ತೆಂಗಿನಕಾಯಿ ಚಿಹ್ನೆ ಪಡೆಯುವಲ್ಲಿ ವಿಫಲರಾದ ಪಕ್ಷೇತರ ಅಭ್ಯರ್ಥಿಗೆ ಟ್ರಾಕ್ಟರ್ ಗುರುತು
ತೆಂಗಿನ ಕಾಯಿಯನ್ನು ಪಕ್ಷದ ಚಿಹ್ನೆಯನ್ನಾಗಿ ಪಡೆದುಕೊಳ್ಳಲು ವಿಫಲರಾದ ದೇವದುರ್ಗದ ಪಕ್ಷೇತರ ಅಭ್ಯರ್ಥಿ ಕರೇಮ್ಮ ಜಿ. ನಾಯಕ್ ಅವರಿಗೆ ಟ್ರಾಕ್ಟರ್ ದೊರೆಯುವ ಸಾಧ್ಯತೆ ಇದೆ. ತೆಂಗಿನ ಕಾಯಿ ಚಿಹ್ನೆಗಾಗಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಏ.27 ಜಟಾಪಟಿ ನಡೆದಿತ್ತು.

ರಾಯಚೂರು : ತೆಂಗಿನ ಕಾಯಿಯನ್ನು ಪಕ್ಷದ ಚಿಹ್ನೆಯನ್ನಾಗಿ ಪಡೆದುಕೊಳ್ಳಲು ವಿಫಲರಾದ ದೇವದುರ್ಗದ ಪಕ್ಷೇತರ ಅಭ್ಯರ್ಥಿ ಕರೇಮ್ಮ ಜಿ. ನಾಯಕ್ ಅವರಿಗೆ ಟ್ರಾಕ್ಟರ್ ದೊರೆಯುವ ಸಾಧ್ಯತೆ ಇದೆ. ತೆಂಗಿನ ಕಾಯಿ ಚಿಹ್ನೆಗಾಗಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯ ನಡುವೆ ಏ.27 ಜಟಾಪಟಿ ನಡೆದಿತ್ತು.
ಈ ಬಾರಿಯ ಚುನಾವಣೆಗಾಗಿ ತೆಂಗಿನಕಾಯಿಯನ್ನು ಪಕ್ಷದ ಚಿಹ್ನೆಯಾಗಿ ಬಳಸಿಕೊಳ್ಳಲು ಪಕ್ಷೇತರ ಅಭ್ಯರ್ಥಿ ಕರೇಮ್ಮ ಜಿ. ನಾಯಕ್ ನಿರ್ಧರಿಸಿದ್ದು, ಚುನಾವಣಾಧಿಕಾರಿ ದೇವದುರ್ಗ ಕೂಡಾ ಸಮ್ಮತಿ ನೀಡಿದ್ದರು. ಆದರೆ, ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ನಂತರ ಅದನ್ನು ಹಿಂಪಡೆಯಲಾಗಿದೆ.
ಆ ಚಿಹ್ನೆ ಕೆಜೆಪಿಗೆ ಸೇರಿದ್ದು ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಜನಪ್ರಿಯವಾದ ಚಿಹ್ನೆ ಪಡೆಯುವಲ್ಲಿ ವಿಫಲವಾಗಿರುವುದಾಗಿ ಎಂದು ಕರೇಮ್ಮ ಹೇಳಿದ್ದಾರೆ.
ಚಿಹ್ನೆಗಳಿದ್ದ ಪುಸ್ತಕದಲ್ಲಿದ್ದ ತೆಂಗಿನ ಕಾಯಿಯನ್ನು ಪಡೆಯಲು ನಿರ್ಧರಿಸಿ ಚುನಾವಣಾಧಿಕಾರಿ ಮೊಹಮ್ಮದ್ ಇರ್ಪಾನ್ ಅವರಿಗೆ ಹೇಳಿದ ನಂತರ ಅವರು ಆ ಚಿಹ್ನೆಯನ್ನೇ ನೀಡಿದ್ಜರು. ಆ ಪ್ರಕ್ರಿಯೆ ಮುಗಿದ ನಂತರ ಅವರ ಬೆಂಬಲಿಗರು ಆ ಚಿಹ್ನೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯಗೊಳಿಸಿದ್ದಾರೆ.
ಈ ವಿಷಯ ತಿಳಿದ ಬಿಜೆಪಿ ಆಕ್ಷೇಪಣೆ ಸಲ್ಲಿಸಿದ್ದು, ಆ ಚಿಹ್ನೆಯನ್ನು ಕರೇಮ್ಮ ಅವರಿಗೆ ನೀಡದಂತೆ ಚುನಾವಣಾದಿಕಾರಿಗಳಿಗೆ ತಿಳಿಸಿದ್ದಾರೆ. ಇದರಿಂದಾಗಿ ಕರೇಮ್ಮ ಈಗ ಟ್ರಾಕ್ಟರ್ ಚಿಹ್ನೆ ಆಯ್ಕೆ ಮಾಡಿದ್ದಾರೆ, ಆದರೂ , ಚುನಾವಣಾಧಿಕಾರಿಗಳು ಇನ್ನೂ ಅಂತಿಮಗೊಳಿಸಿಲ್ಲ ಎಂದು ಕರೇಮ್ಮ ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಚುನಾವಣಾಧಿಕಾರಿ , ತೆಂಗಿನಕಾಯಿ ಚಿಹ್ನೆ ಕೆಜೆಪಿಯದ್ದು ಎಂಬುದು ಗೊತ್ತಿರಲಿಲ್ಲ. ಕರೇಮ್ಮ ಅವರಿಗೆ ಟ್ರಾಕ್ಟರ್ ಸಿಹ್ನೆ ನೀಡುವುದಾಗಿ ಹೇಳಿದ್ದಾರೆ.
ಮೇ 12 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಸೋಲಿಸಿ ಗೆದ್ದು ಬರುವುದಾಗಿ ಕರೇಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


