಬ್ದುಲ್ಲಾ ಹೇಳಿದ್ದಿಷ್ಟು
Published On :
ಶ್ರೀನಗರ: ಕಾಂಗ್ರೆಸ್-ಜೆಡಿಎಸ್  ಮೈತ್ರಿ ಕೂಟದ 13 ಶಾಸಕರು ರಾಜೀನಾಮೆ ಸಲ್ಲಿಸಿದ್ದರೂ ತಮ್ಮ ಸರ್ಕಾರ  ಸುಸೂತ್ರವಾಗಿ ಮುಂದುವರಿಯಲಿದೆ ಎಂಬ  ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆತ್ಮ ವಿಶ್ವಾಸದ  ಹೇಳಿಕೆಗೆ  ಸೋಮವಾರ  ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ ಓಮರ್ ಅಬ್ದುಲ್ಲಾ, ಯಾರಿಗೂ ಗೊತ್ತಿಲ್ಲದ ವಿಚಾರಗಳು ಕುಮಾರಸ್ವಾಮಿ ಅವರಿಗೆ ಗೊತ್ತಿರಬಹುದು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ  ಅವರು  ಗಂಭೀರ ವಿಶ್ವಾಸವನ್ನು ಪ್ರದರ್ಶಿಸಿದ್ದಾರೆ..!  ಯಾರಿಗೂ ಗೊತ್ತಿಲ್ಲದ  ವಿಷಯ ಅವರಿಗೆ ಗೊತ್ತಿರುವಂತೆ ಕಾಣುತ್ತದೆ  ಎಂದು   ಜಮ್ಮು ಕಾಶ್ಮೀರ  ಮಾಜಿ  ಮುಖ್ಯಮಂತ್ರಿಯೂ ಆಗಿರುವ  ಅಬ್ದುಲ್ಲಾ  ಟ್ವೀಟ್ ನಲ್ಲಿ  ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮೈತ್ರಿಕೂಟ ಸರ್ಕಾರದಲ್ಲಿ  ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಇತ್ಯರ್ಥಗೊಳ್ಳುವ ಸೂಚನೆ ನೀಡಿದ್ದ,  ಮುಖ್ಯಮಂತ್ರಿ ಕುಮಾರಸ್ವಾಮಿ, ತಮ್ಮ ಸರ್ಕಾರ ಸುಸೂತ್ರವಾಗಿ  ನಡೆಯಲಿದೆ ಎಂದು ಹೇಳಿದ್ದರು.
ಕರ್ನಾಟಕದ ಮೈತ್ರಿಕೂಟ ಡಜನ್ ಶಾಸಕರು  ವಿಧಾನಸಭಾ ಸ್ಪೀಕರ್ ಕಾರ್ಯಾಲಯಕ್ಕೆ  ತಮ್ಮ ರಾಜೀನಾಮೆ ಸಲ್ಲಿಸಿರುವ ಕಾರಣ 13 ತಿಂಗಳ  ಜೆಡಿಎಸ್; ಕಾಂಗ್ರೆಸ್  ಮೈತ್ರಿ ಸರ್ಕಾರ  ಡೋಲಾಯಮಾನ ಸ್ಥಿತಿಗೆ ತಲುಪಿದೆ. ಒಂದು ವೇಳೆ ಸ್ಪೀಕರ್ ರಾಜೀನಾಮೆ ಗಳನ್ನು ಸ್ವೀಕರಿಸಿದರೆ  ಸರ್ಕಾರ  ಬಹುಮತ ಕಳೆದುಕೊಳ್ಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.