ರಾಜಕೀಯ

ಕೊನೆ ಕ್ಷಣದಲ್ಲಿ ಕೈ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರ ಪ್ರಚಾರಕ್ಕಿಳಿದ ಅನಿಲ್ ಲಾಡ್ 

ಉಪ ಚುನಾವಣೆಗೆ ಇನ್ನೂ ಕೇವಲ ಮೂರು ದಿನಗಳು ಬಾಕಿ ಇರುವಂತೆಯೇ ಕೊನೆ ಕ್ಷಣದಲ್ಲಿ ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರ ಅನಿಲ್ ಲಾಡ್ ಪ್ರಚಾರ ನಡೆಸಿದ್ದಾರೆ.

ಕೊನೆ ಕ್ಷಣದಲ್ಲಿ ಕೈ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರ ಪ್ರಚಾರಕ್ಕಿಳಿದ ಅನಿಲ್ ಲಾಡ್ 
ಅನಿಲ್ ಲಾಡ್
Published On :

ಹೊಸಪೇಟೆ: ಉಪ ಚುನಾವಣೆಗೆ ಇನ್ನೂ ಕೇವಲ ಮೂರು ದಿನಗಳು ಬಾಕಿ ಇರುವಂತೆಯೇ ಕೊನೆ ಕ್ಷಣದಲ್ಲಿ ವಿಜಯನಗರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರ ಅನಿಲ್ ಲಾಡ್ ಪ್ರಚಾರ ನಡೆಸಿದ್ದಾರೆ.

 ಮೊನ್ನೆಯಷ್ಟೇ ಬಿಜೆಪಿ ಸೇರ್ಪಡೆಗೊಳ್ಳಲು ಚಿಂತನೆ ನಡೆಸಿದ್ದ ಅನಿಲ್ ಲಾಡ್ ಇಬ್ಬಂದಿ ನೀತಿ ಅನುಸರಿಸುತ್ತಿದ್ದಾರೆ. ಬಿಜೆಪಿಯ ಯಾವೊಬ್ಬ ಮುಖಂಡರು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಮುಖಭಂಗ ಅನುಸರಿಸಿದ್ದಾರೆ. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ಲಾಡ್, ಬಿಜೆಪಿ ಪಕ್ಷಕ್ಕೆ ಬರುವಂತೆ ಮೊದಲು ಆನಂದ್ ಸಿಂಗ್ ಅವರೇ ಆಹ್ವಾನ ನೀಡಿದ್ರು. ಆದರೆ, ನಂತರ ಅವರ ಮೊಬೈಲ್ ಸ್ವೀಚ್ ಆಫ್ ಆಗಿತ್ತು. ರಾಮುಲು ಸೇರಿದಂತೆ ಬಿಜೆಪಿ ಕಡೆಯಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ. ಜಿಂದಾಲ್ ವಿಚಾರದಲ್ಲಿ ಆನಂದ ಸಿಂಗ್ ಜೊತೆಗೆ ಸೇರಿ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ಮಾಡಿದೆ. ಆದರೆ, ಆನಂದ್ ಸಿಂಗ್ ನನಗೆ ಕೈ ಕೊಟ್ಟು ಬಿಜೆಪಿ ಸೇರ್ಪಡೆಯಾದ್ರು, ನನ್ನ ಕೈಗೆ ಸಿಗಲೇ ಇಲ್ಲ ಎಂದು ಹೇಳಿದರು. 

ಆನಂದ ಸಿಂಗ್ ಸೂರ್ಯ ಇದ್ದಂಗೆ ಬೆಳಕು ಕೊಡ್ತಾನೆ. ಹತ್ತಿರ ಹೋದ್ರೇ ಸುಟ್ಟು ಬಿಡ್ತಾನೆ ಎಂದು ವಾಗ್ದಾಳಿ ನಡೆಸಿದ ಅನಿಲ್ ಲಾಡ್, 
ಪರೋಕ್ಷವಾಗಿ ನಾನು ಕಾಂಗ್ರೆಸ್ ನಲ್ಲಿ ಇಲ್ಲ ಎಂದು ಸ್ಪಷ್ಪಪಡಿಸಿದರು. ವೆಂಕಟರಾವ್ ಘೋರ್ಪಡೆ  ನಮ್ಮ ಮಹಾರಾಜರು. ಅವರು ಕರೆದಿದ್ದಾರೆಂದು ಪ್ರಚಾರಕ್ಕೆ ಬಂದಿದ್ದೇನೆ. ಸದ್ಯ ಕಾಂಗ್ರೆಸ್ ನಲ್ಲೇ ಇರುವುದಾಗಿ ತಿಳಿಸಿದರು. ಅತಂತ್ರವಾಗಿ ಮಾತನಾಡಿದ ಅನಿಲ್ ಲಾಡ್ ಸದ್ಯ ಎತ್ತ ಹೋಗಬೇಕನ್ನೋದೇ ಅವರಿಗೆ ಗೊತ್ತಾಗುತ್ತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.