ರಾಜಕೀಯ

ಬಿಜೆಪಿ ಹಿಡಿತದಲ್ಲಿ ಕೈ ಶಾಸಕ ಆನಂದ್ ಸಿಂಗ್, ಉಳಿದ ಎಲ್ಲಾ ಶಾಸಕರೂ ನಮ್ಮ ಜೊತೆ: ಸಂಸದ ಡಿಕೆ ಸುರೇಶ್

ಕಾಂಗ್ರೆಸ್ ಮತ್ತು ಜೆಡಿಎಸ್ ನ ಎಲ್ಲ ಶಾಸಕರೂ ಜೊತೆಗಿದ್ದು, ಶಾಸಕ ಆನಂದ್ ಸಿಂಗ್ ಮಾತ್ರ ಜೊತೆಗಿಲ್ಲ.. ಬಹಶಃ ಅವರು ಪ್ರಧಾನಿ ಮೋದಿ ಹಿಡಿತದಲ್ಲಿರಬಹುದು ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ಬಿಜೆಪಿ ಹಿಡಿತದಲ್ಲಿ ಕೈ ಶಾಸಕ ಆನಂದ್ ಸಿಂಗ್, ಉಳಿದ ಎಲ್ಲಾ ಶಾಸಕರೂ ನಮ್ಮ ಜೊತೆ: ಸಂಸದ ಡಿಕೆ ಸುರೇಶ್
ಪ್ರತಿಭಟನೆ ವೇಳೆ ಮಾತನಾಡಿದ ಡಿಕೆ ಸುರೇಶ್
Published On :
ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನ ಎಲ್ಲ ಶಾಸಕರೂ ಜೊತೆಗಿದ್ದು, ಶಾಸಕ ಆನಂದ್ ಸಿಂಗ್ ಮಾತ್ರ ಜೊತೆಗಿಲ್ಲ.. ಬಹಶಃ ಅವರು ಪ್ರಧಾನಿ ಮೋದಿ ಹಿಡಿತದಲ್ಲಿರಬಹುದು ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಅತ್ತ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಇತ್ತ ಈಗಲ್ಟನ್ ರೆಸಾರ್ಟ್ ನಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ಬೆಂಗಳೂರಿಗೆ ಆಗಮಿಸಿದ್ದು, ಸಿಎಂ ಸಿದ್ದಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ವೈಎಸ್ ವಿದತ್ತಾ ಮತ್ತಿತರ ನಾಯಕ ನೇತೃತ್ವದಲ್ಲಿ ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಸಂಸದ ಡಿಕೆ ಸುರೇಶ್ ಅವರು ಮಾತನಾಡಿ, ಎಲ್ಲ ಶಾಸಕರೂ ನಮ್ಮ ಜೊತೆಗಿದ್ದಾರೆ. ಹೀಗಾಗಿ ಬಿಜೆಪಿ ಬಹುಮತ ಅಸಾಧ್ಯ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಕುರಿತು ಮಾತನಾಡಿದ ಸುರೇಶ್, ಆನಂದ್ ಸಿಂಗ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬಹುಶಃ ಅವರು ಪ್ರಧಾನಿ ಮೋದಿ ಮತ್ತು ಬಿಜೆಪಿ ಹಿಡಿತದಲ್ಲಿರಬಹುದು. ಆದರೂ ನಮ್ಮ ಬಳಿ ಬಹುಮತವಿದೆ ಎಂದು ಸುರೇಶ್ ಹೇಳಿದರು.
ಏತನ್ಮಧ್ಯೆ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ಜಾರಿ ನಿರ್ದೇಶನಾಲಯಜದಲ್ಲಿ ದೂರುಗಳಿದ್ದು, ಈ ದೂರುಗಳನ್ನಿಟ್ಟುಕೊಂಡೇ ಬಿಜೆಪಿ ಅವರಿಗೆ ಬೆದರಿಕೆ ಹಾಕಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೂ ಕೂಡ ಆನಂದ್ ಸಿಂಗ್ ಗೆ ಬಿಜೆಪಿ ಬೆದರಿಕೆ ಹಾಕಿ ಬೆಂಬಲ ಪಡೆಯಲು ಯತ್ನಿಸಿದೆ ಎಂದು ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.