ಬಿಬಿಎಂಪಿಯಲ್ಲಿ ಬಿಜೆಪಿಗೆ ಮುಖಭಂಗ: ಮತ್ತೆ 'ಆಪರೇಷನ್' ವಿಫಲ!
ನಿನ್ನೆ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಿಂದ ಹಿಂದೆ ಸರಿಯಿತು,. ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿಗೆ ಮುಖಭಂಗವಾಗಿ ಕೊನೆ ...

Published On :
ಬೆಂಗಳೂರು: ನಿನ್ನೆ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಿಂದ ಹಿಂದೆ ಸರಿಯಿತು,. ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿಗೆ ಮುಖಭಂಗವಾಗಿ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಬಿಜೆಪಿ ಗೆಲ್ಲಲು ಹೆಚ್ಚಿನ ಅವಕಾಶವಿತ್ತು, ಆದರೆ ಜೆಡಿಎಸ್- ಕಾಂಗ್ರೆಸ್ ದೋಸ್ತಿಗಳು ಬಿಜೆಪಿ ಆಸೆಗೆ ತಣ್ಣೀರು ಎರಚಿದೆ, ಅಂತಿಮ ಕ್ಷಣದಲ್ಲಿ ಬಿಜೆಪಿ ಸಮರ ಕಣದಿಂದ ಹಿಂದೆ ಸರಿಯುವುದು ಬಿಜೆಪಿಗೆ ಟ್ರೆಂಡ್ ಆಗಿದೆ, ಇತ್ತೀಚೆಗೆ ನಡೆದ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸದೇ ಹಿಂದೆ ಸರಿಯಿತು.
ಶುಕ್ರವಾರ ಕೂಡ ಇದೇ ಕಥೆ ಪುನಾರಾವರ್ತನೆಯಾಯಿತು. 259 ಮಂದಿ ಮತದಾನಕ್ಕೆ ಅರ್ಹರಿದ್ದರೂ ಅದರಲ್ಲಿ 5 ಮಂದಿ ಗೈರಾಗಿದ್ದರು, ಮತ್ತೊಬ್ಬರು ತಡವಾಗಿ ಬಂದಿದ್ದಕ್ಕೆ ಮತದಾನಕ್ಕೆ ಅವಕಾಶ ನೀಡಲಿಲ್ಲ, ಹೀಗಾಗಿ ಉಳಿದ 253 ಮಂದಿಯಲ್ಲಿ ಗೆಲುವಿಗೆ 127 ಮಂದಿ ಮತದಾನ ಮಾಡಬೇಕಿತ್ತು,
ಬಿಜೆಪಿ 121 ಮಂದಿ ಬಲ ಹೊಂದಿತ್ತು, ಇಬ್ಬರು ಪಕ್ಷೇತರರನ್ನು ಬಿಜೆಪಿ ಪರ ಮತ ಹಾಕಿಸಲು ಯಶಸ್ವಿಯಾಗಿತ್ತು, ಆದರೆ ಆನಂದ್ ಕುಮಾರ್ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಗೆ ಮತ ಹಾಕಿದ್ರು, ಬಿಜೆಪಿ ಜೆಡಿಎಸ್ ಮಂಜುಳಾ ನಾರಾಯಣ ಸ್ವಾಮಿ ಮತ್ತು ದೇವದಾಸ್ ಅವರನ್ನು ಒಲಿಸಿಕೊಳ್ಳಲು ಯಶಸ್ವಿಯಾಗಿತ್ತು, ಆದರೆ ಬಿಜೆಪಿ ಸಭಾತ್ಯಾಗ ಮಾಡಿ ಹೊರ ನಡೆದ ನಂತರ ಇಬ್ಬರು ಜೆಡಿಎಸ್ ಪರ ವಾಲಿದರು.
ಗೆಲುವಿಗೆ ಕೇವಲ ಎರಡು ಮತಗಳು ಬೇಕಿತ್ತು, ಕಾಂಗ್ರೆಸ್ ನಾಯಕರ ವರ್ತನೆಯಿಂದ ಕೆಲವು ಕೌನ್ಸಿಲರ್ ಗಳು ಬೇಸತ್ತಿದ್ದರು. ಆಶಾ ಸುರೇಶ್ ಶಾಸಕ ಮುನಿರತ್ನ ಗೈರಾಗಿದ್ದರು,. ಒಂದು ವೇಳೆ ಬಿಜೆಪಿ ಆಕೆಯ ಮನವೊಲಿಸಿದ್ದರೇ ಆವರು ಬಿಜೆಪಿಗೆ ಮತ ಹಾಕುತ್ತಿದ್ದರು. ಇದು ಬಿಜೆಪಿ ಪಾಲಿಗೆ ಮಿಸ್ ಆಯ್ತು ಎಂದು ಮೂಲಗಳು ತಿಳಿಸಿವೆ, ಬಿಬಿಎಂಪಿಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದರೂ ಬಿಜೆಪಿಗೆ ಮೇಯರ್ ಹುದ್ದೆ ದೊರಕದಿದ್ದದ್ದು ದುರಾದೃಷ್ಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


