ರಾಜಕೀಯ

'ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಅವರು ಕೊಟ್ಟದ್ದನ್ನು ಸ್ವೀಕರಿಸಲು ನಾನು 2ನೇ ದರ್ಜೆ ನಾಗರಿಕನಲ್ಲ'

ಸಚಿವ ಸ್ಥಾನ ವಂಚಿತರಾಗಿರುವ ಮಾಜಿ ಸಚಿವ ಎಂ ಬಿ ಪಾಟೀಲ್ ಅವರ ಸದಾಶಿವ ನಗರದ ಮನೆಯಲ್ಲಿ ನಿನ್ನೆ ಅತೃಪ್ತ ಶಾಸಕರ ಸಭೆ ನಡೆಯಿತು....

'ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಅವರು ಕೊಟ್ಟದ್ದನ್ನು ಸ್ವೀಕರಿಸಲು ನಾನು 2ನೇ ದರ್ಜೆ ನಾಗರಿಕನಲ್ಲ'
ಕಾಂಗ್ರೆಸ್ ಅತೃಪ್ತ ನಾಯಕರು
Published On :
ಬೆಂಗಳೂರು:  ಸಚಿವ ಸ್ಥಾನ ವಂಚಿತರಾಗಿರುವ ಮಾಜಿ ಸಚಿವ ಎಂ ಬಿ ಪಾಟೀಲ್ ಅವರ ಸದಾಶಿವ ನಗರದ ಮನೆಯಲ್ಲಿ ನಿನ್ನೆ ಅತೃಪ್ತ ಶಾಸಕರ ಸಭೆ ನಡೆಯಿತು. ಬಬಲೇಶ್ವರ ಶಾಸಕ ಎಂ ಬಿ ಪಾಟೀಲ್ ಈಗ ಎಲ್ಲಾ ಚಟುವಟಿಕೆಗಳ ಕೇಂದ್ರ ಬಿಂದುವಾಗಿದ್ದಾರೆ.
ಪಾಟೀಲ್ ಮನೆಯಲ್ಲಿ ನಿನ್ನೆ ದಿನ ಪೂರ್ತಿ ಹಲವು ಸಭೆಗಳು ನಡೆದಿವೆ, ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ,  ರೋಷನ್ ಬೇಗ್, ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್ ಸೇರಿದಂತೆ ಸಚಿವ ಸ್ಥಾನ ವಂಚಿತರಾದ ಹಲವು ಶಾಸಕರು ಪಾಟೀಲ್ ಮನೆಯಲ್ಲಿ ಸಭೆ ನಡೆಸಿದರು. ಮುಂದಿನ ದಿನಗಳಲ್ಲಿ ಯಾವುದೇ ಜವಾಬ್ದಾರಿ ನೀಡಿದರೂ ತಾವು ಸ್ವೀಕರಿಸುವುದಿಲ್ಲ ಎಂದು ಪಾಟೀಲ್ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.
ಪಟ್ಟಿಯಲ್ಲಿದ್ದ ತಮ್ಮ ಹೆಸರನ್ನು ಕೊನೆ ಗಳಿಗೆಯಲ್ಲಿ ತೆಗೆದು ಹಾಕಲಾಗಿದೆ. ಇದರ ಹಿಂದೆ ಯಾರದೋ ಕೈವಾಡವಿದೆ ಎಂದು ಸತೀಶ್ ಜಾರಕಿಹೊಳಿ ಮತ್ತು ಸುಧಾಕರ್ ಆರೋಪಿಸಿದ್ದಾರೆ ಸಂಪುಟ ವಿಸ್ತರಣೆಯಾಗಿ ಒಂದು ದಿನ ಕಳೆದ ನಂತರ ಶಾಸಕ ಕೆ. ಸುಧಾಕರ್ ನೇರವಾಗಿ ಡಿಸಿಎಂ ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮಗೆ ಬೇಕಾದವರನ್ನು ಮಾತ್ರ ಪರಮೇಶ್ವರ್ ಕ್ಯಾಬಿನೆಟ್ ಗೆ ಸೇರಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ನನಗೆ ಮೋಸಹೋದ ಅನುಭವಾವಗುತ್ತಿದೆ ಎಂದು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಆರೋಪಿಸಿದ್ದಾರೆ, ತಮಗೆ ಸಚಿವ ಸ್ಥಾನ ನೀಡುವುದಾಗಿ ಪಕ್ಷದ ಹೈಕಮಾಂಡ್ ಭರವಸೆ ನೀಡಿದ್ದಾಗಿ ಅವರರು ಹೇಳಿದ್ದಾರೆ.
ಮಧ್ಯಾಹ್ನದ ನಂತರವು ಅತೃಪ್ತ ನಾಯಕರು ಪಾಟೀಲ್ ಜೊತೆ ಮಾತುಕತೆ ನಡೆಸಿದರು. ಇದೇ ವೇಳೆ ಅತೃಪ್ತರನ್ನು ಸಮಾಧಾನ ಪಡಿಸಲು ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹಮದ್  ಹಾಗೂ ದಿನೇಶ್ ಗುಂಡೂರಾವ್ ಪ್ರಯತ್ನಿಸಿದರು. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ನಾಯಕರಿಗೆ ಡಿಸಿಎಂ ಪರಮೇಶ್ವರ್ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದರು.
ಸಚಿವ ಸ್ಥಾನ ಸಿಗದಿದ್ದಕ್ಕೆ ಎಚ್ .ಕೆ ಪಾಟೀಲ್ ಅಸಮಾಧಾನಗೊಂಡಿಲ್ಲ, ಬದಲಿಗೆ ಅವರಿಗೆ ತಮ್ಮನ್ನು ಏಕೆ ಸಂಪುಟದಿಂದ ಕೈ ಬಿಡಲಾಗಿದೆ ಎಂಬ ಗೊಂದಲದಲ್ಲಿದ್ದಾರೆ ಎಂದು ಸಚಿವ ಆರ್ ವಿ ದೇಶಪಾಂಡೆ ಹೇಳಿದ್ದಾರೆ.
ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಯಾವುದೇ ರೀತಿಯ ಜವಾಬ್ದಾರಿ ನೀಡಿದರೂ ನಾನು ಅದನ್ನು ಸ್ವೀಕರಿಸುವುದಿಲ್ಲ, ನಾನು ಎರಡನೇ ದರ್ಜೆ ಪ್ರಜೆಯಲ್ಲ, ನಾನು ಯಾವುದೇ ಹುದ್ದೆಯ ಆಕಾಂಕ್ಷಿಯೂ ಅಲ್ಲ ಎಂದಪ ಪಾಟೀಲ್ ಹೇಳಿದ್ದಾರೆ. ಇಬ್ಬರನ್ನು ಡಿಸಿಎಂ ಮಾಡಿ ಎಂಬ ತಮ್ಮ ಪ್ರಸ್ತಾಪವನ್ನು ಹೈ ಕಮಾಂಡ್ ಒಪ್ಪಲಿಲ್ಲ ಎಂದು ಅವರು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ 3ತಿಂಗಳು ಉಳಿಯುವುದಿಲ್ಲ: ಶಾಸಕ ಸುಧಾಕರ್
ಪಕ್ಷದ ಹಿತಾಸಕ್ತಿ ಬದಿಗೊತ್ತಿ ವಯಕ್ತಿಕ ಹಿತಾಸಕ್ತಿಯಿಂದ ಸಂಪುಟ ವಿಸ್ತರಣೆ ಮಾಡಲಾಗಿದೆ. ನನಗೆ ಸಚಿವ ಸ್ಥಾನ ನೀಡುವುದಕ್ಕೆ ಡಿಸಿಎಂ ಪರಮೇಶ್ವರ್ ವಿರೋಧ ವ್ಯಕ್ತ ಪಡಿಸಿದ್ದಾರೆ. ಈ ಸಮ್ಮಿಶ್ರ ಸರ್ಕಾರ ಮೂರು ತಿಂಗಳು ಬಾಳುವುದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.