ರಾಜಕೀಯ

ವಿಧಾನಸಭೆ ಚುನಾವಣೆ: ಬೆಂಗಳೂರಿನಲ್ಲಿ ಅಮಿತ್ ಶಾ ಗಾಗಿ ಸಿದ್ದವಾಗಿದೆ ಐಷಾರಾಮಿ ಬಂಗಲೆ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು 2 ತಿಂಗಳು ನಗರದಲ್ಲಿ ವಾಸ್ತವ್ಯ ಹೂಡಲು ಚಾಲುಕ್ಯ ವೃತ್ತದ ...

ವಿಧಾನಸಭೆ ಚುನಾವಣೆ: ಬೆಂಗಳೂರಿನಲ್ಲಿ ಅಮಿತ್ ಶಾ ಗಾಗಿ ಸಿದ್ದವಾಗಿದೆ ಐಷಾರಾಮಿ ಬಂಗಲೆ
ಅಮಿತ್ ಶಾ
Published On :
ಬೆಂಗಳೂರು:  ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು 2 ತಿಂಗಳು ನಗರದಲ್ಲಿ ವಾಸ್ತವ್ಯ ಹೂಡಲು ಚಾಲುಕ್ಯ ವೃತ್ತದ ಸಮೀಪದಲ್ಲಿ ಆರು ಬೆಡ್‌ರೂಂನ ದೊಡ್ಡ ಮನೆಯನ್ನು ಬಾಡಿಗೆಗೆ ಪಡೆಯಲಾಗಿದೆ.
ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಕನಸಿನೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯದಲ್ಲೇ ಮೊಕ್ಕಾಂ ಹೂಡಲು ನಿರ್ಧರಿಸಿದ್ದು, ಇದಕ್ಕಾಗಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ.
ಡಾಲರ್ಸ್ ಕಾಲೋನಿ, ಕುಮಾರ ಪಾರ್ಕ್ ಮತ್ತು ಚಾಲುಕ್ಯ ಸರ್ಕಲ್ ನಲ್ಲಿ ತಲಾ ಒಂದೊಂದು ಮನೆಯನ್ನು ನೋಡಿದ್ದೇವು, ಚಾಲುಕ್ಯ ಸರ್ಕಲ್ ಬಳಿಯಿರುವ ಮನೆ ಬಾಡಿಗೆ ಪಡೆಯಲು ನಾವು ನಿರ್ಧರಿಸಿದ್ದೆವು, ಅದರಂತೆ ವಿಶೇಷ ಭದ್ರತಾ ಪಡೆ ಇದೇ ಮನೆಯನ್ನು ಬಾಡಿಗೆ ಪಡೆದುಕೊಳ್ಳಲು ಅನುಮತಿ ನೀಡಿದೆ ಎಂದು ಬಿಜೆಪಿ ಎಂಎಲ್ ಸಿ ಲೆಹರ್ ಸಿಂಗ್ ಹೇಳಿದ್ದಾರೆ.
ಈ ಮೊದಲು ಅಮಿತ್ ಶಾ ಬೆಂಗಳೂರಿಗೆ ಬಂದಾಗ ಕುಮಾರ ಕೃಪಾ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ ಚುನಾವಣೆ ದಿನಾಂಕ ಘೋಷಣೆಯಾದರೇ ಈ ಸರ್ಕಾರಿ ಅತಿಥಿಗೃಹ ಲಭ್ಯವಾಗುವುದಿಲ್ಲ,. ಹೀಗಾಗಿ ಬೇರೆ ವ್ಯವಸ್ಥೆ ಮಾಡಿದ್ದೇವೆ, ಬಿಜೆಪಿ ರಾಜ್ಯ ಘಟಕ ಮನೆ ಬಾಡಿಗೆ ಹಣ ಪಾವತಿಸಲಿದೆ ಎಂದು ಹೇಳಿದ ಅವರು, ಬಾಡಿಗೆ ಹಣ ಎಷ್ಟು ಎಂಬುದನ್ನು ಬಹಿರಂಗ ಪಡಿಸಲಿಲ್ಲ.
ಮಾರ್ಚ್‌ ಅಂತ್ಯದ ವೇಳೆ ಅಮಿತ್‌ ಶಾ ವಾಸ್ತವ್ಯವನ್ನು ಬೆಂಗಳೂರಿಗೆ ವರ್ಗಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ರಾಜ್ಯ ಬಿಜೆಪಿಯ ಎಲ್ಲಾ ಚಟುವಟಿಕೆಗಳನ್ನು ಈಗಾಗಲೇ ತಮ್ಮ ಕೈಗೆ ತೆಗೆದುಕೊಂಡಿರುವ ಅಮಿತ್‌ ಶಾ  ಮುಂದಿನ ದಿನಗಳಲ್ಲಿ ಈ ಮನೆಯಲ್ಲೇ ಕುಳಿತು ಪ್ರಮುಖ ಸಭೆಗಳನ್ನು ನಡೆಸಿ ತಂತ್ರಗಾರಿಕೆಗಳನ್ನು ಸಿದ್ಧಪಡಿಸಲಿದ್ದಾರೆ.
ಸಕಲ ಸೌಲಭ್ಯವಿರುವ ಮೂರು ಅಂತಸ್ತಿನ ಮನೆ ಇದಾಗಿದ್ದು, ಆರು ಬೆಡ್‌ರೂಂಗಳಿವೆ. ಜತೆಗೆ 40-50 ಜನ ಕುಳಿತು ಸಭೆ ನಡೆಸಲು ಅನುಕೂಲವಾಗುವಂತಹ ಸ್ಥಳಾವಕಾಶವಿದೆ. ಅಮಿತ್ ಶಾ ಅವರಿಗೆ ಅಡುಗೆ ತಯಾರಿಸಲು ಗುಜರಾತಿ ಅಡುಗೆ ಕೆಲಸದವರನ್ನು ಕರೆತರಲಾಗುವುದು ಎಂದು ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.