ನಕಲಿ ವೋಟರ್ ಐಡಿ ಸೃಷ್ಟಿಸಿ ಚುನಾವಣೆ ಗೆಲ್ಲುವುದು ಕಾಂಗ್ರೆಸ್ ತಂತ್ರ: ಪ್ರಧಾನಿ ಮೋದಿ
ನಕಲಿ ವೋಟರ್ ಐಟಿ ಸೃಷ್ಟಿಸಿ, ಚುನಾವಣೆ ಗೆಲ್ಲುವುದು ಕಾಂಗ್ರೆಸ್ ತಂತ್ರವಾಗಿದ್ದು, ಇಂತಹ ಪಕ್ಷವನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ...

Published On :
ಚಿಕ್ಕಮಗಳೂರು: ನಕಲಿ ವೋಟರ್ ಐಟಿ ಸೃಷ್ಟಿಸಿ, ಚುನಾವಣೆ ಗೆಲ್ಲುವುದು ಕಾಂಗ್ರೆಸ್ ತಂತ್ರವಾಗಿದ್ದು, ಇಂತಹ ಪಕ್ಷವನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ.
ಸಮಾವೇಶದಲ್ಲಿ ಎಂದಿನಂತೆ ಕನ್ನಡದಲ್ಲಿಯೇ ಭಾಷಣವನ್ನು ಆರಂಭಿಸಿದ ಮೋದಿಯವರು ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದರು.
ನಕಲಿ ವೋಟರ್ ಐಟಿ ಸೃಷ್ಟಿಸಿ, ಚುನಾವಣೆ ಗೆಲ್ಲುವುದು ಕಾಂಗ್ರೆಸ್ ತಂತ್ರವಾಗಿದ್ದು, ಇಂತಹ ಪಕ್ಷವನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ. ಚುನಾವಣೆಯಲ್ಲಿ ಸೋಲು ಕಾಣುವ ಭಯದಿಂದ, ಕಾಂಗ್ರೆಸ್ ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರುವುದಷ್ಟೇ ಮುಖ್ಯ. 1978ರಲ್ಲಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿಗೆ ಬಂದಿದ್ದರು. ನಿಮ್ಮ ಮತಗಳನ್ನು ಪಡೆದು ಹೋದರು. ಆದರೆ, ಇಲ್ಲಿನ ಜನರ ಬಗ್ಗೆ ಕಾಳಜಿವಹಿಸಲಿಲ್ಲ. ಚಿಕ್ಕಮಗಳೂರು ಜನತೆಯ ಕಲ್ಯಾಣದ ಬಗ್ಗೆ ಕಾಂಗ್ರೆಸ್ ಎಂದಿಗೂ ಚಿಂತೆ ಮಾಡಲಿಲ್ಲ. ಸೋನಿಯಾ ಗಾಂಧಿಯವರೂ ಕೂಡ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದರು. ಅಂದು ಅವರು ನೀಡಿದ್ದ ಭರವಸೆಗಳೇನಾಯಿತು? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕರು ದಿನವಿಡೀ ನನ್ನ ಬಗ್ಗೆಯೇ ಚಿಂತಿಸುತ್ತಿರುತ್ತಾರೆ. ಪ್ರಧಾನಮಂತ್ರಿಯಾಗುವುದು ಹೇಗೆ? ಎಂದು ಚಿಂತಿಸುತ್ತಿರುತ್ತಾರೆ. ಇದು ಅವರ ಅಹಂಕಾರವಲ್ಲದೆ ಮತ್ತೇನು...? ಕಾಂಗ್ರೆಸ್ ಪಕ್ಷ ದೇಶದಲ್ಲಿ ಒಂದೊಂದೇ ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಳ್ಳುತ್ತಿದೆ. ಆದರೆ, ಪಕ್ಷ ನಾಯಕರಿಗೆ ಅಹಂಕಾರ ಮಾತ್ರ ಕಡಿಮೆಯಾಗಿಲ್ಲ. 2019ರಲ್ಲಿ ಪ್ರಧಾನಮಂತ್ರಿಯಾಗುವೆ ಎಂದು ಹೇಳುತ್ತಿದ್ದಾರೆ,
ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಆದ್ದರಿಂತ ಅವರು ಚುನಾವಣೆ ಸೋತಾಗ ಇವಿಎಂ ಮೇಲೆ ಆರೋಪ ಮಾಡುತ್ತಿದ್ದಾರೆ. ತನ್ನ ಸೋಲಿಗೆ ಕಾರಣ ನೀಡಲು ಕಾಂಗ್ರೆಸ್ ಈಗಾಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸೋಲಿಗೆ ಇವಿಎಂ ಕಾರಣ ಎನ್ನಲು ಪಕ್ಷದ ನಾಯಕರು ಸಿದ್ಧರಾಗುತ್ತಿದ್ದಾರೆ. ಜಾತಿ ಜಾತಿಗಳನ್ನು ಒಡೆಯಲು ಅಡ್ಡ ದಾರಿ ಹಿಡಿಯಲು ಮುಂದಾಗುತ್ತಿದ್ದಾರೆಂದು ಹರಿಹಾಯ್ದಿದ್ದಾರೆ.
ಅಮೇಥಿಯಿಂದ ಆರಿಸಿ ಬಂದ ಹೆಸರುದಾರರು ಆ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು? ಆ ಕ್ಷೇತ್ರ ನೋಡಿದರೆ ಅದರ ಅಭಿವೃದ್ಧಿ ತಿಳಿಯುತ್ತದೆ. ಎಲ್ಲೆಡೆ ಕಾಂಗ್ರೆಸ್ ಸೋಲನ್ನು ಅನುಭವಿಸುತ್ತಿದ್ದು, ಇದನ್ನು ಒಪ್ಪಿಕೊಳ್ಳಲು ಕಾಂಗ್ರೆಸ್'ಗೆ ಆಗುತ್ತಿಲ್ಲ. ಅದಕ್ಕಾಗಿಯೇ ಕಾಂಗ್ರೆಸ್ ಜೋರಾಗಿ ಇವಿಎಂ ಸರಿಯಿಲ್ಲ ಎಂಬು ಬೊಬ್ಬೆ ಹಾಕುತ್ತಿದೆ. ವ್ಯವಸ್ಥಿತವಾಗಿ ಚುನಾವಣೆ ಆಯೋಗದ ಮೇಲೆ ದೋಷಾರೋಪಣೆ ಮಾಡುತ್ತಿದೆ. ಇದು ದೇಶಕ್ಕೆ ದೇಶಕ್ಕೆ ಮಾಡಿದ ಅಪಮಾನ. ಇದಲ್ಲದೆ ಸಿಎಜಿಯನ್ನೇ ಅಪಮಾನ ಮಾಡುತ್ತಿದೆ. ಕಾಂಗ್ರೆಸ್ ರೈಟ್ ಸಿಎಜೆ ರಾಂಗ್ ಕಾಂಗ್ರೆಸ್ ನೀತಿಯಾಗಿದೆ. ಹೇಗಿದೆ ಕಾಂಗ್ರೆಸ್ ಸುಳ್ಳಿನ ಕಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪ್ರಕಾರ ಎಲ್ಲವೂ ಸರಿಯಿಲ್ಲ. ಸಿಎಜಿ ಅಷ್ಟೇ ಅಲ್ಲ, ಸಿಬಿಐ, ಐಎನ್ಎ ಅಷ್ಟೇ ಏಕೆ ಸೇನೆಯ ಕಾರ್ಯವೈಖರಿಯೂ ಸರಿಯಿಲ್ಲ. ಆಡಳಿತ ಇಲ್ಲದೆಯೇ ವಿಲವಿಲ ಒದ್ದಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಕಂಡಿದ್ದೆಲ್ಲವೂ ಸರಿಯಿಲ್ಲ. ಜಾತಿ ವಾದ ನಡೆಯಲ್ಲ, ಧರ್ಮ ಒಡೆಯುವುದನ್ನು ಬಿಡುವುದಿಲ್ಲ. ಮೇ.12 ರಂದು ಮತದಾನ ಮಾಡುವ ಮೂಲಕ ಜನರು ನಿಮ್ಮನ್ನು ಮನೆಗೆ ಕಳುಹಿಸುತ್ತಾರೆ.
ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ನೀರಿನಿಂದ ಹೊರ ತೆಗೆದ ಮೀನಿನಂತೆ ಒದ್ದಾಡುತ್ತದೆ. ನಿನ್ನೆಯಷ್ಟೇ ರಾಜರಾಜೇಶ್ವರಿ ನಗರದಲ್ಲಿ ನಕಲಿ ಚುನಾವಣಾ ಮತದಾರರ ಚೀಟಿ ಪತ್ತೆಯಾಗಿವೆ. ಅದಕ್ಕೆ ಸಂಬಂಧಿಸಿದಂತೆ ಮುದ್ರಣ ಯಂತ್ರ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವ್ಯವಸ್ಥಿತವಾಗಿ ನಕಲಿ ಮತದಾನ ಮಾಡಿ ಗೆಲ್ಲಲು ಕಾಂಗ್ರೆಸ್ ಯತ್ನ ನಡೆಸಿದೆ. 4 ಲಕ್ಷ ಮತದಾರರು ಇರುವ ಕ್ಷೇತ್ರದಲ್ಲಿ 1 ಲಕ್ಷ ನಕಲಿ ಮತದಾರರನ್ನು ಸೇರಿಸುವ ಯತ್ನವನ್ನು ಕಾಂಗ್ರೆಸ್ ಮಾಡಿದೆ. ಇಂತಹವರಿಗೆ ಜನರೇ ಪಾಠ ಕಲಿಸಬೇಕು ಎಂದು ಕಿಡಿಕಾರಿದ್ದಾರೆ.
ಬಳಿಕ ಸಿದ್ದರಾಮಯ್ಯ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿಯವರು, ದೇಶದಾದ್ಯಂತ ಬಾದಾಮಿ ಹೆಸರು ಕೇಳಿಬರತೊಡಗಿದೆ. ಬಾದಾಮಿಯಲ್ಲಿಯೂ ವಾಮ ಮಾರ್ಗದ ಮೂಲಕ ಗೆಲ್ಲಲು ಕಾಂಗ್ರೆಸ್ ಹವಣಿಸುತ್ತಿದೆ. ಬಾದಾಮಿಯಲ್ಲಿ ಕಾಂಗ್ರೆಸ್ ಶಾಸಕರೊಬ್ಬರ ರೆಸಾರ್ಟ್ ಮೇಲೆ ಐಟಿ ದಾಳಿ ನಡೆದಿದೆ.ಅಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿದೆ. ಇದನ್ನು ಕರ್ನಾಟದ ಮಾಧ್ಯಮಗಳೇ ಬಯಲಿಗೆಳೆದಿವೆ. ಅದಕ್ಕಾಗಿ ಮಾಧ್ಯಮಗಳನ್ನು ಅಭಿನಂದಿಸುತ್ತೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ModiKarnatakaಕರ್ನಾಟಕಚಿಕ್ಕಮಗಳೂರುChikkamagaluruಮೋದಿKarnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


