ರಾಜಕೀಯ

ಅತೃಪ್ತ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬನ್ನಿ, ಮೋದಿಯವರ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿ: ಕೆಎಸ್ ಈಶ್ವರಪ್ಪ

ಸಚಿವ ಸ್ಥಾನ ಸಿಕ್ಕದೆ ಅತೃಪ್ತಿಯಂದಿರುವ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಬಹುದು ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಶಿವಮೊಗ್ಗ ನಗರ ಶಾಸಕರಾಗಿರುವ ಕೆ. ಎಸ್. ಈಶ್ವರಪ್ಪ ಆಹ್ವಾನ ನಿಡಿದ್ದಾರೆ.

ಅತೃಪ್ತ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬನ್ನಿ, ಮೋದಿಯವರ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಿ:  ಕೆಎಸ್ ಈಶ್ವರಪ್ಪ
ಕೆ ಎಸ್ ಈಶ್ವರಪ್ಪ
Published On :
ಶಿವಮೊಗ್ಗ: ಸಚಿವ ಸ್ಥಾನ ಸಿಕ್ಕದೆ ಅತೃಪ್ತಿಯಂದಿರುವ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಬಹುದು ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಶಿವಮೊಗ್ಗ ನಗರ ಶಾಸಕರಾಗಿರುವ ಕೆ. ಎಸ್. ಈಶ್ವರಪ್ಪ ಆಹ್ವಾನ ನಿಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಈಶ್ವರಪ್ಪ "ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಗೊಂದಲದಲ್ಲಿ ಮುಕ್ತಾಯ ಕಂಡಿದೆ. ಈ ಸಮಯದಲ್ಲಿ ಕಾಂಗ್ರೆಸ್ ಒಂದು ಹಾಸ್ಯದೃಶ್ಯದ ಭಾಗವಾಗಿದೆ." ಎಂದು ವ್ಯಂಗ್ಯವಾಡಿದ್ದಾರೆ.
"ಬಹುಮತವನ್ನು ಸಾಬೀತುಪಡಿಸುವ ಸಮಯದಲ್ಲಿ ಬಿಎಸ್‌ವೈನೇತೃತ್ವದ ಬಿಜೆಪಿ ಸರ್ಕಾರವನ್ನು ಬೆಂಬಲಿಸುವುದಾಗಿ ಕೆಲವು ಕಾಂಗ್ರೆಸ್ ಶಾಸಕರು ಭರವಸೆ ನೀಡಿದ್ದರು. ಆದರೆ ಅವರು ’ಅಕ್ಷರಶಃ ಲಾಕ್’ ಆಗಿದ್ದರು. ಅಲ್ಲದೆ ವಿಶ್ವಾಸಮತ ಯಾಚನೆಯನ್ನು ಒಂದೇ ದಿನದಲ್ಲಿ ಗಳಿಸಲು ಸಾಧ್ಯವಾಗುಗಲಿಲ್ಲ" ಈಶ್ವರಪ್ಪ ಹೇಳಿದ್ದಾರೆ.
ಬಹುತೇಕ ಕಾಂಗ್ರೆಸ್ ಶಾಸಕರು ತಮಗೆ ’ಮಂತ್ರಿಗಿರಿ’ ತಪ್ಪಿದ ಕಾರಣದಿಂದ ಅಸಮಾಧಾನಗೊಂಡಿದ್ದಾರೆ ಎಂದ ಈಶ್ವರಪ್ಪ " ಅಸಮಾಧಾನ ಹೊಂದಿದ ಕಾಂಗ್ರೆಸ್ ಶಾಅಸಕರು ನಿರಾಶರಾಗುವ ಅಗತ್ಯವಿಲ್ಲ. ಅವರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ನೆರವಾಗಬೇಕು. ಆ ಮೂಲಕ ಪ್ರಧಾನಿ ಮೋದಿ ಅವರ ರಾಜ್ಯ, ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕು" ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.