ರಾಜಕೀಯ

ತರಾತುರಿಯಲ್ಲಿ ಬೆಂಗಳೂರಿಗೆ ದೌಡಾಯಿಸಿದ ಡಿ.ಕೆ ಶಿವಕುಮಾರ್: ಎಲ್ಲಾ ಸಚಿವರ ರಾಜಿನಾಮೆ ಕೊಡಿಸಲು ನಿರ್ಧಾರ

ಶಾಸಕರ ರಾಜಿನಾಮೆ ಸುದ್ದಿ ತಿಳಿಯುತ್ತಲೇ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಶನಿವಾರ ಜನಸಂಪರ್ಕ ಸಭೆ ರದ್ದು ಮಾಡಿ ಕನಕಪುರದಿಂದ ಬೆಂಗಳೂರಿಗೆ ..

ತರಾತುರಿಯಲ್ಲಿ ಬೆಂಗಳೂರಿಗೆ ದೌಡಾಯಿಸಿದ ಡಿ.ಕೆ ಶಿವಕುಮಾರ್: ಎಲ್ಲಾ ಸಚಿವರ ರಾಜಿನಾಮೆ ಕೊಡಿಸಲು ನಿರ್ಧಾರ
ಡಿ,ಕೆ ಶಿವಕುಮಾರ್
Published On :
ಬೆಂಗಳೂರು: ಶಾಸಕರ ರಾಜಿನಾಮೆ ಸುದ್ದಿ ತಿಳಿಯುತ್ತಲೇ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಶನಿವಾರ ಜನಸಂಪರ್ಕ ಸಭೆ ರದ್ದು ಮಾಡಿ ಕನಕಪುರದಿಂದ ಬೆಂಗಳೂರಿಗೆ ದೌಡಾಯಿಸಿದ್ದಾರೆ.
ಸರ್ಕಾರ ಉಳಿಸಿಕೊಳ್ಳಲು ನಾವು ಸಿದ್ದರಿದ್ದೇವೆ, ಅಗತ್ಯ ಬಿದ್ದಲ್ಲಿ ಕೆಲವರು ಸಚಿವ ಸ್ಥಾನವನ್ನೂ ತ್ಯಾಗ ಮಾಡುತ್ತಾರೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ನಮ್ಮ ಶಾಸಕರು ಸಚಿನರ ಜೊತೆ ಸಭೆ ನಡೆಸುತ್ತೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಇನ್ನೂ ಅತೃಪ್ತರ ಮನವೊಲಿಸಲು ಎಲ್ಲಾ ಹಾಲಿ ಸಚಿವರ ರಾಜಿನಾಮೆ ಕೊಡಿಸಿ, ಬಂಡಾಯ ಶಮನಕ್ಕೆ ಯತ್ನಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದ್ದಾರೆ.

ಬಿಜೆಪಿಯವರು ಸರ್ಕಾರವನ್ನು ಕೆಡವಲು ಪ್ರಯತ್ನ ಮಾಡ್ತಿದ್ದಾರೆ. ಸರಕಾರ ರಚನೆಯಾದ ದಿನದಿಂದಲೂ ಈ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಇವತ್ತು ಸಂಜೆ ಬೆಂಗಳೂರಿನಲ್ಲಿ ನಮ್ಮ ಶಾಸಕರು, ಸಚಿವರ ಜೊತೆಗೆ ಸಭೆ ನಡೆಸುತ್ತೇವೆ. ಸಭೆಯಲ್ಲಿ ಪರಮೇಶ್ವರ್ ಕೂಡ ಭಾಗಿಯಾಗ್ತಾರೆ . ಸರ್ಕಾರದ ಉಳಿವಿಗಾಗಿ ಅನೇಕ ಸಚಿವರು ತಮ್ಮ ಪದವಿಯನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.