ಉದ್ಯೋಗ ಸೃಷ್ಟಿ, ಸುಗಮ ರಸ್ತೆ ಸಂಚಾರಕ್ಕೆ ನನ್ನ ಮೊದಲ ಆದ್ಯತೆ: ಸೌಮ್ಯಾ ರೆಡ್ಡಿ
ಶಾಸಕಿಯಾಗಿ ಆಯ್ಕೆಯಾಗುವುದಕ್ಕೂ ಮುನ್ನ ಸೌಮ್ಯ ರೆಡ್ಡಿ ಪರಿಸರ ಸಂಬಂಧಿ ವಿಷಯಗಳು ಹಾಗೂ ಪ್ರಾಣಿ ಹಕ್ಕು ವಿಷಯವಾಗಿ ಜಯನಗರ ಭಾಗದ ಜನ...

Published On :
ಬೆಂಗಳೂರು: ಶಾಸಕಿಯಾಗಿ ಆಯ್ಕೆಯಾಗುವುದಕ್ಕೂ ಮುನ್ನ ಸೌಮ್ಯ ರೆಡ್ಡಿ ಪರಿಸರ ಸಂಬಂಧಿ ವಿಷಯಗಳು ಹಾಗೂ ಪ್ರಾಣಿ ಹಕ್ಕು ವಿಷಯವಾಗಿ ಜಯನಗರ ಭಾಗದ ಜನರಿಗೆ ಚಿರ ಪರಿಚಿತರು.ಜಯನಗರ ವಿಧಾನಸಭೆ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿರುವ ಸೌಮ್ಯಾ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ನಿಮ್ಮ ತಂದೆಯ ಹಿಂದಿನ ಕ್ಷೇತ್ರಕ್ಕೆ ನೀವು ಶಾಸಕಿಯಾಗಿರುವುದು ಹೇಗೆ ಅನಿಸುತ್ತದೆ?
ನಿಜಕ್ಕೂ ನನಗೆ ತುಂಬಾ ಹೆಮ್ಮೆ ಹಾಗೂ ನಾನು ಆಬಾರಿಯಾಗಿದ್ದೇನೆ. ಇದು ಕೇವಲ ನನ್ನ ಗೆಲುವು ಮಾತ್ರವಲ್ಲ, ಪಕ್ಷದ ಕಾರ್ಯಕರ್ತರ ಗೆಲುವು, ಜಯನಗರದ ಜನತೆ ಹಾಗೂ ನನ್ನ ತಂದೆ ಮತ್ತು ಪಕ್ಷದ ಮುಖಂಡರ ಗೆಲುವಾಗಿದೆ. ಜಯನಗರವನ್ನು ಮಾದರಿ ಕ್ಷೇತ್ರವಾಗಿಸುವುದೇ ನನ್ನ ಉದ್ದೇಶ
ನಿಮ್ಮ ಪರವಾಗಿ ಕೆಲಸ ಮಾಡಿದ ಅಂಶ ಯಾವುದು?
ನನ್ನ ತಂದೆ ಈ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ್ದಾರೆ, ಅವರು ಬೇರೆ ಕ್ಷೇತ್ರಕ್ಕೆ ಹೋದರೂ ಕೂಡ ಇಲ್ಲಿನ ಜನರ ಜೊತೆ ನನ್ನ ತಂದೆ ಸಂಪರ್ಕದಲ್ಲಿದ್ದರು. ಬೆಂಬಲಿಗರ ಅವಿರತ ಶ್ರಮ ಪಕ್ಷದ ನಾಯಕರ ಕಾರ್ಯಕರ್ತರ ಕೆಲಸದಿಂದಾಗಿ ನನ್ನ ಗೆಲುವು ಸಾಧ್ಯವಾಯಿತು. ಮಹಿಳಾ ವಿಷಯಗಳು ಪರಿಸರ ಮತ್ತು ಮಾನವ ಹಕ್ಕುಗಳ ಸಂಬಂಧ ನಾನು ಮಾಡಿದ ಕೆಲಸವನ್ನು ಇಲ್ಲಿನ ಜನ ಗುರುತಿಸಿದ್ದಾರೆ,
ಸಾಮಾಜಿಕ ಕಾರ್ಯಕರ್ತೆಯಾಗಿ ನೀವು ಮಾಡಿರುವ ಕೆಲಸ ಸಕರಾತ್ಮಕ ಇಮೇಜ್ ಗೆ ಕಾರಣವಾಯಿತೆ?
ಕಳೆದ 15 ವರ್ಷಗಳಿಂದ ನಾನು ಮಾಡಿರುವ ಕೆಲಸ ಹಾಗೂ ನನ್ನ ಸಾಮರ್ಥ್ಯ ನೋಡಿ ಪಕ್ಷ ನನಗೆ ಟಿಕೆಟ್ ನೀಡಿದ್ದು, ನನ್ನ ಕೆಲಸಗಳು ನನ್ನ ಗೆಲುವಿಗೆ ಸಹಾಯ ಮಾಡಿವೆ.
ಜಯನಗರದ ಬಗ್ಗೆ ನಿಮ್ಮ ದೃಷ್ಠಿಯೇನು?
ಒಬ್ಬ ಮಹಿಳೆಯಾಗಿ ನನ್ನ ಮುಂದೆ ಹಲವು ಸಮಸ್ಯೆಗಳಿವೆ, ಕಳೆದ 1 ವರ್ಷದಿಂದ ಈ ಭಾಗದ ಜನರ ಜೊತೆ ಕಾಲ ಕಳೆದಿದ್ದೇನೆ. ವಾರ್ಡ್ ಮಟ್ಟದಲ್ಲಿ ಹಲವು ಸಮಸ್ಯೆಗಳನ್ನು ಗುರುತಿಸಿದ್ದೇನೆ. ಯುವಕರಿಗೆ ನಿರುದ್ಯೋಗ ಸಮಸ್ಯೆ ಹೆಚ್ಚಿದೆ, ಗುಂಡಿಗಳು, ರಸ್ತೆ ಸಂಚಾರ ಸಮಸ್ಯೆ, ಸಾರ್ವಜನಿಕ ಆಸ್ಪತ್ರೆ ಶಾಲೆ ಕಾಲೇಜುಗಳ ಕಟ್ಟಡಗಳನ್ನು ಮೇಲ್ಜರ್ಜಗೇರಿಸಬೇಕು. ಹಸಿರನ್ನು ಸಂರಕ್ಷಿಸಿ, ಘನ ತ್ಯಾಜ್ಯ ನಿರ್ವಹಣೆ, ನನ್ನ ಕರ್ತವ್ಯವಾಗಿದೆ, ಜಯನಗರವನ್ನು ಕಸಮುಕ್ತ ಕ್ಷೇತ್ರವಾಗಿಸುವುದಕ್ಕೆ ನನ್ನ ಆದ್ಯತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MLAರಾಮಲಿಂಗಾ ರೆಡ್ಡಿSowmya Reddyಸೌಮ್ಯಾ ರೆಡ್ಡಿJayanagar assembly constituency.Rama lingareddyಜಯನಗರ ವಿಧಾನಸಊೆ ಕ್ಷೇತ್ರಶಾಸಕಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


