ಕೋತಿ ಜೊತೆ ಉಪಹಾರ ಸೇವಿಸಿದ ಜೆಡಿಎಸ್ ಶಾಸಕ!
ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್ ಶಾಸಕ ಸುರೇಶ್ ಬಾಬು ಜತೆ ಕೋತಿಯೊಂದು ಉಪಹಾರ ಸೇವಿಸಿರುವ ಅಪರೂಪದ ಘಟನೆ ನಡೆದಿದೆ.

Published On :
ತುಮಕೂರು: ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್ ಶಾಸಕ ಸುರೇಶ್ ಬಾಬು ಜತೆ ಕೋತಿ ಉಪಹಾರ ಸೇವಿಸಿರುವ ಅಪರೂಪದ ಘಟನೆ ನಡೆದಿದೆ.
ಬೆಳ್ಳಂಬೆಳಗ್ಗೆ ಬಾಬು ಅವರ ಮನೆಗೆ ಭೇಟಿ ನೀಡಲು ನಿರ್ಧರಿಸಿದ ಮಾರುತಿ ಶಾಸಕರ ಮನೆಗೆ ಬಂದೆ ಬಿಟ್ಟ. ಈ ವೇಳೆ ಮುದ್ದೆ ಸಾರು ತಿನ್ನುತ್ತಿದ್ದ ಸುರೇಶ್ ಬಾಬು ಅದಕ್ಕೂ ಸ್ವಲ್ಪ ನೀಡಿದರು.
ಆದರೆ ಅದು ಮುದ್ದೆ ಸಾರು ತಿನ್ನು ಬಯಸುತ್ತಿಲ್ಲ ಎಂದು ತಿಳಿದ ಸುರೇಶ್ ಬಾಬು ಉಪ್ಪಿಟ್ಟು ನೀಡಿದರು. ಮಾರುತಿ ರಾಯ ಉಪ್ಪಿಟ್ಟನ್ನು ಸಂತೋಷದಿಂದ ಸೇವಿಸಿದ.
ಹನುಮಂತನ ಆಗಮನ ಗೆಲುವಿನ ಮುನ್ಸೂಚನೆ ಎಂದು ಅಭ್ಯರ್ಥಿ ಸುರೇಶ್ ಬಾಬು ಹರ್ಷ ವ್ಯಕ್ತಪಡಿಸಿದ್ದಾರೆ.
ಎರಡು ಬಾರಿ ಶಾಸಕರಾಗಿರುವ ಸುರೇಶ್ ಬಾಬು ವಿರುದ್ಧ ಬಿಜೆಪಿಯ ಜೆ.ಸಿ ಮಧುಸ್ವಾಮಿ, ಮತ್ತು ಸಚಿವ ಟಿ.ಬಿ ಜಯಚಂದ್ರ ಪುತ್ರ ಟಿ.ಜೆ ಸಂತೋಷ್ ಪ್ರತಿಸ್ಪರ್ದಿಗಳಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
monkeyಕೋತಿಜೆಡಿಎಸ್ ಶಾಸಕBreakfastಉಪಹಾರC B Suresh BabuChikkanayakanahalliJD(S)MLA. ಸಿಬಿ ಸುರೇಶ್ ಬಾಬುಚಿಕ್ಕನಾಯಕನಹಳ್ಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


