ರಾಜಕೀಯ

ಜಗದೀಶ್ ಶೆಟ್ಟರ್ ರಿಂದ 60 ಕೋಟಿ ರು. ಸಚಿವ ಸ್ಥಾನದ ಆಮಿಷ: ಜೆಡಿಎಸ್ ಶಾಸಕ

ಬಿಜೆಪಿ ನಾಯಕರು ಜೆಡಿಎಸ್ ಶಾಸಕರಿಗೆ 60 ಕೋಟಿ ರುಪಾಯಿ ಹಾಗೂ ಸಚಿವ ಸ್ಥಾನ ನೀಡುವ ಆಮಿಷ ಒಡ್ಡುತ್ತಿದ್ದಾರೆ...

ಜಗದೀಶ್ ಶೆಟ್ಟರ್ ರಿಂದ 60 ಕೋಟಿ ರು. ಸಚಿವ ಸ್ಥಾನದ ಆಮಿಷ: ಜೆಡಿಎಸ್ ಶಾಸಕ
ಶಿವಲಿಂಗೇಗೌಡ
Published On :
ಬೆಂಗಳೂರು: ಬಿಜೆಪಿ ನಾಯಕರು ಜೆಡಿಎಸ್ ಶಾಸಕರಿಗೆ 60 ಕೋಟಿ ರುಪಾಯಿ ಹಾಗೂ ಸಚಿವ ಸ್ಥಾನ ನೀಡುವ ಆಮಿಷ ಒಡ್ಡುತ್ತಿದ್ದಾರೆ ಎಂದು ಅರಸಿಕರೆ ಜೆಡಿಎಸ್ ಶಾಸಕ ಕೆ.ಎಸ್‌. ಶಿವಲಿಂಗೇಗೌಡ ಅವರು ಬುಧವಾರ ಆರೋಪಿಸಿದ್ದಾರೆ. 
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಲಿಂಗೇಗೌಡ,ರಾಜ್ಯ ರಾಜಕೀಯದಲ್ಲಿ ಕುದುರೆ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಇದಕ್ಕಾಗಿ ಬಿಜೆಪಿಯವರು ದುಡ್ಡಿನ ಸುರಿಮಳೆಗರೆಯುತ್ತಿದ್ದಾರೆ ಎಂದರು.
ತುಮಕೂರು ಗ್ರಾಮಾಂತರ ಶಾಸಕರೇ ಖುದ್ದಾಗಿ ನನ್ನ ಬಳಿ ಈ ಕುರಿತು ಹೇಳಿಕೊಂಡಿದ್ದಾರೆ. ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರೇ ಕರೆ ಮಾಡಿ ಇಷ್ಟೊಂದು ಆಫರ್‌ ಮಾಡಿದರು ಎಂದು ಮಾಹಿತಿ ನೀಡಿದ್ದರು ಎಂದರು.
ಬಿಜೆಪಿಯವರು 60 ಕೋಟಿ ರು. ಅಲ್ಲ, 500 ಕೋಟಿ ರು. ಕೊಟ್ಟರು ಜೆಡಿಎಸ್‌ ಬಿಟ್ಟು ಬರೋಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟೇ ಎಂದೂ ತುಮಕೂರು ಗ್ರಾಮಾಂತರ ಶಾಸಕರು ಹೇಳಿರುವುದಾಗಿ ಶಿವಲಿಂಗೇಗೌಡ ತಿಳಿಸಿದ್ದಾರೆ.
ಬಿಜೆಪಿಯವರು ನಾಚಿಕೆ ಇಲ್ಲದೇ ಈ ರೀತಿಯ ದಂಧೆಗೆ ಇಳಿಯುತ್ತಿದ್ದಾರೆ. ಆದರೆ ಜೆಡಿಎಸ್‌ನ ಯಾವೊಬ್ಬ ಶಾಸಕ ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.