ರಾಜಕೀಯ

ಸಿಎಂ ಪರ ಚಾಮುಂಡೇಶ್ವರಿಯಲ್ಲಿ ಮಾತ್ರ ಕಿಚ್ಚ ಸುದೀಪ್ ಪ್ರಚಾರ

ನಾನೊಬ್ಬ ಕಲಾವಿದನಾಗಿ ಯಾವ ಪಕ್ಷದ ಪರವಾಗಿ ನಿಲ್ಲುವುದಿಲ್ಲ. ಆದರೆ ಸಿಎಂ ಮೇಲಿನ ಅಭಿಮಾನದಿಂಡ ಚಾಮುಂಡೇಶ್ವರಿಯಲ್ಲಿ ಮಾತ್ರವೇ ನಾನು ಸಿದ್ದರಾಮಯ್ಯ ಪರ ಪ್ರಚಾರ ನಡೆಸುತ್ತೇನೆ."

ಸಿಎಂ ಪರ ಚಾಮುಂಡೇಶ್ವರಿಯಲ್ಲಿ ಮಾತ್ರ ಕಿಚ್ಚ ಸುದೀಪ್ ಪ್ರಚಾರ
ಸಿಎಂ ಪರ ಚಾಮುಂಡೇಶ್ವರಿಯಲ್ಲಿ ಮಾತ್ರ ಕಿಚ್ಚ ಸುದೀಪ್ ಪ್ರಚಾರ
Published On :
ಬೆಂಗಳೂರು: "ನಾನೊಬ್ಬ ಕಲಾವಿದನಾಗಿ ಯಾವ ಪಕ್ಷದ ಪರವಾಗಿ ನಿಲ್ಲುವುದಿಲ್ಲ. ಆದರೆ ಸಿಎಂ ಮೇಲಿನ ಅಭಿಮಾನದಿಂಡ ಚಾಮುಂಡೇಶ್ವರಿಯಲ್ಲಿ ಮಾತ್ರವೇ ನಾನು ಸಿದ್ದರಾಮಯ್ಯ ಪರ ಪ್ರಚಾರ ನಡೆಸುತ್ತೇನೆ." ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
"ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಆತ್ಮೀಯರಿದ್ದಾರೆ. ಮುಖ್ಯಮಂತ್ರಿ ಆಗುವ ಮುಂಚಿನಿಂದಲೂ ಅವರು ನನಗೆ ಪರಿಚಯವಿತ್ತು. ಅಂದು ಹೇಗಿದ್ದರೋ ಇಂದೂ ಹಾಗೆಯೇ ಇದ್ದಾರೆ. ಅದೇ ರೀತಿಯಲ್ಲಿ ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ನಮ್ಮ ಸಮುದಾಯಕ್ಕೆ ಸೇರಿದವರು. ಅವರೂ ಸಹ ನನಗೆ ಬಹಳ ಬೇಕಾದವರಿದ್ದಾರೆ. ಈ ಕಾರಣದಿಂದ ನಾನು ಬಾದಾಮಿಯಲ್ಲಿ ಪ್ರಚಾರ ನಡೆಸಲ್ಲ" ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸುದೀಪ್ ಹೇಳಿದರು.
"ಸಿದ್ದರಾಮಯ್ಯ ನನಗೆ ಸಾಕಷ್ಟು ಅವಕಾಶ ನಿಡಿದ್ದಾರೆ. ಹಾಗಾಗಿ ಅವರ ಮಾತಿಗೆ ಇಲ್ಲ ಅನ್ನೊಕಾಗಲ್ಲ.ನಾನು ಅವರ ಮೇಲಿನ ಅಭಿಮಾನದಿಂದ ಮಾತ್ರವೇ ಪ್ರಚಾರ ಮಾಡುವೆ. ಪಕ್ಷದ ಕುರಿತಂತೆ ಅಲ್ಲ. 
"ಸುರಪುರದ ಬಿಜೆಪಿ ಶಾಸಕ ರಾಜು ಗೌಡ ಸಹ ನನ್ನ ಸ್ನೇಹಿತರು. ಅವರ ಪರ ಸಹ ನಾನು ಪ್ರಚಾರ ಕೈಗೊಳ್ಳಲಿದ್ದೇನೆ" ಸುದೀಪ್ ಹೇಳಿದ್ದಾರೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕಡೆ ಕಿಚ್ಚ ಸುದೀಪ್ ಪ್ರಚಾರ ನಡೆಸಲಿದ್ದಾರೆ ಎಂದು ಮಾದ್ಯಮಗಳಲ್ಲಿ ಸುದ್ದಿಯಾಗಿತ್ತು.
ಇನ್ನು ಮುಖ್ಯಮಂತ್ರಿ ಪರ ಚಾಮುಂಡೇಶ್ವರಿಯಲ್ಲಿ ಇಂದು ಬಾಲಿವುಡ್ ನಟ ರಾಜ್ ಬಬ್ಬರ್‌, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ಅವರ ಪುತ್ರಿ ರಿಷಿಕಾ ಸಿಂಗ್ ಪ್ರಚಾರದಲ್ಲಿ ತೊಡಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.