'ಮಹಿಷಿ ನಮ್ಮ ಮನೆ ದೇವರು, ಹಸು ಹೊರಗಡೆಯಿಂದ ತಂದಿದ್ದು; ಸಿಎಎ ಅವಶ್ಯಕತೆ ಇರಲಿಲ್ಲ'
ಪೌರತ್ವ ತಿದ್ದುಪಡಿ ಕಾಯಿದೆ ಯಾರಿಗೂ ಅವಶ್ಯಕತೆಯೇ ಇರಲಿಲ್ಲ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ಯಾರಿಗೂ ಅವಶ್ಯಕತೆಯೇ ಇರಲಿಲ್ಲ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.
ಪುರಭವನ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶ ಆರ್ಥಿಕ ವ್ಯವಸ್ಥೆ ಸರಿಪಡಿಸುವ ಬಗ್ಗೆ ಕೇಂದ್ರ ಮೊದಲು ಗಮನ ಹರಿಸಲಿ. ನಮಗೆ ಅನ್ನ ಸಿಗುತ್ತಿಲ್ಲ. ಈಗ ಬೇರೆ ಕಡೆಯಿಂದ ಜನರನ್ನು ಕರೆದುಕೊಂಡು ಬಂದು ಪೌರತ್ವ ಕೊಡುತ್ತೇವೆ ಎನ್ನುತ್ತಿದ್ದಾರೆ. ಮೊದಲು ನಮಗೆ ಅನ್ನ ಕೊಡಿ ಎಂದರು.
ಪಾಕಿಸ್ತಾನ, ಬಾಂಗ್ಲಾದೇಶದ ಹಿಂದೂಗಳಿಗೆ ಪೌರತ್ವ ಕೊಡುವುದಕ್ಕೆ ತಮ್ಮ ವಿರೋಧ ಇಲ್ಲ. ನನಗೆ ಎಷ್ಟು ಜನ ಮಕ್ಕಳ ಇದ್ದಾರೆ ಎನ್ನುವುದಾಗಲಿ ಅವರೆಲ್ಲ ಯಾವ ತರಗತಿಯಲ್ಲಿ ಓದುತ್ತಿದ್ದಾರೆ ಎಂದು ಗೊತ್ತಿಲ್ಲ. ಈಗ ನೀ ಎಲ್ಲಿ ಹುಟ್ಟಿದ್ದೆ ನಿಮ್ಮ ಅಪ್ಪ ಯಾರು? ನಿಮ್ಮ ಅಮ್ಮ ಯಾರು? ಎಂದು ದಾಖಲೆ ಕೇಳಿದರೆ ದಾಖಲೆ ಕೊಡಲು ಸಾಧ್ಯವೇ?
ಮಹಿಷಿ ನಮ್ಮ ಮನೆ ದೇವರು. ಹಸು ಹೊರಗಡೆಯಿಂದ ತಂದಿದ್ದು, ಜನರಿಗೆ ತಿನ್ನಲು ಅನ್ನ ಕೊಡಿ, ಹದಗೆಟ್ಟಿರುವ ಆರ್ಥಿಕ ಸ್ಥಿತಿ ಸರಿ ಪಡಿಸಲು ಪ್ರಧಾನಿ ಮೋದಿ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


