ರಾಜಕೀಯ

ಪ್ರಜಾಪ್ರತಿನಿಧಿ ಕಾಯ್ದೆ ಗಮನದಲ್ಲಿಟ್ಟು ಕೆಲಸ ಮಾಡಿ: ಶಾಸಕರಿಗೆ ನೂತನ ಸ್ಪೀಕರ್ ಕಿವಿಮಾತು

ಸದನದ ಎಲ್ಲ ಶಾಸಕರು ಪ್ರಜಾಪ್ರತಿನಿಧಿ ಕಾಯ್ದೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ನೂತನ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರು ಹೇಳಿದರು.

ಪ್ರಜಾಪ್ರತಿನಿಧಿ ಕಾಯ್ದೆ ಗಮನದಲ್ಲಿಟ್ಟು ಕೆಲಸ ಮಾಡಿ: ಶಾಸಕರಿಗೆ ನೂತನ ಸ್ಪೀಕರ್ ಕಿವಿಮಾತು
ನೂತನ ಸ್ಪೀಕರ್ ರಮೇಶ್ ಕುಮಾರ್
Published On :
ಬೆಂಗಳೂರು: ಸದನದ ಎಲ್ಲ ಶಾಸಕರು ಪ್ರಜಾಪ್ರತಿನಿಧಿ ಕಾಯ್ದೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ನೂತನ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರು ಹೇಳಿದರು.
ಇಂದು ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆಯಾದ ಬಳಿಕ ಸದನವನ್ನು ಉದ್ದೇಶಿಸಿ ಮಾತನಾಡಿದ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರು, ಜನರನ್ನು ಪ್ರತಿನಿಧಿಸುವುದೇ ನಿಮ್ಮ ಆದ್ಯ ಕರ್ತವ್ಯವಾಗಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವಂತೆ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ಅಂತೆಯೇ ತಮ್ಮನ ಮೇಲೆ ವಿಶ್ವಾಸವನ್ನಿಟ್ಟು ತಮ್ಮನ್ನು ಆಯ್ಕೆ ಮಾಡಿದ ಶಾಸಕರಿಗೆ ಮತ್ತು ತಮ್ಮ ಆಯ್ಕೆಗೆ ಅನುವು ಮಾಡಿಕೊಟ್ಟ ವಿಪಕ್ಷ ಮುಖಂಡರಿಗೂ ರಮೇಶ್ ಕುಮಾರ್ ಅವರು ಧನ್ಯವಾದ ತಿಳಿಸಿದರು. ನನ್ನನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಶಾಸಕಾಂಗ ಸಭೆಯ ಎಲ್ಲ ಶಾಸಕರಿಗೂ ಹಾಗೂ ಮೈತ್ರಿ ಸರ್ಕಾರದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ಎಲ್ಲ ನಾಯಕರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಅಂತೆಯೇ ನೀವು ನನ್ನಲ್ಲಿ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಇದೇ ವೇಳೆ ನಮ್ಮ ನಡವಳಿಕೆಯಿಂದ ಯಾರಿಗೂ ಬೇಸರವಾಗದಂತೆ ಕೆಲಸ ಮಾಡೋಣ  ಎಂದು ಹೇಳಿದರು. ಇದೇ ವೇಳೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಶ್ಲಾಘಿಸಿದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಅಭಿನಂದನೆಗೆ ನಾನೆಷ್ಟು ಅರ್ಹ ಗೊತ್ತಿಲ್ಲ. ಸದನದ ಎಲ್ಲಾ ಸದಸ್ಯರಿಗೆ  ಅಭಿನಂದನೆ ಸಲ್ಲಿಸುತ್ತೇನೆ. ನನಗೆ ರಾಜಕೀಯ ಜನ್ಮ ನೀಡದ್ದು ದಿ.ಶ್ರೀಮತಿ ಇಂದಿರಾ ಗಾಂಧಿ , ಬಿ.ಎಸ್.ಯಡಿಯೂರಪ್ಪ ಬಗ್ಗೆಯೂ ಅಪಾರ ಗೌರವವಿದೆ. ಶಾಸಕಾಂಗದ ಶಿಸ್ತನ್ನು ಮಲ್ಲಿಕಾರ್ಜುನ ಖರ್ಗೆ ಅವರಿಂದ ಕಲಿತೆ. ಎಂದು ಹೇಳಿದರು.
ಇನ್ನು ನೂತನ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಸಭಾಧ್ಯಕ್ಷರು, 'ಇಲ್ಲಿ ಯಾರೂ ಸರ್ವಜ್ಞರಲ್ಲ, ಎಲ್ಲರಿಂದ ಕಲಿತುಕೊಳ್ಳಿ. ಸದನದಲ್ಲಿ ನಿಮ್ಮ ಮಾತು ಮೊನಚಾಗಿರಲಿ ಮತ್ತು ಅರ್ಥ ಪೂರ್ಣವಾಗಿರಲಿ. ನಾವೆಲ್ಲರೂ ಅಂಬೇಡ್ಕರ್​ ಅವರಿಗೆ ಋಣಿಯಾಗಿರೋಣ. ಎಲ್ಲರೂ ಸಮಾನ ಅವಕಾಶವನ್ನು ಬಳಸಿಕೊಳ್ಳೋಣ. ಭಾಷೆಯನ್ನು ಅತ್ಯಂತ ಸೂಕ್ಷ್ಮವಾಗಿ ಬಳಕೆ ಮಾಡೋಣ. ಯಾವುದೇ ಅಪ ಪ್ರಚಾರಕ್ಕೆ ನಾವು ಎಡೆಮಾಡಿಕೊಡಬಾರದು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಕಿವಿಮಾತು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.