'8 ತಿಂಗಳಿಂದ ಸಿಎಂರನ್ನು ಗೋಳಾಡಿಸುತ್ತಿದ್ದೀರಿ, ಇಲ್ಲಿಗೆ ನಿಲ್ಲಿಸದಿದ್ದರೇ ಶಾಪ ತಟ್ಟುತ್ತದೆ'
ಮನೆಯಿಂದ ಹೊರಟರೆ ಹೆಂಡತಿ, ಮಕ್ಕಳು ಅನುಮಾನದಿಂದ ನೋಡುತ್ತಾರೆ ಎಂದು ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ಜೆಡಿಎಸ್‌ನ ಶಿವಲಿಂಗೇಗೌಡ ಅವರು ...

Published On :
ಬೆಂಗಳೂರು: ಮನೆಯಿಂದ ಹೊರಟರೆ ಹೆಂಡತಿ, ಮಕ್ಕಳು ಅನುಮಾನದಿಂದ ನೋಡುತ್ತಾರೆ ಎಂದು ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ಜೆಡಿಎಸ್‌ನ ಶಿವಲಿಂಗೇಗೌಡ ಅವರು ಮೇಲಿನ ಸಾಲು ಉಲ್ಲೇಖೀಸುವ ಮೂಲಕ ಶಾಸಕರ ಸ್ಥಿತಿ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿದರು.
ಈ ಹಿಂದೆ ಶಾಸಕರ ಬಗ್ಗೆ ಅಪಾರ ಗೌರವವಿತ್ತು.ಇಂದು ಅದು ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಮನೆಯಿಂದ ಹೊರಟರೆ ಹೆಂಡತಿ, ಮಕ್ಕಳು ಅನುಮಾನದಿಂದ ನೋಡುತ್ತಾರೆ. ಏನೇನೋ ಡೀಲ್ ನಡೆಯುತ್ತಿದೆ ಎಂದು ಅಪಪ್ರಚಾರ ನಡೆಯುತ್ತಿದೆ. ಗೌರವದಿಂದ ಹೋಗಿ ಬನ್ನಿ ಎನ್ನುತ್ತಾರೆ. ಇವರು ಯಾರೊಬ್ಬರನ್ನೂ ಬಿಟ್ಟಿಲ್ಲ. ತರಹೇವಾರಿ ಆಮಿಷ ಒಡ್ಡಲಾಗುತ್ತಿದೆ ಎಂದು ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರವನ್ನು ತೆಗೆಯಲು ಎಷ್ಟು ವಿದ್ಯಮಾನ ನಡೆಸು ವುದು? 8 ತಿಂಗಳಿನಿಂದ ನಡೆಯುತ್ತಲೇ ಇದೆ. ಸ್ವಲ್ಪ ವಾದರೂ ಆತ್ಮಗೌರವ ಇಲ್ಲವೇ? 8 ತಿಂಗಳಿನಿಂದ ಮುಖ್ಯಮಂತ್ರಿಗಳು ಇಷ್ಟೊಂದು ಗೋಳು ಹೊಯ್ದುಕೊಂಡರೆ ಶಾಪ ತಟ್ಟದೇ ಬಿಡುತ್ತದೆಯೇ? ನಿಮಗೆ ಶಾಪ ತಟ್ಟಲಿದೆ. ನಿಮ್ಮ ನಾಟಕಕ್ಕೆ ತೆರೆ ಎಳೆಯಿರಿ. ಕೆಟ್ಟ ಕೆಲಸ ವಿರೋಧಿಸಿ ಎಂದು ಶಿವಲಿಂಗೇಗೌಡ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


