ಬಿಜೆಪಿ ನಾಯಕರ ಡೈರಿಗಳನ್ನು ಬಿಡುಗಡೆ ಮಾಡಲಿ: ಡಿಕೆಶಿಗೆ ಶೋಭಾ ಸವಾಲು!
ತಮ್ಮ ಬಳಿಯಿರುವ ಬಿಜೆಪಿ ನಾಯಕರ ಡೈರಿಗಳನ್ನು ಬಿಡುಗಡೆ ಮಾಡಲು ಡಿ.ಕೆ ಶಿವಕುಮಾರ್ ಸ್ವತಂತ್ರರು. ತಪ್ಪಿತಸ್ಥರ ವಿರುದ್ಧ ಕಾನೂನು ...

Published On :
ಬೆಂಗಳೂರು; ನನ್ನ ಬಳಿಯೂ ಬಿಜೆಪಿ ಡೈರಿಗಳಿವೆ, ಸಮಯ ಬಂದಾಗ ಅವುಗಳನ್ನು ರಿಲೀಸ್ ಮಾಡುತ್ತೇನೆ ಎಂದು ಹೇಳಿದ್ದ ಸಚಿವ ಡಿ.ಕೆ ಶಿವಕುಮಾರ್ ಗೆ ಸಂಸದೆ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ತಮ್ಮ ಬಳಿಯಿರುವ ಬಿಜೆಪಿ ನಾಯಕರ ಡೈರಿಗಳನ್ನು ಬಿಡುಗಡೆ ಮಾಡಲು ಡಿ.ಕೆ ಶಿವಕುಮಾರ್ ಸ್ವತಂತ್ರರು. ತಪ್ಪಿತಸ್ಥರ ವಿರುದ್ಧ ಕಾನೂನು ಸೂಕ್ತ ಕ್ರಮ ಕೈಗೊಳ್ಳುತ್ತದೆ, ಈ ಸಬಂಧ ತನಿಖೆ ಕಾಂಗ್ರೆಸ್-ಜಡಿಎಸ್ ಸಮ್ಮಿಶ್ರ ಸರ್ಕಾರದ ತನಿಖೆಯನ್ನು ಯಾರೂ ತಡೆಯುವುದಿಲ್ಲ, ಬಿಜೆಪಿ ಡೈರಿಯ ತನಿಖೆ ನಡೆಸಲು ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರದಲ್ಲಿ ತಮ್ಮ ಪವರ್ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಕಳೆದ 5 ದಶಕಗಳಿಂಗ ಆದಾಯ ತೆರಿಗೆ ಇಲಾಖೆಗೆ ದಾಳಿ ಮಾಡಲು ಕಾಂಗ್ರೆಸ್ ಸರ್ಕಾರ ಅನಮತಿ ನೀಡಿತ್ತು, ಆದರೆ ಈಗ ಐಟಿ ಇಲಾಖೆ ದಾಳಿ ರಾಜಕೀಯ ಪ್ರೇರಿತ ಎಂದು ಡಿಕೆಶಿ ಅಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


