ಜಯನಗರದಲ್ಲಿ ಗೆದ್ದಿದ್ದು ಮಾಜಿ ಸಚಿವ ರಾಮಲಿಂಗಾರೆಡ್ಡಿ 'ಪ್ರತಿಷ್ಠೆ'!
ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಜಯ ಗಳಿಸುವ ಮೂಲಕ ಕಾಂಗ್ರೆಸ್ ನ ಸೌಮ್ಯ ರೆಡ್ಡಿ ಇತಿಹಾಸ ಸೃಷ್ಠಿಸಿದ್ದಾರೆ....

Published On :
ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಜಯ ಗಳಿಸುವ ಮೂಲಕ ಕಾಂಗ್ರೆಸ್ ನ ಸೌಮ್ಯ ರೆಡ್ಡಿ ಇತಿಹಾಸ ಸೃಷ್ಠಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಪ್ಪ-ಮಗಳ ಪ್ರವೇಶವಾಗಲಿದೆ.ಕಾಂಗ್ರೆಸ್ ಪಕ್ಷದ ಯಾವುದೇ ಹಿರಿಯ ನಾಯಕರು ಜಯನಗರ ಕ್ಷೇತ್ರದಲ್ಲಿ ಸೌಮ್ಯ ಪರ ಪ್ರಚಾರ ನಡೆಸಿರಲಿಲ್ಲ, ರಾಮಲಿಂಗಾ ರೆಡ್ಜಿ ಒಬ್ಬರೇ ಏಕಾಂಗಿಯಾಗಿ ಮಗಳ ಗೆಲುವಿಗಾಗಿ ಕೆಲಸ ಮಾಡಿದ್ದರು.
ಬಿಟಿಎಂ ಲೇಔಟ್ ಗೆ ಶಿಫ್ಟ್ ಆಗುವ ಮುನ್ನ ರಾಮಲಿಂಗಾ ರೆಡ್ಡಿ ಜಯನಗರದಿಂದ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಮಗಳು ಸೌಮ್ಯಾ ರೆಡ್ಡಿ ಗೆಲುವಿನಿಂದ ಕೇವಲ ಬಿಜೆಪಿಗೆ ಮಾತ್ರವಲ್ಲ ಸ್ವಪಕ್ಷ ಕಾಂಗ್ರೆಸ್ ಗೂ ರಾಮಲಿಂಗಾ ರೆಡ್ಡಿ ಸಾಮರ್ಥ್ಯ ತೋರಿದೆ.
ಜಯನಗರ ಕ್ಷೇತ್ರ ಚುನಾವಣೆ ರಾಮಲಿಂಗಾ ರೆಡ್ಡಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಸಿಗದೆ ಮುಖಭಂಗ ಅನುಭವಿಸಿದ್ದ ರೆಡ್ಡಿಗೆ ಈ ಗೆಲುವು ಮತ್ತಷ್ಟು ಶಕ್ತಿ ತುಂಬಿದೆ,. ಸಚಿವ ಸ್ಥಾನ ಸಿಗದಿದ್ದಕ್ಕೆ ಪಕ್ಷದ ಹಲವು ಹಿರಿಯ ಮುಖಂಡರು ಅಸಮಾಧಾನ ವ್ಯಕ್ತ ಪಡಿಸಿದ್ದರು, ಆದರೆ ರೆಡ್ಡಿ ಮಾತ್ರ ಯಾರ ವಿರುದ್ಧವೂ ಹೇಳಿಕೆ ನೀಡದೇ ಮೌನದಿಂದ ಇದ್ದರು. ಮಗಳನ್ನು ಗೆಲ್ಲಿಸುವ ಮೂಲಕ ರೆಡ್ಡಿ ತಮ್ಮ ಪ್ರಾಬಲ್ಯವನ್ನು ಇಮ್ಮಡಿಗೊಳಿಸಿದೆ,
ಜಯನಗರ ಕ್ಷೇತ್ರದ ಗೆಲುವು ಸೇರಿ ಕಾಂಗ್ರೆಸ್ ಶಾಸಕರ ಸಂಖ್ಯೆ 80 ಆಗಬೇಕಿತ್ತು. ಆದರೆ ಅಪಘಾತದಲ್ಲಿ ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮ ಗೌಡ ನಿಧನದಿಂದಾಗಿ 79 ಕ್ಕೆ ಇಳಿದಿದೆ,.
2013 ರಲ್ಲಿ ಬೆಂಗಳೂರಲ್ಲಿ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು, ಆದರೆ ಈ ಬಾರಿ, ಕೆ.ಜೆ ಜಾರ್ಜ್, ಜಮೀರ್ ಅಹ್ಮದ್ ಕೃಷ್ಣ ಬೈರೇಗೌಡ ಸಂಪುಟ ಸೇರಿದ್ದಾರೆ. ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕ ನಾನು ಅಸಮಾಧಾನ ಗೊಂಡಿಲ್ಲ, ಆದರ ಅಸಮಾನ ಗೊಂಡಿಲ್ಲ, ಆದರೆ ನಾನು ಅತೃಪ್ತ ಶಾಸಕರೊಂದಿಗೆ ಸೇರುತ್ತಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


