'ಅಗ್ಗದ ಉಡುಗೊರೆ': ಅಭ್ಯರ್ಥಿಗಳ ವಿರುದ್ಧ ಮತದಾರ ಕೆಂಡಾಮಂಡಲ!
ನಗರದ ಕೆಲವು ಕ್ಷೇತ್ರಗಳಲ್ಲಿ ನೀಡಿರುವ ಸೀರೆ ಮಿಕ್ಸಿ ಮತ್ತು ಕುಕ್ಕರ್ ಅಗ್ಗದ ಗುಣಮಟ್ಟದ್ದಾಗಿದ್ದು, ಚೀನಾ ವಸ್ತುಗಳಂತಿದ್ದು ಅವುಗಳನ್ನು...

Published On :
ಬೆಂಗಳೂರು: ಬೆಂಗಳೂರಿನ ಹಲವು ವಿಧಾನ ಸಭೆ ಕ್ಷೇತ್ರಗಳಲ್ಲಿನ ಮತದಾರರು ಅಗ್ಗದ ಉಡುಗೊರೆಯಿಂದಾಗಿ ಅಸಮಾಧಾನಗೊಂಡಿದ್ದಾರೆ, ಮತಕ್ಕಾಗಿ ಅಭ್ಯರ್ಥಿಗಳು ಮತದಾರರಿಗೆ ಉಡುಗೊರೆಗಳನ್ನು ನೀಡುತ್ತಿದ್ದಾರೆ, ಮತಕ್ಕಾಗಿ ನೀಡಿರುವ ಮಿಕ್ಸಿ, ಮತ್ತು ಪ್ರೆಶರ್ ಕುಕ್ಕರ್ ಗಳು ಕಡಿಮೆ ಗುಣಮಟ್ಟದ್ದಾಗಿವೆ ಎಂದು ಹೇಳಲಾಗಿದೆ. ಗ್ಯಾಸ್ ಸ್ಟವ್ ಮೇಲೆ ಇಟ್ಟು ಆನ್ ಮಾಡಿದಾಗ ಕುಕ್ಕರ್ ಗಳು ಸ್ಪೋಟಗೊಂಡಿರುವುದು ತಿಳಿದು ಬಂದಿದೆ.
ನಗರದ ಕೆಲವು ಕ್ಷೇತ್ರಗಳಲ್ಲಿ ನೀಡಿರುವ ಸೀರೆ ಮಿಕ್ಸಿ ಮತ್ತು ಕುಕ್ಕರ್ ಅಗ್ಗದ ಗುಣಮಟ್ಟದ್ದಾಗಿದ್ದು, ಚೀನಾ ವಸ್ತುಗಳಂತಿದ್ದು ಅವುಗಳನ್ನು ಅಪರಿಚಿತ ಮತದಾರರಿಗೆ ನೀಡಲಾಗಿದೆ. ಅಭ್ಯರ್ಥಿ ನೀಡಿರುವ ಮಿಕ್ಸಿ ಪ್ಲಗ್ ಹಾಕಿದ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು, ಮಿಕ್ಸಿ ಯಲ್ಲೂ ಬೆಂಕಿ ಕಾಣಿಸಿಕೊಂಡಿತು .ಅದರಿಂದ ನನಗೆ ಭಯವಾಯಿತು ಎಂದು ಕೆ.ಆರ್ ಪುರಂ ಕ್ಷೇತ್ರದ ಮತದಾರರೊಬ್ಬರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅಭ್ಯರ್ಥಿಗಳು ನೀಡಿರುವ ಈ ವಿದ್ಯುತ್ ಉಪಕರಣಗಳ ಮೇಲೆ ನಮಗೆ ನಂಬಿಕೆಯಿಲ್ಲ, ಐರನ್ ಬಾಕ್ಸ್ ಗಳಿಗೆ ಬಟ್ಟೆ ಅಂಟಿಕೊಳ್ಳುತ್ತದೆ, ಮಿಕ್ಸಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ, ಕುಕ್ಕರ್ ಸ್ಪೋಟಗೊಳ್ಳುತ್ತಿವೆ ಎಂದು ಮತ್ತೊಬ್ಬ ಮತದಾರ ಹೇಳಿದ್ದಾರೆ, ಯಶವಂತಪುರ ಕ್ಷೇತ್ರದಲ್ಲಿ ಅಭ್ಯರ್ಥಿ ನೀಡಿರುವ ಕುಕ್ಕರ್ ನಲ್ಲಿ ಅನ್ನ ಸೀದು ಹೋಗಿದೆ, ಜೊತೆಗೆ ಸ್ಟವ್ ಮೇಲೆ ಇಟ್ಟ ಕೂಡಲೇ ಕುಕ್ಕರ್ ಹಾನಿಗೊಳಗಾಗಿದೆ.
ಕೊಡಬೇಕು ಎಂಬ ಕಾರಣಕ್ಕೆ ಅಭ್ಯರ್ಥಿಗಳು ಈ ಉಡುಗೊರೆಗಳನ್ನು ನೀಡಿದ್ದಾರೆ, ಅವರು ನಮ್ಮನ್ನು ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಿದ್ದಾರೆ,. ಒಂದು ವೇಳೆ ಸ್ಫೋಟದಿಂದ ಯಾರಾದರೂ ಜೀವ ಕಳೆದುಕೊಂಡರೇ ಏನು ಮಾಡುವುದು ಎಂದು ಮತದಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
VotersಮತದಾರರುCandidatesಅಭ್ಯರ್ಥಿಗಳುKarnataka Assembly Electionಕರ್ನಾಟಕ ವಿಧಾನ ಸಭೆ ಚುನಾವಣೆcheap giftsಅಗ್ಗದ ಉಡುಗೊರೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


