ರಾಜಕೀಯ

ಜೆಡಿಎಸ್, ಕಾಂಗ್ರೆಸ್ ನ ಬಿ-ಟೀಮ್ ಆಗಲಿದೆಯೇ ಎನ್ನುವುದನ್ನು ಕಾಲವೇ ಹೇಳುತ್ತದೆ: ದೇವೇಗೌಡ

"ಜೆಡಿ(ಎಸ್) ಕಾಂಗ್ರೆಸ್ಬಿ ನ ಬಿ-ಟೀಮ್ ಆಗಲಿದೆಯೆ ಎನ್ನುವುದನ್ನು ಕಾಲವೇ ತಿಳಿಸಲಿದೆ." ಮಾಜಿ ಪ್ರಧಾನಿ ಜೆಡಿ(ಎಸ್) ಪ್ರಧಾನ ಅಧ್ಯಕ್ಷ ದೇವೇಗೌಡ ಹೇಳಿದ್ದಾರೆ.

ಜೆಡಿಎಸ್, ಕಾಂಗ್ರೆಸ್ ನ ಬಿ-ಟೀಮ್ ಆಗಲಿದೆಯೇ ಎನ್ನುವುದನ್ನು ಕಾಲವೇ ಹೇಳುತ್ತದೆ: ದೇವೇಗೌಡ
ಎಚ್.ಡಿ. ದೇವೇಗೌಡ
Published On :
ಬೆಂಗಳೂರು: "ಜೆಡಿ(ಎಸ್) ಕಾಂಗ್ರೆಸ್ಬಿ ನ ಬಿ-ಟೀಮ್ ಆಗಲಿದೆಯೆ ಎನ್ನುವುದನ್ನು ಕಾಲವೇ ತಿಳಿಸಲಿದೆ." ಮಾಜಿ ಪ್ರಧಾನಿ ಜೆಡಿ(ಎಸ್) ಪ್ರಧಾನ ಅಧ್ಯಕ್ಷ ದೇವೇಗೌಡ ಹೇಳಿದ್ದಾರೆ.
"ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದು, ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ನಾವು ಕಾಂಗ್ರೆಸ್ ಗೆ ಬಿ-ಟೀಮ್ ಆಗಿದ್ದವು.  ಇದೀಗ ಮತ್ತೆ ನಾವು ಕಾಂಗ್ರೆಸ್ ಗೆ ಬಿ-ಟೀಮ್ ಆಗುವೆವೋ, ಕಾಂಗ್ರೆಸ್ ನಮಗೇ ಬಿ-ಟೀಮ್ ಆಗಲಿದೆಯೇ ಎನ್ನುವುದನ್ನು ನಾವು ನೋಡೋಣ" ದೇವೇಗೌಡ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ರಾಹುಲ್ ಗಾಂಧಿ  "ಜೆಡಿ (ಎಸ್) ಅವರು ಬಿಜೆಪಿಯ ಬಿ-ಟೀಮ್  ಹೌದೇ  ಅಥವಾ ಇಲ್ಲವೇ ಎಂದು ಸ್ಪಷ್ಟಪಡಿಸಬೇಕಾಗಿದೆ." ಎಂದಿದ್ದರು.
ಇದೇ ವೇಳೆ ದೇವೇಗೌಡರು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವನ್ನು ಹೊರತುಪಡಿಸಿ ಬೇರಾರೊಡನೆಯೂ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಮಾಯಾವತಿಯವರೊಡನೆ ಹೊರತು ಬೇರೆ ಯಾರೊಡನೆ ಚುನಾವಣೆ ಮೈತ್ರಿ ಇಲ್ಲ" ಅವರು ಹೇಳಿದರು.
ಮೇ 12 ರಂದು ಕರ್ನಾಟಕ ವಿಧಾನಸಭೆಗೆ ಮತದಾನ ನಡೆಯಲಿದ್ದು ಮೇ 15 ರಂದು ಫಲಿತಾಂಶ ಘೋಷಣೆಯಾಗಲಿದೆ. ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಪ್ರಯತ್ನ ನಡೆಸಿದ್ದರೆ ದಕ್ಷಿಣ ರಾಜ್ಯದಲ್ಲಿ ಮತ್ತೆ ಪಾರಮ್ಯ ಸ್ಥಾಪಿಸಲು ಬಿಜೆಪಿ ಎಲ್ಲಾ ರೀತಿಯ ರಣತಂತ್ರವನ್ನೂ ಹೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.