ಶತ್ರು ಸಂಹಾರಕ್ಕಾಗಿ ಸುದರ್ಶನ ನರಸಿಂಹ ಹೋಮ ನಡೆಸಿದ ಮುಖ್ಯಮಂತ್ರಿ ಬಿಎಸ್ ವೈ!
ಯಡಿಯೂರಪ್ಪ ಅವರು ಧವಳಗಿರಿ ನಿವಾಸದಲ್ಲಿ ಸುದರ್ಶನ ನರ ಸಿಂಹ ಹೋಮ ನಡೆಸಿದರು. ಹೋಮದಲ್ಲಿ ಬಿ.ವೈ.ವಿಜಯೇಂದ್ರ ದಂಪತಿ ಮಾತ್ರ ಪಾಲ್ಗೊಂಡಿದ್ದು ವಿಶೇಷ.

ಬೆಂಗಳೂರು: ಉಪ ಚುನಾವಣೆ ಬಳಿಕ ಪಕ್ಷ ಹಾಗೂ ಸರ್ಕಾರದ ಮೇಲೆ ಹಿಡಿತ ಸಾಧಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶತ್ರುಗಳ ಆತಂಕವೂ ಹೆಚ್ಚಾಗಿದೆ. ತಮ್ಮ ಕಿರಿಯ ಪುತ್ರ ಬಿವೈ ವಿಜಯೇಂದ್ರ ವರ್ಚಸ್ಸು, ಸಾಮರ್ಥ್ಯ ಕೂಡ ಮುನ್ನೆಲೆಗೆ ಬಂದಿರುವುದು ಯಡಿಯೂರಪ್ಪ ಅವರ ಆತಂಕ ಕ್ಕೆ ಕಾರಣವಾಗಿದೆ.ಹೀಗಾಗಿ ಶತ್ರು ಸಂಹಾರಕ್ಕಾಗಿ ತಮ್ಮ ನಿವಾಸದಲ್ಲಿ ಸುದರ್ಶನ ಹೋಮ ನಡೆಸಿದ್ದಾರೆ.
ಇಂದು ಮುಂಜಾನೆಯಿಂದ ಸತತ ಮೂರು ಗಂಟೆಗಳ ಕಾಲ ಕುಟುಂಬದ ಅರ್ಚಕ ರನ್ನು ಕರೆಸಿ ಯಡಿಯೂರಪ್ಪ ಅವರು ಧವಳಗಿರಿ ನಿವಾಸದಲ್ಲಿ ಸುದರ್ಶನ ನರ ಸಿಂಹ ಹೋಮ ನಡೆಸಿದರು. ಹೋಮದಲ್ಲಿ ಬಿ.ವೈ.ವಿಜಯೇಂದ್ರ ದಂಪತಿ ಮಾತ್ರ ಪಾಲ್ಗೊಂಡಿದ್ದು ವಿಶೇಷ.
ಸುದರ್ಶನ ಹೋಮದಲ್ಲಿ ಅಪ್ಪ-ಮಗ ಇಬ್ಬರೂ ಶ್ವೇತ ವರ್ಣದ ರೇಷ್ಮೆ ಪಂಚೆ, ಶಲ್ಯ, ಅಂಗಿ ತೊಟ್ಟು ಭಾಗವಹಿಸಿದರು.ಹೋಮ ನಡೆಸಿದ ಅವಧಿಯಲ್ಲಿ ಧವಳಗಿರಿ ನಿವಾಸಕ್ಕೆ ಯಾವುದೇ ಸಚಿವರು, ಶಾಸಕರು,ಮುಖಂಡ ರು, ಸಾರ್ವಜನಿಕರ ಪ್ರವೇಶ ನಿರ್ಬಂಧಿಸ ಲಾಗಿತ್ತು.ಅಷ್ಟೇ ಅಲ್ಲ ಆಪ್ತ ಸಹಾಯಕ ರು,ಅಧಿಕಾರಿಗಳಿಗೂ ಪ್ರವೇಶ ನೀಡರಲಿಲ್ಲ.
ಸುದರ್ಶನ ನರಸಿಂಹ ಹೋಮ ನಡೆಸುವ ಮೂಲಕ ಯಡಿಯೂರಪ್ಪ ತಮಗೆ ಮತ್ತು ಮಗ ವಿಜಯೇಂದ್ರಗೆ ಎದುರಾಗುವ ಶತ್ರು ಸಂಕಷ್ಟಗಳನ್ನು ಪರಿಹರಿಸಿ ಕೊಂಡರು. ಉಳಿದ ಅವಧಿಗೆ ಯಾವ ಅಡೆತಡೆಯೂ ಎದುರಾಗದಂತೆ ಸಂಕಷ್ಟ ನಿವಾರಿಸಿಕೊಂಡಿದ್ದಾರೆ.ಶತ್ರು ನಿಗ್ರಹಕ್ಕಾಗಿ ಯಡಿಯೂರಪ್ಪ ನಡೆಸಿದ ಈ ಹೋಮ ಸದ್ಯ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


