ಯಡಿಯೂರಪ್ಪ ಬ್ರೇಕಿಂಗ್ ನ್ಯೂಸ್ ಠುಸ್: ಕರ್ನಾಟಕ ಕಾಂಗ್ರೆಸ್ ವ್ಯಂಗ್ಯ
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬ್ರೇಕಿಂಗ್ ನ್ಯೂಸ್ ಠುಸ್ ಆಗಿದೆ ಎಂದು ಕಾಂಗ್ರೆಸ್ ಪಕ್ಷ ವ್ಯಂಗ್ಯವಾಡಿದೆ.

Published On :
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಬ್ರೇಕಿಂಗ್ ನ್ಯೂಸ್ ಠುಸ್ ಆಗಿದೆ ಎಂದು ಕಾಂಗ್ರೆಸ್ ಪಕ್ಷ ವ್ಯಂಗ್ಯವಾಡಿದೆ.
ನಿನ್ನೆ 'ಬ್ರೇಕಿಂಗ್ ನ್ಯೂಸ್' ನೀಡುತ್ತೇನೆಂದು ಟ್ವೀಟ್ ಮಾಡಿ ಭಾರಿ ಕುತೂಹಲ ಮೂಡಿಸಿದ್ದ ಬಿಎಸ್‌ವೈ ಕೊನೆಗೆ ನಿರೀಕ್ಷೆಗಳನ್ನೆಲ್ಲಾ ಸುಳ್ಳುಮಾಡಿ ಬ್ರೇಕಿಂಗ್ ಏನನ್ನೂ ನೀಡದೇ ಕೇವಲ ಕಾಂಗ್ರೆಸ್ ವಿರುದ್ಧ ಭಾಷಣ ಮಾಡಿದ್ದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಬಿಎಸ್ ವೈ ಅವರ ಈ ನಡೆಯನ್ನು ತೀವ್ರವಾಗಿ ವ್ಯಂಗ್ಯ ಮಾಡಿರುವ ಕಾಂಗ್ರೆಸ್ ಯಡಿಯೂರಪ್ಪ ಅವರ ಅಸಮರ್ಥತೆ ಬಹಿರಂಗವಾಗಿದೆ ಎಂದು ಹೇಳಿದೆ.
ಈ ಬಗ್ಗೆ ಕಾರ್ಟೂನ್ ವಿಡಿಯೋವೊಂದನ್ನು ಕರ್ನಾಟಕ ಕಾಂಗ್ರೆಸ್ ಟ್ವಿಟರ್ ಖಾತೆ ಅಪ್ಲೋಡ್ ಮಾಡಿದ್ದು, ಬಿಎಸ್ ವೈ ಬ್ರೇಕಿಂಗ್ ನ್ಯೂಸ್ ಎಂಬ ಬಾಂಬ್ ಅನ್ನು ಸ್ಫೋಟಿಸುವ ಪ್ರಯತ್ನ ಮಾಡುವುದನ್ನು ವಿಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲದೆ 'ವಚನ ಭ್ರಷ್ಟ ಯಡಿಯೂರಪ್ಪ, ಅವರು ಹೇಳಿರುವ ಮಾತನ್ನೇ ಸರಿಯಾದ ಸಮಯಕ್ಕೆ ನಡೆಸಿಕೊಡಲಾಗದವರು ಜನರ ಮಾತು ಹಾಗೂ ನಿರೀಕ್ಷೆಗಳನ್ನು ಹೇಗೆ ನಡೆಸಿಕೊಂಡಾರು' ಎಂದು ಟ್ವೀಟ್ ಮಾಡಿದೆ.
ಇನ್ನು ಕಾಂಗ್ರೆಸ್ ಪಕ್ಷ ಮಾಡಿರುವ ಈ ಟ್ವೀಟ್ ಗೆ ಟ್ವೀಟಿಗರು ಸಹ ಕಿಡಿಕಾರಿದ್ದು, ಬಿಎಸ್ ವೈ ಬ್ರೇಕಿಂಗ್ ಅನ್ನು 'ಫೇಕ್ ಬ್ರೇಕಿಂಗ್' ಎಂದು ಕರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುCongressಕಾಂಗ್ರೆಸ್BengaluruPoliticsರಾಜಕೀಯTwitterಟ್ವಿಟರ್BS Yeddyurappaಬಿಎಸ್ ಯಡಿಯೂರಪ್ಪbreaking newsಬ್ರೇಕಿಂಗ್ ನ್ಯೂಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


