ರಾಜಕೀಯ

ಪ್ರಿಯಕೃಷ್ಣ ವಿರುದ್ಧ ರಾಜಕೀಯ ಸೇಡು ತೀರಿಸಿಕೊಂಡ ಬಿಜೆಪಿ ನಾಯಕ ವಿ.ಸೋಮಣ್ಣ

ಮಾಡು ಇಲ್ಲವೇ ಮಡಿ ಆಗಿದ್ದ ಚುನಾವಣೆಯಲ್ಲಿ ಗೋವಿಂದರಾಜ ನಗರ ಮತದಾರ ಕೊನೆಗೂ ಬಿಜೆಪಿಯ ವಿ.ಸೋಮಣ್ಣ ಅವರ ಕೈ ಹಿಡಿದಿದ್ದಾರೆ...

ಪ್ರಿಯಕೃಷ್ಣ ವಿರುದ್ಧ ರಾಜಕೀಯ ಸೇಡು ತೀರಿಸಿಕೊಂಡ ಬಿಜೆಪಿ ನಾಯಕ ವಿ.ಸೋಮಣ್ಣ
ವಿ.ಸೋಮಣ್ಣ
Published On :
ಬೆಂಗಳೂರು; ಮಾಡು ಇಲ್ಲವೇ ಮಡಿ ಆಗಿದ್ದ ಚುನಾವಣೆಯಲ್ಲಿ ಗೋವಿಂದರಾಜ ನಗರ ಮತದಾರ ಕೊನೆಗೂ ಬಿಜೆಪಿಯ ವಿ.ಸೋಮಣ್ಣ ಅವರ ಕೈ ಹಿಡಿದಿದ್ದಾರೆ. 
2009ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಿಯಾಕೃಷ್ಣ ವಿರುದ್ಧ ಸೋಲು ಕಂಡಿದ್ದ ಸೋಮಣ್ಣ ಅವರು ಈ ಬಾರಿಯ ಚುನಾವಣೆಯಲ್ಲಿ 11,375 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಈ ಮೂಲಕ ಪ್ರಿಯಕೃಷ್ಣ ವಿರುದ್ಧ ಇದ್ದ 10 ವರ್ಷಗಳ ರಾಜಕೀಯ ಸೇಡನ್ನು ಸೋಮಣ್ಣ ಅವರು ತೀರಿಸಿಕೊಂಡಿದ್ದಾರೆ. 
ಪ್ರಚಾರದ ದಿನದಿಂದಲೂ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇತ್ತು. ಆದರೆ, ಕ್ಷೇತ್ರದ ಆರು ವಾರ್ಡ್ ಗಳಲ್ಲಿ ಬಿಜೆಪಿ ಇರುವುದು, ಕಳೆದ ಎರಡು ಬಾರಿ ಸೋತಿದ್ದ ಅನುಕಂಪ ಹಾಗೂ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಮತ್ತು ಕುರುಬ ಮತಗಳು ಸೋಮಣ್ಣ ಅವರ ಗೆಲುವಿಗೆ ಸಹಕಾರಿಯಾಗಿತ್ತು. 
ಸೋಮಣ್ಣ ಅವರು 79,135 ಮತ ಪಡೆದರೆ, ಪ್ರಿಯಾಕೃಷ್ಣ ಅವರು 67,760 ಮತ ಹಾಗೂ ಜೆಡಿಎಸ್ ಅಭ್ಯರ್ಥಿ ಕೇವಲ 7090 ಮತ ಪಡೆದೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.