ರಾಜಕೀಯ

ನೀವು ನನ್ನನ್ನು ನೆನೆದದ್ದು ಒಳ್ಳೆಯದು, ಆದರೆ ಬಸವಣ್ಣನವರ ಬೋಧನೆಗಳನ್ನು ಅನುಸರಿಸಿ: ಪ್ರಧಾನಿಗೆ ಸಿಎಂ ಸಿದ್ದು

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸಂಸತ್ತಿನಲ್ಲಿ 12 ಶತಮಾನದ ಸಾಮಾಜಿಕ ಸುಧಾರಕರಾದ ಬಸವಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಮಾತನಾಡಿದ್ದರು...

ನೀವು ನನ್ನನ್ನು ನೆನೆದದ್ದು ಒಳ್ಳೆಯದು, ಆದರೆ ಬಸವಣ್ಣನವರ ಬೋಧನೆಗಳನ್ನು ಅನುಸರಿಸಿ: ಪ್ರಧಾನಿಗೆ ಸಿಎಂ ಸಿದ್ದು
ಸಿದ್ದರಾಮಯ್ಯ
Published On :
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸಂಸತ್ತಿನಲ್ಲಿ 12 ಶತಮಾನದ ಸಾಮಾಜಿಕ ಸುಧಾರಕರಾದ ಬಸವಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ಮಾತನಾಡಿದ್ದರು. 
ಈ ಕುರಿತಂತೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ನನ್ನನ್ನು ನೆನೆದದ್ದು ಒಳ್ಳೆಯದ್ದು, ಅದರೇ ರೀತಿ ಸಾಮಾಜಿಕ ಸುಧಾರಕರಾದ ಬಸವಣ್ಣನವರ ಬೋಧನೆಗಳ ಬಗ್ಗೆ ಪ್ರಸ್ತಾಪಿಸಿದ್ದೀರಿ. ಪ್ರಧಾನ ಮಂತ್ರಿಗಳು ಬಸವಣ್ಣನವರನ್ನು ನೆನೆದರೇ ಸಾಲದು ಅವರ ಬೋಧನೆಗಳನ್ನು ಅನುಸರಿಸಬೇಕು. ಪ್ರಧಾನಿ ಬಸವಣ್ಣನವರ ಬೋಧನೆಗಳನ್ನು ಅನುಸರಿಸಿದಲ್ಲಿ ಕನ್ನಡಿಗರು ಕೃತಜ್ಞರಾಗಿರುತ್ತಾರೆ ಎಂದು ಟ್ವೀಟಿಸಿದ್ದಾರೆ.
ಸಂಪತ್ತು ಹೊಂದಿರುವವರು ದೇವಾಲಯಗಳನ್ನು ನಿರ್ಮಿಸುತ್ತಾರೆ. ಬಡವನಾದವನು ಏನು ಮಾಡಬೇಕು? ಎಂದು ಬಸವಣ್ಣನವರು ಬೋಧಿಸಿದ್ದಾರೆ. ಇಂತಹ ಬೋಧನೆಗಳನ್ನು ನೀವು ಅನುಸರಿಸುವುದಾದರೆ ಕನ್ನಡಿಗರು ನಿಮಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ 90 ನಿಮಿಷಗಳ ಕಾಲ ಮಾತನಾಡಿದ್ದರು. ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇಷ್ಟೇ ಅಲ್ಲದೆ ದೇಶದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರಿಂದ ಹಿಡಿದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆವರೆಗೆ ಎಲ್ಲರ ಕುರಿತು ಆರೋಪಗಳನ್ನು ಮಾಡಿದ್ದರು. ಅಲ್ಲದೆ ಸಂಸತ್ತಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹಿಂದಿನ ಶಹರಿಯೊಂದಕ್ಕೆ ಅದೇ ಶಹರಿಯ ಮೊದಲ ಎರಡು ಸಾಲುಗಳನ್ನು ಹೇಳುತ್ತಾ ಈ ಶಹರಿಯನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಳಬೇಕು ಎಂದು ಹೇಳಿದ್ದರು. 
ಕಾಂಗ್ರೆಸ್ ಭವಿಷ್ಯವನ್ನು ಪ್ರಧಾನಿ ಮೋದಿ ಅಥವಾ ಶಾ ಅವರು ನಿರ್ಧರಿಸಲು ಸಾಧ್ಯವಿಲ್ಲ: ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಮಾತಿನ ಸಮರ ಮುಂದುವರೆದಿದ್ದು ನಿನ್ನೆ ಲೋಕಸಭೆಯಲ್ಲಿ ಮೋದಿ ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಪ್ರಸ್ತಾಪಿಸಿದ್ದರು. ಇದೇ ವೇಳೆ ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಈ ಚುನಾವಣೆ ಬಳಿಕ ಎಲ್ಲಿರುತ್ತಾರೋ ತಿಳಿಯದು. ಅದು ಅವರ ಕೊನೆಯ ಭಾಷಣವಾಗಿರಬಹುದು. ಒಂದು ಕುಟುಂಬವನ್ನು ಬೆಂಬಲಿಸುವ ಮೂಲಕ ಸಂಸತ್ತಿನಲ್ಲಿ ನಿಮ್ಮ ಸ್ಥಳವನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದ್ದರು. 
ಈ ಕುರಿತಂತೆ ಮಾತನಾಡಿರುವ ಸಿದ್ದರಾಮಯ್ಯನವರು ರಾಜ್ಯದಲ್ಲಿ ಕಾಂಗ್ರೆಸ್ ಭವಿಷ್ಯವನ್ನು ನಿರ್ಧರಿಸುವವರು ರಾಜ್ಯದ ಜನತೆ ಹೊರತು ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಲ್ಲ. ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಮಾಡುವುದು ಬಿಜೆಪಿ ನಾಯಕರ ಭ್ರಮೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.