ಚುನಾವಣೆ ವ್ಯಾಪಾರವಾದರೆ ಆಡಳಿತ ವ್ಯವಸ್ಥೆಯೂ ವ್ಯಾಪಾರವಾಗುತ್ತದೆ: ಉಪ್ಪಿ ಟ್ವೀಟ್
ನಟ ಉಪೇಂದ್ರ ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

Published On :
ಬೆಂಗಳೂರು: ನಟ ಉಪೇಂದ್ರ ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಅವರು ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆ ಮಾಡಿದ್ದು ಆ ಪಕ್ಷವು ಚುನಾವಣಾ ಆಯೋಗದಲ್ಲಿ ನೊಂದಣಿಯಾಗಿದೆ ಎಂದು ಮೇ 10ರಂದು ಸಂತಸ ಹಂಚಿಕೊಂಡಿದ್ದರು.
ಮತ್ತೆ ಇದೀಗ ಚುನಾವಣೆ ವ್ಯಾಪಾರ ಆದಾಗ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ ಉಪ್ಪಿ ಹಾಗಾದಾರ ಶಿಕ್ಷಣ ವ್ಯವಸ್ಥೆ ವ್ಯಾಪಾರವಾಗುತ್ತದೆ, ಆರೋಗ್ಯ ವ್ಯವಸ್ಥೆ ವ್ಯಾಪಾರವಾಗುತ್ತದೆ, ಆಡಳಿತ ವ್ಯವಸ್ಥೆ ವ್ಯಾಪಾರವಾಗುತ್ತದೆ ಎನ್ನುತ್ತಾರೆ.
ಜತೆಗೆ ಈ ವ್ಯಾಪಾರ ರಾಜಕಾರಣ ಬೇಡ. ವಿಚಾರಗಳ ಪ್ರಜಾಕಾರಣ ಬೇಕು ಎಂದಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಹಿಂದೆ ತಾವೇ ಸ್ಥಾಪಿಸಿದ್ದ ಪ್ರಜಾಕೀಯ ಪಕ್ಷದಿಂದ ಹೊರಬಂದಿದ್ದರು. ಮತ್ತೆ ’ಉತ್ತಮ ಪ್ರಜಾಕೀಯ’ ಹೆಸರಿನ ಪಕ್ಷಕ್ಕೆ ಮಾನ್ಯತೆ ದೊರಕಿಸಿಕೊಳ್ಳಲು ದೆಹಲಿಗೆ ತೆರಳಿದ್ದ ಅವರು ಚುನಾವಣಾ ಆಯೋಗದಲ್ಲಿ ತಮ್ಮ ನೂತನ ಪಕ್ಷದ ನೊಂದಾವಣೆ ಮಾಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Upendraಉಪೇಂದ್ರelection businessadministrative systemuttama prajakiyaಚುನಾವಣಾ ವ್ಯಾಪಾರಆಡಳಿತಾತ್ಮಕ ವ್ಯವಸ್ಥೆಉತ್ತಮ ಪ್ರಜಾಕೀಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


