ರಾಜಕೀಯ

ನಮ್ಮ ಸಮಾಜದವರಾದ ಸುದೀಪ್​ ನನಗೇ ಬೆಂಬಲ ನೀಡಬೇಕು: ಶ್ರೀರಾಮುಲು

ಖ್ಯಾತ ನಟ ಸುದೀಪ್ ಅವರು ನಮ್ಮ ಸಮಾಜದವರಾಗಿದ್ದು, ನನಗೆ ಬೆಂಬಲ ನೀಡುವ ಮೂಲಕ....

ನಮ್ಮ ಸಮಾಜದವರಾದ ಸುದೀಪ್​ ನನಗೇ ಬೆಂಬಲ ನೀಡಬೇಕು: ಶ್ರೀರಾಮುಲು
ಶ್ರೀರಾಮುಲು - ಸುದೀಪ್
Published On :
ಚಾಮರಾಜನಗರ: ಖ್ಯಾತ ನಟ ಸುದೀಪ್ ಅವರು ನಮ್ಮ ಸಮಾಜದವರಾಗಿದ್ದು, ನನಗೆ ಬೆಂಬಲ ನೀಡುವ ಮೂಲಕ ನನ್ನ ಗೆಲುವಿಗೆ ಪ್ರಯತ್ನಿಸಬೇಕು ಎಂದು ಬಿಜೆಪಿ ನಾಯಕ ಬಿ. ಶ್ರೀರಾಮಲು ಅವರು ಶುಕ್ರವಾರ ಹೇಳಿದ್ದಾರೆ.
ಸುದೀಪ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡುವ ಕುರಿತು ಇಂದು ಕೊಳ್ಳೇಗಾಲದಲ್ಲಿ ಪ್ರತಿಕ್ರಿಯಿಸಿದ ಶ್ರೀರಾಮುಲು, ಹಿರಿಯ ಕಲಾವಿದರಾದ ಸುದೀಪ್​ ಮೇಲೆ ನಮಗೆ ಗೌರವ ಇದೆ. ನಾವೆಲ್ಲರೂ ಅವರ ಅಭಿಮಾನಿಗಳಾಗಿದ್ದು, ನಮ್ಮ ಸಮಾಜದವರಾದ ಅವರು ಕೂಡ ನನ್ನ ಗೆಲುವಿಗೆ ಶ್ರಮಿಸಬೇಕು ಎಂದರು.
ನಮಗೆ ಚಿತ್ರರಂಗ ಗೊತ್ತಿಲ್ಲ. ನಮಗೆ ಗೊತ್ತಿರೋದು ರಾಜಕೀಯ ಮಾತ್ರ. ಸುದೀಪ್​ ಅವರ ಚಿತ್ರಗಳನ್ನು ನೋಡುತ್ತೇವೆ ಹಾಗೂ ಗಮನಿಸುತ್ತೇವೆ ಎಂದರು.
ನಾನು ಎರಡು ಕಡೆ ಸ್ಪರ್ಧೆ ಮಾಡಿದ್ದೇನೆ. ನಾನು ಇವತ್ತು ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಎರಡು ಕಡೆಯೂ ಗೆಲ್ಲುತ್ತೇನೆ. ಬಾದಾಮಿಯಲ್ಲಿ ಧರ್ಮ ಮತ್ತು ಅಧರ್ಮದ ನಡುವೆ ಕದನವಿದೆ. ಸತ್ಯ ಮತ್ತು ಧರ್ಮ ರಾಮುಲು ಕಡೆ ಇದೆ. ಅಧರ್ಮ ಮತ್ತು ಹಿಂಸೆ ಸಿದ್ದರಾಮಯ್ಯ ಅವರ ಪರ ಇದೆ. ಹೀಗಾಗಿ ಸಿದ್ದರಾಮಯ್ಯ ಸೋಲುತ್ತಾರೆ ಎಂದು ಶ್ರೀರಾಮುಲು ಭವಿಷ್ಯ ನುಡಿದರು.
ನಟ ಸುದೀಪ್ ಅವರು ಮೇ 7ರಂದು ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಖಾಸಗಿ ವಾಹಿನಿಗೆ ಪ್ರತಿಕ್ರಿಯಿಸಿದ ಸುದೀಪ್, ಬಾದಾಮಿಯಲ್ಲಿ ಪ್ರಚಾರ ಮಾಡುವುದಿಲ್ಲ. ಕೇವಲ ಚಾಮುಂಡೇಶ್ವರಿಯಲ್ಲಿ ಮಾತ್ರ ಸಿಎಂ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.